HOME » NEWS » Coronavirus-latest-news » CLASHES BETWEEN POLICE AND MIGRANT LABOURS IN GUJARAT RH

ಕಾಲ್ನಡಿಗೆಯಲ್ಲಿ ಊರಿಗೆ ಹೊರಟ ವಲಸೆ ಕಾರ್ಮಿಕರು-ಪೊಲೀಸರ ನಡುವೆ ಘರ್ಷಣೆ

ಅಹಮದಾಬಾದ್​ನ ವಸ್ತ್ರಪುರ ರಸ್ತೆಯಲ್ಲಿ ಈಗ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಕೆಲಹೊತ್ತಿನ ಬಳಿಕ‌ ಪರಿಸ್ಥಿತಿ ತಹಬದಿಗೆ ಬಂದಿದ್ದು, ಕೆಲವು ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

news18-kannada
Updated:May 18, 2020, 8:13 PM IST
ಕಾಲ್ನಡಿಗೆಯಲ್ಲಿ ಊರಿಗೆ ಹೊರಟ ವಲಸೆ ಕಾರ್ಮಿಕರು-ಪೊಲೀಸರ ನಡುವೆ ಘರ್ಷಣೆ
ಪ್ರಾತಿನಿಧಿಕ ಚಿತ್ರ
  • Share this:
ಅಹಮದಾಬಾದ್: ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಬಳ್ಳಾ ಎಲ್ಲಾ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ಕಾಲ್ನಡಿಗೆಯಲ್ಲಿ ಊರಿಗೆ ಹೊರಟ ವಲಸೆ ಕಾರ್ಮಿಕರಿಗೆ ಕಿರುಕುಳ ನೀಡಬೇಡಿ ಎಂದು ಸೂಚಿಸಿದ್ದಾರೆ. ಆದರೆ ಗುಜರಾತ್ ಪೊಲೀಸರು ವಲಸೆ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಿರುವ ಪ್ರಕರಣ ವರದಿಯಾಗಿದೆ.

ಲಾಕ್ಡೌನ್​ನಿಂದ ಕೆಲಸ ಕಳೆದುಕೊಂಡು ಬರಿಗೈಯಲ್ಲಿ ಬಳಲುತ್ತಿದ್ದ ವಲಸೆ‌ ಕಾರ್ಮಿಕರು ನಾಲ್ಕನೇ ಹಂತದ ಲಾಕ್ಡೌನ್ ಆರಂಭವಾಗಿ ನಿಯಮಾವಳಿಗಳು ಸಡಿಲಗೊಳ್ಳುತ್ತಿದ್ದಂತೆ ತಮ್ಮ ತಮ್ಮ ಊರಿನತ್ತ ಕಾಲ್ನಡಿಗೆಯಲ್ಲಿ ಹೊರಟಿದ್ದರು. ವಲಸೆ ಕಾರ್ಮಿಕರು ಗುಜರಾತ್ ರಾಜಧಾನಿ ಅಹಮದಾಬಾದ್ ಬಾದಿನಿಂದ ವಸ್ತ್ರಪುರದೆಡೆಗೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾಗ ಮಾರ್ಗ ಮಧ್ಯೆ ಪೊಲೀಸರು ತಡೆಯೊಡ್ಡಿದ್ದಾರೆ. ಆಗ ವಲಸೆ ಕಾರ್ಮಿಕರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ.

ಸ್ವಗ್ರಾಮಗಳಿಗೆ ಮರುಳುತ್ತಿದ್ದ ವಲಸೆ ಕಾರ್ಮಿಕರನ್ನು ತಡೆದ ಪೊಲೀಸರು ಊರುಗಳಿಗೆ ವಾಪಸ್ ಹೋಗಬೇಡಿ ಎಂದು ತಾಖೀತು ಮಾಡಿದ್ದಾರೆ. ಪೊಲೀಸರ ಕ್ರಮವನ್ನು ವಲಸೆ ಕಾರ್ಮಿಕರು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ವಲಸೆ ಕಾರ್ಮಿಕರ ಮೇಲೆ ಟಿಯರ್ ಗ್ಯಾಸ್ ಸಿಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ನೂರಕ್ಕೂ ಹೆಚ್ಚು ಕಾರ್ಮಿಕರು ಪೊಲೀಸರ ಮೇಲೆ ಕಲ್ಲುಗಳನ್ನು ತೋರಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಭಾರತಕ್ಕೆ ಅಪ್ಪಳಿಸಲಿರುವ ಅಂಫಾನ್ ಚಂಡಮಾರುತದ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ ಕೇಂದ್ರ

ಅಹಮದಾಬಾದ್​ನ ವಸ್ತ್ರಪುರ ರಸ್ತೆಯಲ್ಲಿ ಈಗ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಕೆಲಹೊತ್ತಿನ ಬಳಿಕ‌ ಪರಿಸ್ಥಿತಿ ತಹಬದಿಗೆ ಬಂದಿದ್ದು, ಕೆಲವು ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
First published: May 18, 2020, 8:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading