HOME » NEWS » Coronavirus-latest-news » CHITRADURGA FARMERS LOST LAKHS TOGETHER FROM PUMPKIN CROP AFTER KARNATAKA LOCKDOWN SCT VTC

Chitradurga | ಚಿತ್ರದುರ್ಗದಲ್ಲಿ ಸಿಹಿ ಕುಂಬಳಕಾಯಿ ‌ಬೆಳೆದ ರೈತನಿಗೆ ಕಹಿ‌ ನೀಡಿದ ಕೊರೋನಾ ಲಾಕ್​ಡೌನ್

ಚಿತ್ರದುರ್ಗದ ಜನರ ಪಾಡಂತೂ ಹೇಳ ತೀರದಾಗಿರುತ್ತೆ. ಈ ಬರದ ಜಿಲ್ಲೆಯಲ್ಲಿ ಬಹುತೇಕ ಮಳೆಯಾಶ್ರಿತ  ಬೆಳೆ ಬೆಳೆಯೋದೇ ಹೆಚ್ಚು. ಅದರಲ್ಲೂ ಅಲ್ಲೊಬ್ಬ ಇಲ್ಲೊಬ್ಬ ರೈತರು ಬೋರ್​ವೆಲ್​ಗಳ ಮೂಲಕ ನೀರು ಹಾಯಿಸಿ ಹಲವಾರು ಬೆಳೆಗಳನ್ನ ಬೆಳೆಯೋಕೆ ಹೋಗಿ ಕೈ ಸುಟ್ಟುಕೊಂಡವರೇ ಹೆಚ್ಚು.

news18-kannada
Updated:May 4, 2021, 9:11 AM IST
Chitradurga | ಚಿತ್ರದುರ್ಗದಲ್ಲಿ ಸಿಹಿ ಕುಂಬಳಕಾಯಿ ‌ಬೆಳೆದ ರೈತನಿಗೆ ಕಹಿ‌ ನೀಡಿದ ಕೊರೋನಾ ಲಾಕ್​ಡೌನ್
ಚಿತ್ರದುರ್ಗದಲ್ಲಿ ರಾಶಿ ಬಿದ್ದ ಚೀನಿಕಾಯಿ
  • Share this:
ಚಿತ್ರದುರ್ಗ: ವರ್ಷಗಟ್ಟಲೆ ಶ್ರಮ ಹಾಕಿ ಸಿಹಿ ಕುಂಬಳಕಾಯಿ ಬೆಳೆದಿದ್ದ ರೈತನಿಗೆ ಇನ್ನೇನು ಪ್ರತಿಫಲ ಕೈ ಸೇರುವ ಸಮಯ. ಆದರೆ, ದೇಶದಲ್ಲಿ ಕೊರೋನಾ ಸೋಂಕು ಎರಡನೆ ಅಲೆ ಶುರುವಾಗಿದ್ದು, ಅಘೋಷಿತ ಲಾಕ್ ಡೌನ್ ನಿಂದ ಸಿಹಿ ಕುಂಬಳ ಕಾಯಿ ಬೆಳೆದಿದ್ದ ರೈತನಿಗೆ ಕಹಿ ನೀಡಿದ್ದು ಬರದ ನಾಡು ಚಿತ್ರದುರ್ಗ ಜಿಲ್ಲೆಯ ರೈತರೊಬ್ಬರು ಕಂಗಾಲಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೋಟೆನಾಡು ಚಿತ್ರದುರ್ಗ ಅಂದರೆ ರಾಜ ವೀರ ಮದಕರಿ ನಾಯಕರ ಶೌರ್ಯ  ಪರಂಪರೆ ಹಾಗೂ ಐತಿಹಾಸಿಕ ತಾಣಗಳಿಗೆ ಹೆಸರುವಾಸಿ. ಇದನ್ನ ಹೊರತಾಗಿ ಚಿತ್ರದುರ್ಗ ಜಿಲ್ಲೆಯನ್ನ ಒಮ್ಮೆ ಅವಲೋಕನ ಮಾಡಿದರೆ ಭೀಕರ ಬರದ ಛಾಯೆ ಕಣ್ಮುಂದೆ ಹಾದು ಹೋಗುತ್ತದೆ. ಚಿತ್ರದುರ್ಗ ಜಿಲ್ಲೆ ಕಾಲಾನು ಕಾಲಕ್ಕೂ ಬರೀ ಬರದ ಹಣೆಪಟ್ಟಿ ಕಟ್ಟಿಕೊಳ್ಳುತ್ತಲೇ ಇದೆ. ಹೀಗಿರುವಾಗ ಚಿತ್ರದುರ್ಗದ ಜನರ ಪಾಡಂತೂ ಹೇಳ ತೀರದಾಗಿರುತ್ತೆ. ಈ ಬರದ ಜಿಲ್ಲೆಯಲ್ಲಿ ಬಹುತೇಕ ಮಳೆಯಾಶ್ರಿತ  ಬೆಳೆ ಬೆಳೆಯೋದೇ ಹೆಚ್ಚು. ಅದರಲ್ಲೂ ಅಲ್ಲೊಬ್ಬ ಇಲ್ಲೊಬ್ಬ ರೈತರು ಬೋರ್​ವೆಲ್​ಗಳ ಮೂಲಕ ನೀರು ಹಾಯಿಸಿ ಹಲವಾರು ಬೆಳೆಗಳನ್ನ ಬೆಳೆಯೋಕೆ ಹೋಗಿ ಕೈ ಸುಟ್ಟುಕೊಂಡವರೇ ಹೆಚ್ಚು.

Chitradurga | Chitradurga Farmers Lost Lakhs Together from Pumpkin Crop after Karnataka Lockdown.

ಅದಕ್ಕೆ ಪೂರಕವಾಗಿ ಅದೆಷ್ಟೋ ರೈತರು ಕೃಷಿ ಕಾಯಕದಿಂದ ದೂರ ಸರಿದ ಉದಾಹರಣೆಗಳೂ ಇವೆ. ಇವೆಲ್ಲಾ ಬೆಳವಣಿಗೆಗಳ ನಡುವೆ ಎದೆಗುಂದದೆ ಧೈರ್ಯದಿಂದ ಉತ್ಸಾಹದಿಂದ ಬೆಳೆ ಬೆಳೆದಿದ್ದ ರೈತನಿಗೆ ಸದ್ಯದ ಲಾಕ್ ಡೌನ್ ಬಿಸಿ ತಟ್ಟಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಹಕ್ಕಿ ತಿಮ್ಮಯ್ಯನ ಹಟ್ಟಿ ಗ್ರಾಮದ ರೈತ ಮಲ್ಲೇಶ್ ತನ್ನ 4 ಎಕರೆ ಜಮೀನಿನಲ್ಲಿ ಸಿಹಿ ಕುಂಬಳ ಕಾಯಿ ಬೆಳೆದಿದ್ದಾರೆ. ಉತ್ತಮ ಲಾಭದ ಕನಸು ಕಂಡಿದ್ದ ರೈತ ಹಗಲು ರಾತ್ರಿ ಎನ್ನದೆ ನಿದ್ದೆಗೆಟ್ಟು ಬೆಳೆಗೆ ನೀರು ಹಾಯಿಸಿದ್ದರು. ಅವರ ಪರಿಶ್ರಮಕ್ಕೆ ತಕ್ಕಂತೆ 4 ಎಕರೆ ಜಮೀನಲ್ಲಿ ಸರಿ ಸುಮಾರು 50ಕ್ಕೂ ಹೆಚ್ಚು ಟನ್ ಇಳುವರಿ ತೂಕದ ಕುಂಬಳ ಕಾಯಿ ಬೆಳೆ ಬಂದಿದೆ.

ಇನ್ನೇನು ತನ್ನ ಪರಿಶ್ರಮಕ್ಕೆ ತಕ್ಕಂತೆ ಕೈಗೆ ಬಂದ ಫಸಲು ಮಾರಾಟ ಮಾಡಿ ಲಾಭ ಗಳಿಸೋ ತವಕದಲ್ಲಿದ್ದ ರೈತ ಮಲ್ಲೇಶ್ ಗೆ ಕೊರೋನಾ ಸೋಂಕಿನ ಎರಡನೇ ಅಲೆ ತಡೆಯಲು ಮಾಡಿರೋ ಅಘೋಷಿತ ಲಾಕ್ ಡೌನ್ ಬರೆ ಎಳೆದಿದೆ. ಯಾಕೆಂದರೆ ಬೆಳೆದು ಹದಕ್ಕೆ ಬಂದಿರೋ ಕುಂಬಳ ಕಾಯಿಯನ್ನ ಮಹಾರಾಷ್ಟ್ರ, ಕೇರಳ ಮತ್ತು ಕೊಲ್ಕತ್ತಾಕ್ಕೆ ರಫ್ತು ಮಾಡಿ ಮಾರಾಟ ಮಾಡಬೇಕಾಗಿತ್ತು. ಆದರೆ, ಲಾಕ್​ಡೌನ್ ಎಫೆಕ್ಟ್​ನಿಂದ ಕುಂಬಳ ಕಾಯಿ ಮಾರಾಟ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಬೆಳೆ ಬೆಳೆಯೋಕೆ ಬೀಜ, ಗೊಬ್ಬರ, ಡ್ರಿಪ್ ಹೀಗೆ ಎಲ್ಲವೂ ಸೇರಿ ಸರಾಸರಿ ಎರಡು ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದು ಹಾಕಿದ ಬಂಡವಾಳವೂ ಕೈ ಸೇರದ ಪರಿಸ್ಥಿತಿ ಎದುರಾಗಿದೆ. ದಿನದಿಂದ ದಿನಕ್ಕೆ ಜಮೀನಿನಲ್ಲಿ ಕುಂಬಳಕಾಯಿ ಕೊಳೆಯುವ ಹಂತ ತಲುಪುತ್ತಿದ್ದು, ಮಾರುಕಟ್ಟೆ ವ್ಯವಸ್ಥೆ ಹಾಗೂ ಬೆಳೆ ಪರಿಹಾರಕ್ಕಾಗಿ ರೈತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.(ವರದಿ : ವಿನಾಯಕ ತೊಡರನಾಳ್)
Published by: Sushma Chakre
First published: May 4, 2021, 9:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories