Corona: ಕೊರೋನಾ ತವರಿನಲ್ಲಿ ಮತ್ತೆ ಮಹಾಮಾರಿ ಅಬ್ಬರ, ಚೀನಾದಲ್ಲಿ ಇಡೀ ನಗರವೇ ಲಾಕ್‌ ಡೌನ್!

ಕೋವಿಡ್‌ ಮಹಾಮಾರಿ ಜಗತ್ತಿನ ಜನರ ಲೆಕ್ಕಾಚಾರವನ್ನು ಮತ್ತೆ ಮತ್ತೆ ಬುಡಮೇಲು ಮಾಡ್ತಾನೇ ಇದೆ. ಒಂದೊಂದು ಅಲೆಯಲ್ಲೂ ರೂಪ ಮರೆಸಿಕೊಂಡು ಬರುವ ಈ ಕೋವಿಡ್ ವೈರಸ್, ಇದೀಗ ಮತ್ತೆ ಅಬ್ಬರಿಸೋದಕ್ಕೆ ಶುರು ಮಾಡಿದೆ. ಕೋವಿಡ್‌ ತವರೂರು ಚೀನಾದಲ್ಲೇ ಮತ್ತೆ ಕೊರೋನಾ ಕೇಸ್‌ಗಳು ಹೆಚ್ಚಾಗುತ್ತಿವೆ. ಅಲ್ಲದೇ ಕೆಲವು ನಗರಗಳೇ ಮತ್ತೆ ಲಾಕ್‌ಡೌನ್ ಆಗಿದೆ.

ಚೀನಾದ ನಗರವೊಂದರ ಚಿತ್ರ

ಚೀನಾದ ನಗರವೊಂದರ ಚಿತ್ರ

  • Share this:
ಚೀನಾ: ಸದ್ಯ ಮಹಾಮಾರಿ ಕೊರೋನಾ (Corona) ಅಬ್ಬರ ಮುಗಿತಾ ಇದೆ. ಕೇಸ್‌ಗಳ (Case) ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗ್ತಾ ಇದೆ, ಇನ್ನು ಮುಂದೆ ನೆಮ್ಮದಿಯಿಂದ ಜೀವನ ನಡೆಸಬಹುದು ಅಂತ ಇಡೀ ಜಗತ್ತೇ ಲೆಕ್ಕಾಚಾರ ಹಾಕ್ತಾ ಇತ್ತು. ಆದ್ರೆ ಈ ಕೋವಿಡ್‌ (Covid) ಮಹಾಮಾರಿ ಜಗತ್ತಿನ ಜನರ ಲೆಕ್ಕಾಚಾರವನ್ನು ಮತ್ತೆ ಮತ್ತೆ ಬುಡಮೇಲು ಮಾಡ್ತಾನೇ ಇದೆ. ಒಂದೊಂದು ಅಲೆಯಲ್ಲೂ (Wave) ರೂಪ ಮರೆಸಿಕೊಂಡು ಬರುವ ಈ ಕೋವಿಡ್ ವೈರಸ್ (Virus), ಇದೀಗ ಮತ್ತೆ ಅಬ್ಬರಿಸೋದಕ್ಕೆ ಶುರು ಮಾಡಿದೆ. ಕೋವಿಡ್‌ ತವರೂರು ಚೀನಾದಲ್ಲೇ (China) ಮತ್ತೆ ಕೊರೋನಾ ಕೇಸ್‌ಗಳು ಹೆಚ್ಚಾಗುತ್ತಿವೆ. ಅಲ್ಲದೇ ಕೆಲವು ನಗರಗಳೇ (City) ಮತ್ತೆ ಲಾಕ್‌ಡೌನ್ (Lockdown) ಆಗಿದೆ. ಇದು ಜಗತ್ತಿಗೆ ಮತ್ತೊಂದು ಎಚ್ಚರಿಕೆಯ ಗಂಟೆಯಾಗಿದೆ.

 ಚೀನಾದಲ್ಲಿ ಮತ್ತೆ ಅಬ್ಬರಿಸುತ್ತಿರುವ ಕೋವಿಡ್ ವೈರಸ್

 ಚೀನಾದಲ್ಲಿ ಕೋವಿಡ್‌ ಕೇಸ್‌ಗಳ ಸಂಖ್ಯೆ ಮತ್ತೆ ಜಾಸ್ತಿಯಾಗುತ್ತಿದೆ. ಕೋವಿಡ್ 19ರ ಹೊಸ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡ ಹಿನ್ನೆಲೆಯಲ್ಲಿ, ಚೀನಾದ ಈಶಾನ್ಯ ನಗರ ಚಾಂಗ್‌ಚುನ್‌ನ ಲಾಕ್‌ ಡೌನ್ ಮಾಡಲಾಗಿದೆ. ನಿನ್ನೆಯಿಂದಲೇ ನಗರದಾದ್ಯಂತ ಲಾಕ್‌ಡೌನ್ ವಿಧಿಸಲಾಗಿದೆ. ಇದರಿಂದ 9 ಮಿಲಿಯನ್ ನಿವಾಸಿಗಳು ಮನೆಯಿಂದ ಹೊರಬರದಂತೆ ಆಗಿದೆ.

ಮನೆಯೊಳಗೇ ಇರಿ, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದ ಸರ್ಕಾರ

ಈ ನಗರದ ನಿವಾಸಿಗಳು ಕಡ್ಡಾಯವಾಗಿ ಲಾಕ್‌ ಡೌನ್ ನಿಯಮ ಪಾಲಿಸಲೇ ಬೇಕು ಎಂದು ಚೀನಾ ಸರ್ಕಾರ ಆದೇಶಿಸಿದೆ. ಇದಕ್ಕಾಗಿ ಕೆಲವೊಂದು ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದೆ. ಈ ನಗರದ ಜನರು ಮನೆಯೊಳಗೇ ಇದ್ದು, ಮೂರು ಸುತ್ತಿನ ಕೋವಿಡ್ ಪರೀಕ್ಷೆಗೆ ಒಳಪಡಬೇಕಿದೆ. ಅಗತ್ಯವಲ್ಲದ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದೆ. ಸಾರಿಗೆ ವ್ಯವಸ್ಥೆ ಕೂಡ ಬಂದ್ ಆಗಿದೆ.

ಇದನ್ನೂ ಓದಿ: Covid-19: ಜೂನ್‌ನಿಂದ ಭಾರತದಲ್ಲಿ ಕೋರೋನಾ 4ನೇ ಅಲೆ..! ಲೇಟೆಸ್ಟ್ ವರದಿ ಏನ್ ಹೇಳುತ್ತೆ?

ನಿನ್ನೆಯಿಂದಲೇ ನಗರದಾದ್ಯಂತ ಲಾಕ್‌ ಡೌನ್ ಘೋಷಣೆ

ಸ್ಥಳೀಯವಾಗಿ ಹರಡಿದ 397 ಹೊಸ ಕೋವಿಡ್ ಪ್ರಕರಣಗಳು ದೇಶಾದ್ಯಂತ ವರದಿಯಾದ ಬೆನ್ನಲ್ಲೇ ಚೀನಾ ಸರ್ಕಾರದ ಅಧಿಕಾರಿಗಳು ಮತ್ತೆ ಲಾಕ್‌ಡೌನ್‌ ಅಸ್ತ್ರ ಪ್ರಯೋಗಿಸಿದ್ದಾರೆ. ಈ ಹೊಸ ಪ್ರಕರಣಗಳಲ್ಲಿ 98 ಕೇಸ್‌ಗಳು ಚಾಂಗ್‌ಚುನ್ ಸುತ್ತಲಿನ ಜಿಲಿನ್ ಪ್ರಾಂತ್ಯದಲ್ಲಿ ಪತ್ತೆಯಾಗಿದೆ. ಆದರೆ ಚಾಂಗ್‌ಚುನ್‌ನಲ್ಲಿ ಶುಕ್ರವಾರ ಕೇವಲ ಎರಡು ಕೇಸ್ ವರದಿಯಾಗಿದೆ. ಹಾಗಿದ್ದರೂ ನಗರದಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ.

ಜಿಲಿನ್ ನಗರದಲ್ಲೂ ಭಾಗಶಃ ಲಾಕ್‌ ಡೌನ್ ಜಾರಿ

ಜಿಲಿನ್ ನಗರದಲ್ಲಿ ಚೀನಾ ಸರ್ಕಾರವು ಈಗಾಗಲೇ ಭಾಗಶಃ ಲಾಕ್‌ಡೌನ್ ಜಾರಿ ಗೊಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ನಗರದಿಂದ ಇತರೆ ನಗರಗಳಿಗೆ ಸಂಪರ್ಕ ವ್ಯವಸ್ಥೆಯನ್ನು ಕಡಿತಗೊಳಿಸಲಾಗಿದೆ. ಜಿಲಿನ್ ನಗರದಲ್ಲಿ ಶುಕ್ರವಾರ 93 ಪ್ರಕರಣಗಳು ವರದಿಯಾಗಿವೆ. ದೇಶಾದ್ಯಂತ ರಾಪಿಡ್ ಆಂಟಿಜೆನ್ ಪರೀಕ್ಷೆ ವ್ಯವಸ್ಥೆಯನ್ನು ಜಾರಿಗೊಳಿಸಲು ಚೀನಾ ನಿರ್ಧರಿಸಿದೆ. ಶಾಂಘೈ ನಗರದಲ್ಲಿ ಸೋಂಕು ಕಡಿಮೆ ಮಾಡಲು ಶಾಲೆಗಳನ್ನು ಮುಚ್ಚಲಾಗಿದೆ.

ಇದನ್ನೂ ಓದಿ: Doctors Problem: ಕೋವಿಡ್ ಟೈಮ್​ ಪಾಲಿಕೆ ಕೈ ಹಿಡಿದಿದ್ದ ವೈದ್ಯರ ಕೈ ಬಿಡುತ್ತಾ BBMP? ಆಯುಷ್ ಡಾಕ್ಟರ್ಸ್ ಸ್ಥಿತಿ ಅತಂತ್ರ!

ಒಂದು ಕೇಸ್ ಕಂಡು ಬಂದರೂ ಲಾಕ್‌ ಡೌನ್

ಒಂದು ಅಥವಾ ಅದಕ್ಕಿಂತ ಹೆಚ್ಚು ವೈರಸ್ ಪ್ರಕರಣಗಳು ಪತ್ತೆಯಾದ ಯಾವುದೇ ನಗರ ಅಥವಾ ಸಮುದಾಯದಲ್ಲಿ ಚೀನಾ ಅಧಿಕಾರಿಗಳು ಪದೇ ಪದೇ ಲಾಕ್‌ಡೌನ್ ಜಾರಿಗೊಳಿಸುತ್ತಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕದ ಮತ್ತೆ ಹರಡಬಾರದು ಎಂಬ ಉದ್ದೇಶದಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಚೀನಾ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
Published by:Annappa Achari
First published: