HOME » NEWS » Coronavirus-latest-news » CHIRANJEEVI SARJA DEATH CHIRANJEEVI SARJA TESTED CORONAVIRUS NEGATIVE SCT

Chiranjeevi Sarja Death: ಚಿರಂಜೀವಿ ಸರ್ಜಾಗೆ ಕೊರೋನಾ ಇರಲಿಲ್ಲ; ಅಪೋಲೋ ವೈದ್ಯರಿಂದ ಸ್ಪಷ್ಟನೆ

Chiranjeevi Sarja Funeral: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿರುವುದರಿಂದ ಚಿರಂಜೀವಿ ಸರ್ಜಾ ಅವರ ಗಂಟಲುದ್ರವವನ್ನು ಕೂಡ ಲ್ಯಾಬ್​ಗೆ ಕಳುಹಿಸಲಾಗಿತ್ತು.

news18-kannada
Updated:June 7, 2020, 9:32 PM IST
Chiranjeevi Sarja Death: ಚಿರಂಜೀವಿ ಸರ್ಜಾಗೆ ಕೊರೋನಾ ಇರಲಿಲ್ಲ; ಅಪೋಲೋ ವೈದ್ಯರಿಂದ ಸ್ಪಷ್ಟನೆ
ಚಿರಂಜೀವಿ ಸರ್ಜಾ
  • Share this:
ಬೆಂಗಳೂರು (ಜೂ. 7): ಇಂದು ಸಂಜೆ 3.48ಕ್ಕೆ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ನಟ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಸಾವನ್ನಪ್ಪಿದ ಅವರಿಗೆ ಕೊರೋನಾ ತಗುಲಿರಬಹುದು ಎಂಬ ಅನುಮಾನ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಗಂಟಲುದ್ರವವನ್ನು ಲ್ಯಾಬ್​ಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಈಗ ಸಿಕ್ಕಿದ್ದು, ಚಿರು ಸರ್ಜಾಗೆ ಕೊರೋನಾ ನೆಗೆಟಿವ್ ಇದ್ದುದು ದೃಢಪಟ್ಟಿದೆ.

ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿರುವುದರಿಂದ ಕಳೆದ 2 ತಿಂಗಳಿಂದ ಯಾರೇ ಮೃತಪಟ್ಟರೂ ಅವರಿಗೆ ಕೊರೋನಾ ಸೋಂಕು ತಗುಲಿತ್ತೇ? ಎಂದು ಪರೀಕ್ಷಿಸಲಾಗುತ್ತಿದೆ. ಆ ನಿಯಮದಂತೆ ಚಿರಂಜೀವಿ ಸರ್ಜಾ ಅವರ ಗಂಟಲುದ್ರವವನ್ನು ಕೂಡ ಲ್ಯಾಬ್​ಗೆ ಕಳುಹಿಸಲಾಗಿತ್ತು. ವೈದ್ಯಕೀಯ ವರದಿ ಬರುವವರೆಗೂ ಮೃತದೇಹವನ್ನು ಕೊಡಲು ಸಾಧ್ಯವಿಲ್ಲ ಎಂದು ಅಪೋಲೋ ವೈದ್ಯರು ಹೇಳಿದ್ದರಿಂದ ಚಿರಂಜೀವಿ ಸರ್ಜಾ ಕುಟುಂಬಸ್ಥರು ವಾಗ್ವಾದ ನಡೆಸಿದ್ದರು. ಬಳಿಕ, ಮೃತದೇಹವನ್ನು ಕೆ.ಆರ್​. ರಸ್ತೆಯಲ್ಲಿರುವ ಚಿರಂಜೀವಿ ಸರ್ಜಾ ಮನೆಗೆ ಆ್ಯಂಬುಲೆನ್ಸ್​ನಲ್ಲಿ ಕಳುಹಿಸಲಾಗಿತ್ತು.

ಇದನ್ನೂ ಓದಿ: Chiranjeevi Sarja Death: ತುಮಕೂರಿನ ಮಧುಗಿರಿಯಲ್ಲಿ ನಾಳೆ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ

ಇದೀಗ ವೈದ್ಯಕೀಯ ವರದಿ ಅಪೋಲೋ ವೈದ್ಯರ ಕೈ ಸೇರಿದ್ದು, ಕೊರೋನಾ ನೆಗೆಟಿವ್ ಬಂದಿದೆ. ನಾಳೆ ಮಧ್ಯಾಹ್ನ ತುಮಕೂರಿನ ಮಧುಗಿರಿಯಲ್ಲಿ ತನ್ನ ತಾತನ ಸಮಾಧಿ ಪಕ್ಕದಲ್ಲೇ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಈಗಾಗಲೇ ಚಿರಂಜೀವಿ ಸರ್ಜಾ ಅವರ ಮನೆಯಲ್ಲಿ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಕೊರೋನಾ ಹಿನ್ನೆಲೆ ಹೆಚ್ಚು ಜನದಟ್ಟಣೆ ಆಗದಂತೆ ಪೊಲೀಸರು ಬಂದೋಬಸ್ತ್ ವಹಿಸಿದ್ದಾರೆ.

ಇದನ್ನೂ ಓದಿ: Chiranjeevi Sarja Death: ಅಮ್ಮನಾಗಲಿದ್ದ ಮೇಘನಾ​ಗೆ ಬಿಗ್ ಶಾಕ್; ಮಗುವಿನ ಮುಖ ನೋಡದೆ ಕಣ್ಮುಚ್ಚಿದ ಚಿರು ಸರ್ಜಾ!

ನಿನ್ನೆ ಸಂಜೆ ಚಿರಂಜೀವಿ ಸರ್ಜಾಗೆ ಎದೆನೋವು ಕಾಣಿಸಿಕೊಂಡಿತ್ತು. ಆದರೆ, ಇದುವರೆಗೂ ಅವರಿಗೆ ಆ ರೀತಿಯ ಯಾವುದೇ ಸಮಸ್ಯೆ ಕಂಡುಬರದ ಯಾರೂ ಅದನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇಂದು ಮಧ್ಯಾಹ್ನ 3 ಗಂಟೆಗೆ ತಪಾಸಣೆಗಾಗಿ ಚಿರು ಅಪೋಲೋ ಆಸ್ಪತ್ರೆಯಲ್ಲಿ ಅಪಾಯಿಂಟ್​ಮೆಂಟ್ ತೆಗೆದುಕೊಂಡಿದ್ದರು. ಆದರೆ, ಆಸ್ಪತ್ರೆಗೆ ಹೊರಡುವ ಮೊದಲೇ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಾಗಲೇ ಅವರ ಪಲ್ಸ್​ ಕಡಿಮೆಯಾಗಿತ್ತು. ವೈದ್ಯರು ತಕ್ಷಣ ಚಿಕಿತ್ಸೆ ಶುರು ಮಾಡಿದ್ದರಿಂದ ಚಿರುಗೆ ಪ್ರಜ್ಞೆ ಬಂದಿತ್ತು. ಆದರೆ, ಮತ್ತೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಅವರು ಕೊನೆಯುಸಿರೆಳೆದಿದ್ದಾರೆ. ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ 4 ತಿಂಗಳ ಗರ್ಭಿಣಿಯಾಗಿದ್ದು, ಸದ್ಯದಲ್ಲೇ ಚಿರು ಅಪ್ಪನಾಗಲಿದ್ದರು.
First published: June 7, 2020, 9:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories