Covid-19: ಕೊರೋನಾ ನಿಯಂತ್ರಿಸಲು ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ನೀಡಿದ ಸಲಹೆಯೇನು ಗೊತ್ತಾ?

ಒಂದು ತಿಂಗಳ ಕಾಲ ದೇಶವನ್ನೇ ಲಾಕ್​ಡೌನ್​ ಮಾಡಿದ ಹೊರತಾಗಿಯೂ ಕೊರೋನಾ ವೈರಸ್​ ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

ರಾಹುಲ್​​, ಮೋದಿ

ರಾಹುಲ್​​, ಮೋದಿ

  • Share this:
    ನವದೆಹಲಿ(ಏ.26): ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಮಾರಕ ಕೊರೋನಾ ವೈರಸ್​ ಭಾರತದಲ್ಲಿ ತೀವ್ರವಾಗಿ ಹರಡುತ್ತಿದೆ. ಇದರ ಪರಿಣಾಮ ದೇಶದಲ್ಲಿ ಕೋವಿಡ್​​-19ಗೆ ಬಲಿಯಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈ ಮಧ್ಯೆ ಕೊರೋನಾ ವೈರಸ್​ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ಕೇಂದ್ರ ಸರ್ಕಾರವೂ ಪ್ರತೀ ದಿನ 1 ಲಕ್ಷ ಜನರಿಗೆ ಕೋವೀಡ್​​-19 ಪರೀಕ್ಷೆಗಳನ್ನು ನಡೆಸಬೇಕೆಂದು ಮಾಜಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​​ ಗಾಂಧಿ ಆಗ್ರಹಿಸಿದ್ದಾರೆ.

    ಈ ಸಂಬಂಧ ಟ್ವೀಟ್​ ಮಾಡಿರುವ ರಾಹುಲ್​​ ಗಾಂಧಿ, ಕೋವಿಡ್​​-19 ವೈರಸ್​​ ಸೋಂಕು ಹರಡದಂತೆ ತಡೆಗಟ್ಟಲು ಸಾಮೂಹಿಕ ಪರೀಕ್ಷೆ ನಡೆಸುವುದು ಪ್ರಮುಖ ಅಂಶ ಎಂದು ತಜ್ಞರು ಒಪ್ಪಿಕೊಂಡಿದ್ದಾರೆ. ಸದ್ಯ ದೇಶದಲ್ಲಿ ಪರೀಕ್ಷಾ ಕಿಟ್​ಗಳಿದ್ದರೂ ದಿನಕ್ಕೆ ಕೇವಲ 40 ಸಾವಿರದಿಂದ 1 ಲಕ್ಷದವರೆಗೂ ಟೆಸ್ಟ್​​ ಮಾಡಲಾಗುತ್ತಿದೆ. ಇದನ್ನು ದಿನಕ್ಕೆ ಒಂದು ಲಕ್ಷ ಮಂದಿಗೆ ಕೊರೋನಾ ಪರೀಕ್ಷೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕ್ಷಿಪ್ರ ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.



    ಕಟ್ಟುನಿಟ್ಟಿನ ಲಾಕ್​ಡೌನ್​ ನಡುವೆಯೂ ಕೊರೋನಾ ವೈರಸ್​ ಕಾಡ್ಗಿಚ್ಚಿನಂತೆ ಹಬ್ಬುತ್ತಲೆ ಇದ್ದು, ಭಾರತದಲ್ಲಿ ಸೋಂಕಿತರ ಸಂಖ್ಯೆ 26 ಸಾವಿರಕ್ಕೆ ಎರಿಕೆ ಆಗಿದೆ. ಇಂದು ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದೇಶದಲ್ಲಿ 26 ಸಾವಿರ ಕೊರೋನಾ ವೈರಸ್​ ಪ್ರಕರಣಗಳಿ ದೃಢಪಟ್ಟಿವೆ. ಈ ಪೈಕಿ 19,868 ಆಕ್ಟಿವ್​ ಕೇಸ್​ಗಳಿವೆ. 824 ಜನರು ಮೃತಪಟ್ಟಿದ್ದಾರೆ. 5,803 ಜನರು ಕೊರೋನಾ ಮುಕ್ತರಾಗಿ ಮನೆಗೆ ತೆರಳಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಇದನ್ನೂ ಓದಿ: Coronavirus in India: ಭಾರತದಲ್ಲಿ 26 ಸಾವಿರ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ; 824 ಸಾವು

    ಒಂದು ತಿಂಗಳ ಕಾಲ ದೇಶವನ್ನೇ ಲಾಕ್​ಡೌನ್​ ಮಾಡಿದ ಹೊರತಾಗಿಯೂ ಕೊರೋನಾ ವೈರಸ್​ ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.
    First published: