HOME » NEWS » Coronavirus-latest-news » CM BS YEDDYURAPPA CLARIFIED THE KERALA KARNATAKA BORDER CLOSE MAK

ಕಾಸರಗೋಡಿನ ಅಂತಃಕರಣಕ್ಕಿಂತ ಕನ್ನಡ ನಾಡಿನ ಶಾಂತಿ ನೆಮ್ಮದಿ ನನಗೆ ಮುಖ್ಯ; ಕೇರಳ ಗಡಿ ಬಂದ್ ಸಮರ್ಥಿಸಿಕೊಂಡ ಬಿಎಸ್‌ವೈ

ಮಾನವೀಯತೆಯೆ ಆಧಾರದಲ್ಲಿ ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತೆರೆಯಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದರು. ಅಲ್ಲದೆ, ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಸಹ ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.

MAshok Kumar | news18-kannada
Updated:April 5, 2020, 9:30 AM IST
ಕಾಸರಗೋಡಿನ ಅಂತಃಕರಣಕ್ಕಿಂತ ಕನ್ನಡ ನಾಡಿನ ಶಾಂತಿ ನೆಮ್ಮದಿ ನನಗೆ ಮುಖ್ಯ; ಕೇರಳ ಗಡಿ ಬಂದ್ ಸಮರ್ಥಿಸಿಕೊಂಡ ಬಿಎಸ್‌ವೈ
ದೇವೇಗೌಡ-ಬಿಎಸ್​ ಯಡಿಯೂರಪ್ಪ
  • Share this:
ಬೆಂಗಳೂರು (ಏಪ್ರಿಲ್ 05); ಕೇರಳ-ಕರ್ನಾಟಕ ರಾಷ್ಟ್ರೀಯ ಹೆದ್ದಾರಿಯನ್ನು ರಾಜ್ಯ ಸರ್ಕಾರ ಮುಚ್ಚಿರುವುದು ಕಳೆದ ಒಂದು ವಾರದಿಂದ ದೊಡ್ಡ ಮಟ್ಟದ ಸುದ್ದಿಯಾಗುತ್ತಿದೆ. ಈ ಕುರಿತ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, “ನನಗೆ ಕಾಸರಗೋಡಿನ ಜನರ ಕುರಿತ ಮಾನವೀಯತೆ, ಅಂತಃಕರಣಕ್ಕಿಂತ ರಾಜ್ಯದ ಜನರ ಶಾಂತಿ ನೆಮ್ಮದಿ ಮುಖ್ಯ” ಎಂದು ಉತ್ತರಿಸಿದ್ದಾರೆ.

ಕಾಸರಗೋಡು ಕರ್ನಾಟಕಕ್ಕೆ ತುಂಬಾ ಹತ್ತಿರವಾದ ಕೇರಳದ ಜಿಲ್ಲೆ. ಕಾಸರಗೋಡಿಗಿಂತ ನೆರೆಯ ಮಂಗಳೂರಿನಲ್ಲಿ ಅತ್ಯುತ್ತಮ ಹೈಟೆಕ್ ಆಸ್ಪತ್ರೆಗಳು ಹಾಗೂ ಉತ್ತಮ ಚಿಕಿತ್ಸೆ ಸಿಗುವ ಭರವಸೆಯಲ್ಲಿ ದಶಕಗಳಿಂದ ಕಾಸರಗೋಡಿನ ಜನ ವೈದ್ಯಕೀಯ ಚಿಕಿತ್ಸೆಗೆ ಇಲ್ಲಿಗೆ ಆಗಮಿಸುತ್ತಿದ್ದಾರೆ. ಆದರೆ, ಕೊರೋನಾ ವೈರಸ್ ಭೀತಿಯಿಂದಾಗಿ ಅಂತಾರಾಜ್ಯ ಗಡಿಯನ್ನು ಮುಚ್ಚಲಾಗಿದೆ.

ಹೀಗಾಗಿ ಗಡಿ ದಾಟಿ ಕರ್ನಾಟಕದ ಒಳಗೆ ಬರಲು ಯಾವುದೇ ವಾಹನಗಳಿಗೆ ಅವಕಾಶ ನೀಡಲಾಗುತ್ತಿಲ್ಲ. ಪರಿಣಾಮ ಕಳೆದ ಒಂದು ವಾರದಲ್ಲಿ 4ಜನ ರೋಗಿಗಳು ಕಾಸರಗೋಡಿನಿಂದ ಗಡಿ ದಾಟಿ ಚಿಕಿತ್ಸೆ ಪಡೆಯಲಾಗದೆ ಮೃತಪಟ್ಟಿದ್ದಾರೆ.

ಕಳೆದ ವಾರ ಗಡಿದಾಟುವ ಅವಕಾಶ ಸಿಗದ ಕಾರಣ ಓರ್ವ ಮಹಿಳೆ ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಲ್ಪಾಡಿಯಲ್ಲಿ ಆಂಬ್ಯುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿದ್ದರು. ಈ ವಿಚಾರ ಸಹ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೂ, ಚಿಕಿತ್ಸೆಗೆಂದು ಬರುವ ರೋಗಿಗಳಿಗೂ ಗಡಿ ದಾಟಲು ಅವಕಾಶ ನೀಡಿರಲಿಲ್ಲ.

ಹೀಗಾಗಿ ಮಾನವೀಯತೆಯೆ ಆಧಾರದಲ್ಲಿ ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತೆರೆಯಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದರು. ಅಲ್ಲದೆ, ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಸಹ ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.ಆದರೆ, ಇದಕ್ಕೆ ಪತ್ರದ ಮುಖೇನವೇ ಉತ್ತರ ನೀಡಿರುವ ಸಿಎಂ ಯಡಿಯೂರಪ್ಪ, “ದೇಶದಲ್ಲಿ ಅತಿಹೆಚ್ಚು ಕೊರೋನಾ ಸೋಂಕು ಹರಡಿರುವ ಜಿಲ್ಲೆಗಳ ಪೈಕಿ ಕಾಸರಗೋಡು ಸಹ ಒಂದು. ಹೀಗಾಗಿ ಭಾರತೀಯ ವೈದ್ಯಕೀಯ ಸಮಿತಿ ಸೇರಿದಂತೆ ಆರೋಗ್ಯ ಸಂಬಂಧಿ ಸಂಸ್ಥೆಗಳೂ ಗಡಿ ಭಾಗಗಳನ್ನು ಕಟ್ಟುನಿಟ್ಟಾದ ದಿಗ್ಭಂಧನಕ್ಕೆ ಒಳಪಡಿಸಬೇಕೆಂದು ಅಭಿಪ್ರಾಯಪಟ್ಟಿವೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಗಡಿಯನ್ನು ಬಂದ್ ಮಾಡಿದೆ.

ಮಾನವೀಯ ನೆಲೆಯಲ್ಲಿ ಕೇರಳದ ಸಹೋದರ-ಸೋದರಿಯರ ಆರೋಗ್ಯ ಕಾಪಾಡಬೇಕೆಂಬ ಕಳಕಳಿ ನನಗೂ ಇದೆ. ಆದರೆ, ಅಂತಃಕರಣದ ನೆಲೆಯಲ್ಲಿ ನಿರ್ಧಾರ ಕೈಗೊಂಡರೆ ರಾಜ್ಯದ ಜನರ ಶಾಂತಿ-ನೆಮ್ಮದಿ ಹಾಳಾಗಲಿದೆ” ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ : ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಚಿಕಿತ್ಸೆಗೆ ಮಾತ್ರ ಮುಕ್ತಗೊಳಿಸಿ; ಸಿದ್ದರಾಮಯ್ಯ ಮನವಿ
First published: April 5, 2020, 9:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories