HOME » NEWS » Coronavirus-latest-news » CHITRADURGA POLICE DISTRIBUTING FACE MASKS TO PEOPLE GOOD RESPONSE FOR NIGHT CURFEW IN CHITRADURGA SCT VTC

Chitradurga: ಸಾರ್ವಜನಿಕರಿಗೆ ಮಾಸ್ಕ್ ನೀಡಿ ಚಿತ್ರದುರ್ಗ ಪೋಲೀಸರ ಜಾಗೃತಿ; ನೈಟ್ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ

Chitradurga Coronavirus: ಬೈಕ್ ಸವಾರ, ಆಟೋ ಪ್ರಯಾಣಿಕರು ಸೇರಿದಂತೆ ಪಾದಚಾರಿಗಳಿಗೂ ಮಾಸ್ಕ್ ನೀಡಿ ಜನರಿಗೆ ಜಾಗೃತಿ ಮೂಡಿಸಿದ ಚಿತ್ರದುರ್ಗ ಸಂಚಾರಿ ಠಾಣೆ ಪಿಎಸ್ಐ ರಘು ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಜನರಿಗೆ ಬುದ್ದಿ ಹೇಳಿದ್ದಾರೆ.

news18-kannada
Updated:April 22, 2021, 8:49 AM IST
Chitradurga: ಸಾರ್ವಜನಿಕರಿಗೆ ಮಾಸ್ಕ್ ನೀಡಿ ಚಿತ್ರದುರ್ಗ ಪೋಲೀಸರ ಜಾಗೃತಿ; ನೈಟ್ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ
ಪೊಲೀಸರಿಂದ ಮಾಸ್ಕ್ ವಿತರಣೆ
  • Share this:
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನೂರರ ಗಡಿ ದಾಟಿರುವ  ಕೊರೋನಾ ಸೋಂಕಿನ ಹಿನ್ನಲೆ ಎಚ್ಚೆತ್ತ ಪೊಲೀಸರಿಂದ ಸಾರ್ವಜನಿಕರಿಗೆ ಮಾಸ್ಕ್ ಜಾಗೃತಿ ಮೂಡಿಸಿದ್ದಾರೆ. ಇತ್ತ ನಗರಸಭೆ ಕಮಿಷನರ್ ಮಾರ್ಗಸೂಚಿ ಅನುಸರಿಸದ ಅಂಗಡಿ‌ ಮಾಲೀಕರಿಗೆ ದಂಡ ಹಾಕಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲೆ ಕಳೆದ ಒಂದೇ ವಾರದಲ್ಲಿ‌ ದಿನದಿಂದ ದಿನಕ್ಕೆ ಕೋರೋನಾ ಸೋಂಕಿತರ ಸಂಖ್ಯೆ 90 ರಿಂದ ಶುರುವಾಗಿ ನೂರರ ಗಡಿ ದಾಟಿತ್ತು. ಇಂದು ಇದ್ದಕ್ಕಿದ್ದಂತೆ ಕೊರೋನಾ ಸೋಂಕಿತರ ಸಂಖ್ಯೆ  110ರಿಂದ 117ಕ್ಕೆ ಏರಿಕೆಯಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಠಿಯಾಗಿದೆ. ಆದರೂ ಮೈಮರೆತ ಜನರು ಮಾಸ್ಕ್ ಇಲ್ಲದೆ ಓಡಾಡುವುದನ್ನ ಕಂಡ ಚಿತ್ರದುರ್ಗ ಪೋಲೀಸರು ದಂಡ ವಸೂಲಿ ಮಾಡಿ ಬುದ್ದಿ ಕಲಿಸುವ ಬದಲು ಮಾಸ್ಕ್ ವಿತರಣೆ ಮಾಡುವ ಮೂಲಕ ಬುದ್ದಿ ಹೇಳಿದ್ದಾರೆ.

ನಗರದ ಗಾಂಧಿ ವೃತ್ತ, ಬಿಡಿ ರಸ್ತೆ ಸೇರಿದಂತೆ ಹಲವೆಡೆ ಸಂಚರಿಸುವ ಬೈಕ್ ಸವಾರ, ಆಟೋ ಪ್ರಯಾಣಿಕರು ಸೇರಿದಂತೆ ಪಾದಚಾರಿಗಳಿಗೂ ಮಾಸ್ಕ್ ನೀಡಿ ಜನರಿಗೆ ಜಾಗೃತಿ ಮೂಡಿಸಿದ ಚಿತ್ರದುರ್ಗ ಸಂಚಾರಿ ಠಾಣೆ ಪಿಎಸ್ಐ ರಘು ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಜನರಿಗೆ ಬುದ್ದಿ ಹೇಳಿದ್ದಾರೆ. ಆದರೇ ಜಿಲ್ಲೆಯಲ್ಲಿ ಇಷ್ಟೆಲ್ಲಾ ಕೋರೋನಾ ಸೋಂಕಿನ ಸಂಖ್ಯೆ ಹೆಚ್ಚಿದರೂ ಜನರು ಮಾತ್ರ ಅದ್ಯಾಕೋ ಎಚ್ಚೆತ್ತುಕೊಳ್ಳುವಂತೆ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ನಗರ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿನ ಹಳ್ಳಿ ಜನರು ಜಿಲ್ಲಾ ಕೇಂದ್ರಕ್ಕೆ ಬಂದರೂ ಮಾಸ್ಕ್ ಧರಿಸದೆ ಅಸಡ್ಡೆ ಹಾಗೂ ಬೇಜವಬ್ದಾರಿ ತನದಿಂದ ಬಂದು ಪೋಲೀಸರ ಬಳಿ ಮಾಸ್ಕ್ ಪಡೆದವರೇ ಹೆಚ್ಚಾಗಿ ಕಂಡು ಬಂದರು. ಇತ್ತ ಯಾವಾಗಲೂ ಫೈನ್ ಹಾಕಿ ಜನರ ವರ್ತನೆಯನ್ನ ದಂಡಿಸುತ್ತಿದ್ದ ಪೋಲೀಸರು ಜನರಿಗೆ ಜವಬ್ದಾರಿ ನೆನಪಿಸಿ ಮಾಸ್ಕ್ ನೀಡೊ ಬುದ್ದಿ ಮಾತು ಹೇಳುವ ಮೂಲಕ ವಿಶೇಷವಾಗಿ ಜಾಗೃತಿ ಮೂಡಿಸಿದ್ದು  ಮಾತ್ರ ಎಲ್ಲರೂ ಮೆಚ್ಚುವಂತ ಕಾರ್ಯ.

ಪ್ರಾರಂಭದಲ್ಲಿಯೇ ಎಚ್ಚೆತ್ತುಕೊಳ್ಳಬೇಕಾದ ನಗರಸಭೆ ಅಧಿಕಾರಿಗಳು ತಡವಾಗಿ ಎಚ್ಚೆತ್ತು ಸಿಟಿ ರೌಂಡ್ಸ್ ಮಾಡಿ ಕೋವಿಡ್ ಮಾರ್ಗಸೂಚಿ ಅನುಸರಿಸದ ವರ್ತಕರಿಗೆ ಕ್ಲಾಸ್ ತೆಗೆದುಕೊಂಡ ನಗರಸಭೆ ಕಮಿಷನರ್ ಹನುಮಂತ ರಾಜು ದಂಡ ಹಾಕಿದರು. ಅಷ್ಟೆ ಅಲ್ಲದೆ ಅಂಗಡಿ ಮುಂಭಾಗ ಸಾಮಾಜಿಕ ಅಂತರ ಕಾಪಾಡಬೇಕು, ಮಾಸ್ಕ್ ಧರಿಸಬೇಕು ಅಂತ ತಾಕೀತು ಮಾಡಿದರು. ಅಲ್ಲದೇ ನಗರದಲ್ಲಿ ಯಾರೂ ಕೂಡ ಕೋವಿಡ್ ಮಾರ್ಗ ಸೂಚಿ ಉಲ್ಲಂಘಿಸದಂತೆ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಕೊರೋನಾ ತಡೆಗೆ ನೈಟ್ ಕರ್ಫ್ಯೂ ಜಾರಿ ಮಾಡಿದ ಹಿನ್ನೆಲೆ ಚಿತ್ರದುರ್ಗದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಿತು.  ರಾತ್ರಿ 9 ಗಂಟೆ ಆಗುತ್ತಿದ್ದಂತೆ ಸರ್ಕಾರದ ಆದೇಶ ಪಾಲಿಸಿದ ಅಂಗಡಿ ವರ್ತಕರು ಅಂಗಡಿ ಬಾಗಿಲು ಹಾಕಿದರು. ಇತ್ತ  ಸಾರ್ವಜನಿಕರು ಓಡಾಟ ಕಡಿಮೆ ಮಾಡಿ‌ ಮನೆ ಸೇರಿದರು.

(ವರದಿ : ವಿನಾಯಕ ತೊಡರನಾಳ್)
Published by: Sushma Chakre
First published: April 22, 2021, 8:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories