HOME » NEWS » Coronavirus-latest-news » CLEARING OF LOCKDOWN ON SUNDAY IN BANGLORE LIFE GOES AS USUAL MAK

ಭಾನುವಾರ ಲಾಕ್‌ಡೌನ್‌ ತೆರವು; ರಸ್ತೆಗಿಳಿದ ವಾಹನಗಳು, ಎಂದಿನಂತೆ ಜನ ಜೀವನ!

ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಹೊರಗೆ ಆಟೋ ಹಾಗೂ ಕ್ಯಾಬ್‌ ಸಂಚಾರ ವ್ಯವಸ್ಥೆಯೂ ಆರಂಭವಾಗಿದೆ. ಆದರೆ, ಜನ ಮಾತ್ರ ಬಸ್‌ ನಿಲ್ದಾಣದ ಕಡೆಗೆ ಸುಳಿಯುತ್ತಿಲ್ಲ. ಪ್ರಯಾಣಿಕರ ಕೊರತೆಯಿಂದಾಗಿ ಮೆಜೆಸ್ಟಿಕ್ ಬಿಎಂಟಿಸಿ ನಿಲ್ದಾಣ ಬಿಕೋ ಎನ್ನುತ್ತಿದೆ. ಹೀಗಾಗಿ ಎಲ್ಲಾ ಬಸ್‌ಗಳಲ್ಲೂ ಬೆರಳೆಣಿಕೆಯ ಪ್ರಯಾಣಿಕರು ಮಾತ್ರ ಸಂಚಾರ ನಡೆಸುತ್ತಿದ್ದಾರೆ.

news18-kannada
Updated:August 2, 2020, 8:11 AM IST
ಭಾನುವಾರ ಲಾಕ್‌ಡೌನ್‌ ತೆರವು; ರಸ್ತೆಗಿಳಿದ ವಾಹನಗಳು, ಎಂದಿನಂತೆ ಜನ ಜೀವನ!
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು (ಆಗಸ್ಟ್‌ 02); ಕೊರೋನಾ ನಿಯಂತ್ರಣದ ಭಾಗವಾಗಿ ಕಳೆದ ಎರಡು ತಿಂಗಳಿನಿಂದ ಪ್ರತಿ ಭಾನುವಾರ ನಗರವನ್ನು ಲಾಕ್‌ಡೌನ್ ಮಾಡಲಾಗುತ್ತಿತ್ತು. ಆದರೆ, ಇದೀಗ ಅನ್‌ಲಾಕ್‌-03 ಪ್ರಕ್ರಿಯೆ ಭಾಗವಾಗಿ ಭಾನುವಾರ ಲಾಕ್‌ಡೌನ್‌ ತೆರವು ಮಾಡಲಾಗಿದ್ದು, ವಾಹನಗಳು ಸಂಚಾರ ಆರಂಭವಾಗಿದೆ. ಅಲ್ಲದೆ, ಜನ ಜೀವನವೂ ಎಂದಿನಂತೆ ನಡೆಯುತ್ತಿದೆ.

ಭಾನುವಾರದ ಲಾಕ್‌ಡೌನ್ ಕಾರಣದಿಂದಾಗಿ ಇಷ್ಟು ದಿನ ಯಾವುದೇ ಬಸ್‌, ಕ್ಯಾಬ್‌, ಆಟೋ ಹಾಗೂ ಬೈಕ್‌ಗಳು ರಸ್ತೆಗೆ ಇಳಿಯುತ್ತಿರಲಿಲ್ಲ. ಆದರೆ, ಇಂದಿನಿಂದ ನಗರದ ಎಲ್ಲಾ ಮಾರ್ಗಗಳಲ್ಲೂ ಭಾನುವಾರವೂ ಬಿಎಂಟಿಸಿ ಬಸ್‌ಗಳು ಸಂಚರಿಸಲಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರಂತೆ ಈಗಾಗಲೇ ಬೆಳಗ್ಗೆ 5 ಗಂಟೆಯಿಂದಲೇ ಬಸ್‌ ಸಂಚಾರ ಆರಂಭವಾಗಿದೆ.

ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಹೊರಗೆ ಆಟೋ ಹಾಗೂ ಕ್ಯಾಬ್‌ ಸಂಚಾರ ವ್ಯವಸ್ಥೆಯೂ ಆರಂಭವಾಗಿದೆ. ಆದರೆ, ಜನ ಮಾತ್ರ ಬಸ್‌ ನಿಲ್ದಾಣದ ಕಡೆಗೆ ಸುಳಿಯುತ್ತಿಲ್ಲ. ಪ್ರಯಾಣಿಕರ ಕೊರತೆಯಿಂದಾಗಿ ಮೆಜೆಸ್ಟಿಕ್ ಬಿಎಂಟಿಸಿ ನಿಲ್ದಾಣ ಬಿಕೋ ಎನ್ನುತ್ತಿದೆ. ಪ್ರಯಾಣಿಕರಿಲ್ಲದೆ ಫ್ಲಾಟ್ ಫಾರಂಗಳು ಖಾಲಿ ಖಾಲಿ ಹೊಡೆಯುತ್ತಿವೆ. ಹೀಗಾಗಿ ಎಲ್ಲಾ ಬಸ್‌ಗಳಲ್ಲೂ ಬೆರಳೆಣಿಕೆಯ ಪ್ರಯಾಣಿಕರು ಮಾತ್ರ ಸಂಚಾರ ನಡೆಸುತ್ತಿದ್ದಾರೆ.

ಇದನ್ನೂ ಓದಿ : Coronavirus Updates: ಕರ್ನಾಟಕದಲ್ಲಿ ಒಂದೇ ದಿನ 5503 ಮಂದಿಗೆ ಕೊರೋನಾ​, 1.30 ಲಕ್ಷ ಸಮೀಪಿಸಿದ ಸೋಂಕಿತರ ಸಂಖ್ಯೆ

ಆದರೆ, ದ್ವಿಚಕ್ರ ವಾಹನ ಸವಾರರು ಮಾತ್ರ ಯಾವುದೇ ಆತಂಕ ಇಲ್ಲದೆ ರಸ್ತೆಗೆ ಇಳಿದಿದ್ದಾರೆ. ಎಂದಿನಂತೆ ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಅನ್‌ಲಾಕ್‌ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನೂ ತೆರವುಗೊಳಿಸಿದ್ದು, ಪೊಲೀಸರೆ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದು ಜನರಲ್ಲಿನ ಆತಂಕವನ್ನು ದೂರ ಮಾಡಿದೆ.
Youtube Video

ಅಲ್ಲದೆ, ಇನ್ನೂ ಮುಂದಿನ ದಿನಗಳಲ್ಲೂ ಸಹ ಭಾನುವಾರ ಲಾಕ್‌ಡೌನ್‌ ಇರುವುದಿಲ್ಲ ಎಂದು ಸರ್ಕಾರ ಹೇಳಿರುವುದು ಜನರಲ್ಲಿ ಸಂತಸಕ್ಕೆ ಕಾರಣವಾಗಿದೆ. ಈ ನಡುವೆ ನಗರದಲ್ಲಿ ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆಯುತ್ತಿದ್ದು, ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿದೆ. ಹೀಗಾಗಿ ಜನ ಎಂದಿನಂತೆ ಭಾನುವಾರವೂ ಸಹ ಮನೆಯಿಂದ ಹೊರಬಂದು ತಮಗೆ ಅಗತ್ಯವಾದ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ.
Published by: MAshok Kumar
First published: August 2, 2020, 8:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories