ಸಿಎಂ ಕೇಜ್ರಿವಾಲ್-ಪ್ರಧಾನಿ ಮೋದಿ ಭೇಟಿ: ದೆಹಲಿ ಹಿಂಸಾಚಾರ ಮತ್ತು ಕೊರೋನಾ ವೈರಸ್​​ ಬಗ್ಗೆ ಚರ್ಚೆ

ದೆಹಲಿ ಹಿಂಸಾಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಜನರಿಗಾಗಿ ಕೇಂದ್ರ ಮತ್ತು ದೆಹಲಿ ಸರ್ಕಾರ ಒಟ್ಟಿಗೆ ಕೆಲಸ ಮಾಡುವ ಶಪಥ ಮಾಡಿದ್ದೇವೆ. ಹಿಂಸಾಚಾರ ಸೃಷ್ಟಿಸಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರಧಾನ ಮಂತ್ರಿಗೆ ಮನವಿ ಮಾಡಿದ್ದೇನೆ ಎಂದರು ಸಿಎಂ ಕೇಜ್ರಿವಾಲ್.

ಪ್ರಧಾನಿ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್.

ಪ್ರಧಾನಿ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್.

 • Share this:
  ನವದೆಹಲಿ(ಮಾ.03): ಇತ್ತೀಚೆಗಿನ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಅರವಿಂದ ಕೇಜ್ರಿವಾಲ್ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಆರಂಭದಿಂದಲೂ ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರುತ್ತಲೇ ಬಂದಿದ್ದ ಸಿಎಂ ಅರವಿಂದ್​​ ಕೇಜ್ರಿವಾಲ್ ಈಗೀಗ ಯಾಕೋ ಮೃದು ಧೋರಣೆ ಅನುಸರಿಸುತ್ತಿದ್ದಾರೆ. ಅಧಿಕಾರ ಹಂಚಿಕೆ ಮತ್ತು ಕೇಂದ್ರದ ಹಸ್ತಕ್ಷೇಪ ಕುರಿತು ಬಹಿರಂಗವಾಗಿಯೇ ಮಾತಾಡುತ್ತಿದ್ದ ಕೇಜ್ರಿವಾಲ್​​ ಮೂರನೇ ಬಾರಿಗೆ ಗದ್ದುಗೆ ಹಿಡಿದ ಬಳಿಕ ಹಳೆಯದ್ದನ್ನು ಮರೆತು ದೆಹಲಿ ಅಭಿವೃದ್ದಿಗಾಗಿ ಬಿಜೆಪಿಯೊಂದಿಗೆ ಕೈಜೋಡಿಸುವ ಮುನ್ಸೂಚನೆ ನೀಡಿದ್ದರು. ಇದರ ಸಂಬಂಧ ಹಿಂದೆಯೇ ಅಮಿತ್​​ ​ಶಾರನ್ನು ಭೇಟಿಯಾಗಿ ಚರ್ಚಿಸಿದ್ದರು. ಈ ಬೆನ್ನಲ್ಲೀಗ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದ ಕೇಜ್ರಿವಾಲ್​​​, ದೆಹಲಿ ಹಿಂಸಾಚಾರ ಮತ್ತು ಕೊರೋನಾ ವೈರಸ್ ಕುರಿತಂತೆ ಚರ್ಚೆ ನಡೆಸಿದ್ದಾರೆನ್ನಲಾಗಿದೆ.

  ಇಂದು ಮಂಗಳವಾರ ಸಿಎಂ ಅರವಿಂದ್​​ ಕೇಜ್ರಿವಾಲ್​​ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆಯಿಂದ ಸಂಭವಿಸಿದ ದೆಹಲಿ ಹಿಂಸಾಚಾರದ ಬಗ್ಗೆಯೂ ಪ್ರಧಾನಿಯೊಂದಿಗೆ ಕೇಜ್ರಿವಾಲ್​​​​ ಚರ್ಚಿಸಿದ್ದಾರೆ. ಜತೆಗೆ ಇಡೀ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಮಾರಣಾಂತಿಕ ಕೊರೋನಾ ವೈರಸ್‌ ಸೋಂಕು ಹರಡದಂತೆ ಕ್ರಮ ಕೈಗೊಳ್ಳುವುದರ ಕುರಿತು ಚರ್ಚೆ ನಡೆಸಿದರು ಎನ್ನಲಾಗುತ್ತಿದೆ.

  ಸಂಸತ್​​ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಅರವಿಂದ್​​ ಕೇಜ್ರಿವಾಲ್​​, ಇದೊಂದು ಸೌಹಾರ್ದಯುತ ಭೇಟಿ. ದೆಹಲಿ ಹಿಂಸಾಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಜನರಿಗಾಗಿ ಕೇಂದ್ರ ಮತ್ತು ದೆಹಲಿ ಸರ್ಕಾರ ಒಟ್ಟಿಗೆ ಕೆಲಸ ಮಾಡುವ ಶಪಥ ಮಾಡಿದ್ದೇವೆ. ಹಿಂಸಾಚಾರ ಸೃಷ್ಟಿಸಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರಧಾನ ಮಂತ್ರಿಗೆ ಮನವಿ ಮಾಡಿದ್ದೇನೆ ಎಂದರು.

  ಇದನ್ನೂ ಓದಿ: ಸಿಎಂ ಕೇಜ್ರಿವಾಲ್​​​-ಅಮಿತ್​​ ಶಾ ಮೊದಲ ಭೇಟಿ: ದೆಹಲಿ ಅಭಿವೃದ್ದಿಗೆ ಒಟ್ಟಾಗಿ ಕೆಲಸ ಮಾಡುವ ಶಪಥ

  ಈ ಹಿಂದೆಯೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇದಕ್ಕಾಗಿ ಸಿಎಂ ಅರವಿಂದ್​​ ಕೇಜ್ರಿವಾಲ್​​ ಪ್ರಧಾನಿಗಳ ಬಳಿ ಸಮಯ ಕೇಳಿದ್ದರು. ಅದರತೆಯೇ ಈಗ ಭೇಟಿ ಮಾಡಿ ಉಭಯ ನಾಯಕರು ಮಾತುಕತೆ ನಡೆಸಿದ್ಧಾರೆ. ಇದು ಇಬ್ಬರು ನಾಯಕರ ನಡುವಿನ ಸೌಹಾರ್ದಯುತ ಭೇಟಿಯಾಗಿದೆ. ಇಲ್ಲಿಯವರೆಗೂ ಹಾವು ಮುಂಗುಸಿಯಂತೆ ಕಿತ್ತಾಡುತ್ತಾ ಬಂದಿದ್ದ ಇವರು ಈಗ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

  ಇತ್ತೀಚೆಗೆ ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ವಿಭಿನ್ನ ಕಾರ್ಯಕ್ರಮದಲ್ಲಿ ಸಿಎಂ ಆಗಿ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸಿದರು. ಆಗ “ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಅವರಿಗೆ ಬರಲಾಗಿಲ್ಲ. ಬಹುಶಃ ಅವರು ಬೇರೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರಬಹುದು. ಈ ವೇದಿಕೆ ಮೂಲಕ ದೆಹಲಿಯಲ್ಲಿ ಸುಗಮ ಆಡಳಿತ ಮತ್ತು ಅಭಿವೃದ್ಧಿಗೆ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ಆಶೀರ್ವಾದ ಪಡೆಯಬಯಸುತ್ತೇನೆ” ಎಂದು ಕೇಜ್ರಿವಾಲ್ ಹೇಳಿದ್ದರು. ಈ ಬೆನ್ನಲ್ಲೇ ಹೀಗೆ ಮೋದಿಯವ​ರನ್ನು ಭೇಟಿಯಾಗಿರುವುದು ಭಾರೀ ಚರ್ಚಗೆ ಗ್ರಾಸವಾಗಿದೆ.
  First published: