HOME » NEWS » Coronavirus-latest-news » CHINESE RESEARCHERS SAID THEY DISCOVERED A NEW BATCH OF CORONAVIRUSES IN BATS SESR

Coronaviruses: ಬಾವಲಿಗಳಲ್ಲಿ ಕೊರೋನಾ ಸೋಂಕಿನ ಹೊಸ ತಳಿ ಪತ್ತೆ ಮಾಡಿದ ಚೀನಾ ಸಂಶೋಧಕರು

ಬಾವಲಿ ಮತ್ತು ಮನುಷ್ಯರಿಂದ ಕೊರೋನಾ ವೈರಸ್​ ಸೋಂಕು ಸಾಕುಪ್ರಾಣಿಗಳು ಮತ್ತು ಕಾಡು ಪ್ರಾಣಿಗಳಿಗೂ ತಗಲುವ ಸಾಧ್ಯತೆ ಇದೆ, ಹಂದಿ, ದನಕರು, ನಾಯಿ, ಬೆಕ್ಕು, ಇಲಿ, ಕೋಳಿ ಗಳಿಗೂ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ.

news18-kannada
Updated:June 12, 2021, 8:25 PM IST
Coronaviruses: ಬಾವಲಿಗಳಲ್ಲಿ ಕೊರೋನಾ ಸೋಂಕಿನ ಹೊಸ ತಳಿ ಪತ್ತೆ ಮಾಡಿದ ಚೀನಾ ಸಂಶೋಧಕರು
ಬಾವಲಿ ಮತ್ತು ಮನುಷ್ಯರಿಂದ ಕೊರೋನಾ ವೈರಸ್​ ಸೋಂಕು ಸಾಕುಪ್ರಾಣಿಗಳು ಮತ್ತು ಕಾಡು ಪ್ರಾಣಿಗಳಿಗೂ ತಗಲುವ ಸಾಧ್ಯತೆ ಇದೆ, ಹಂದಿ, ದನಕರು, ನಾಯಿ, ಬೆಕ್ಕು, ಇಲಿ, ಕೋಳಿ ಗಳಿಗೂ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ.
  • Share this:
ಇಡೀ ಮನುಕುಲವನ್ನೇ ಕಾಡುತ್ತಿರುವ  ಕೊರೋನಾ ಸೋಂಕು ಈಗ ಬಾವುಲಿಗಳಲ್ಲಿ ಕಂಡು ಬಂದಿದೆ. ಚೀನಾ ಸಂಶೋಧಕರು ಬಾವುಲಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ದೃಢಪಡಿಸಿದ್ದಾರೆ. ಬಾವುಲಿಗಳಲ್ಲಿ ಹೊಸ ತಳಿಯ ಕೊರೋನಾ ಸೋಂಕು ಕಾಣಿಸಿಕೊಂಡಿದೆ, ಇದು ಕೋವಿಡ್​ 19ನ ಎರಡನೇ ತಳಿಯಾಗಿರಬಹುದು ಎಂದು ಸಿಎನ್​ಎನ್​ ತಿಳಿಸಿದೆ. ಚೀನಾದ ಯುನಾನ್​ ಪ್ರಾಂತ್ಯದ ಶಾಂಡೊಂಗ್​ ವಿಶ್ವವಿದ್ಯಾಲಯದ ವೈಫೆಂಗ್​ ಶಿ ಮತ್ತು ಅವರ ಸಹೋದ್ಯೋಗಿಗಳು ಈ ಕುರಿತು ಸಂಶೋಧನೆ ನಡೆಸಿದ್ದಾರೆ. ಅಧ್ಯಯನದ ವೇಳೇ ಬಾವುಲಿಗಳಲ್ಲಿ ಅನೇಕ ತಳಿಯ ಕೊರೋನಾ ವೈರಸ್​ ಸೋಂಕು ಪತ್ತೆಯಾಗಿದ್ದು, ಇದರಲ್ಲಿ ಯಾವ ಸೋಂಕು ಮನುಷ್ಯರಿಗೆ ಹರಡುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಗಮನಿಸಬೇಕಿದೆ.

2019 ಮೇ ಮತ್ತು 2020ರ ನವೆಂಬರ್​ನಲ್ಲಿ ಅರಣ್ಯದಲ್ಲಿ ವಾಸವಾಗಿರುವ ಬಾವಲಿಗಳ ಮೂತ್ರ, ಮಲ ಮತ್ತು ಗಂಟಲು ದ್ರವವನ್ನು ಪಡೆದು ಪರೀಕ್ಷೆ ನಡೆಸಲಾಗಿದೆ. SARS-CoV-2 ನಂತಹ ನಾಲ್ಕು ಕೊರೋನಾ ವೈರಸ್​ ಒಳಗೊಂಡತೆ 24 ಕೊರೋನಾ ವೈರಸ್ ಜೋನೋಮ್​ಗಳನ್ನು ಒಟ್ಟು ಗೂಡಿಸಲಾಗಿದೆ ಎಂದು ಸೆಲ್​ ನಿಯತಕಾಲಿಕೆಯಲ್ಲಿ ತಿಳಿಸಲಾಗಿದೆ. ​ಇದರಲ್ಲಿ ರೈನೋಲೋಫಸ್ ಪುಸಿಲಸ್ ಎಂಬ ಹಾರ್ಸ್‌ಶೂ ಬ್ಯಾಟ್ ಪ್ರಭೇದದಿಂದ ತೆಗೆದ RpYN06 ಎಂಬ ವೈರಲ್ ಮಾದರಿಯು ಪ್ರಸ್ತುತ ಸಾಂಕ್ರಾಮಿಕಕ್ಕೆ ಕಾರಣವಾಗುವ SARS-CoV-2 ವೈರಸ್‌ಗೆ ತಳೀಯವಾಗಿ ಹೋಲುತ್ತದೆ ಎಂದು ಕಂಡುಬಂದಿದೆ ಎಂದು ತಿಳಿಸಲಾಗಿದೆ

2020ರಲ್ಲಿ ಥೈಲ್ಯಾಂಡ್​ನಲ್ಲಿ ಸಂಗ್ರಹಿಸಲಾದ SARS-CoV-2 ಜೊತೆಗೂ ಕೂಡ ವೈರಸ್​ಗಳು ನಿಕಟ ಸಂಬಂಧ ಹೊಂದಿದೆ. ಈ ವೈರಸ್​ ಹೊಂದಿರುವ ಬ್ಯಾಟ್​ಗಳು ಜನ ಸಂದಣಿಯಲ್ಲಿ ಹಾರಾಡುತ್ತಿದೆ ಎಂಬುದು ಈ ಮೂಲಕ ಸ್ಪಷ್ಟವಾಗಿದೆ

ಮನುಷ್ಯರನ್ನು ಕಾಡುತ್ತಿರುವ ಈ ಕೊರೋನಾ ಸೋಂಕು ಎಲ್ಲಿಂದ ಬಂದಿದೆ ಎಂಬ ಬಗ್ಗೆ ನಿರಂತರ ತನಿಖೆ ನಡೆಯುತ್ತಿದ್ದು, ಬಾವಲಿ​ ನಿಂದ ಇದು ಬಂದಿದೆ ಎಂಬುದನ್ನು ತಿಳಿಸುತ್ತದೆ. ಈ ಮಧ್ಯೆ ಈ ಸೋಂಕು ಪ್ರಾಣಿಗಳಿಗೂ ತಗುಲಿರುವ ಸಾಧ್ಯತೆ ಇದೆ, ಕಾರಣ 2002-2004ರಲ್ಲಿ ಏಕಾಏಕಿ SARS ಸೋಂಕು ಸಿವೆಟ್​ ಬೆಕ್ಕಿನಲ್ಲಿ ಕಂಡು ಬಂದಿತು.

ಇದನ್ನು ಓದಿ: ಸೋಂಕಿತರಿಗೆ ವಿವಿಧ ರೀತಿ ರಕ್ತ ಪರೀಕ್ಷೆ ನಡೆಸಲು ಕಾರಣ ಇದು

ಜಲಾಶಯಗಳಲ್ಲಿ ಸ್ಥಾನ ಮಾಡಿಕೊಂಡಿರುವ ಬಾವಲಿಗಳು ಹೆಚ್ಚಾಗಿ ಮನುಷ್ಯರಲ್ಲಿ ಅನೇಕ ಕಾಯಿಲೆಗೆ ಕಾರಣವಾಗಿದೆ, ಎಂಬೋಲಾ ವೈರಸ್​, ಮಾರ್ಬರ್ಗ್​ವೈರಸ್​, ಹೆಂಡ್ರ ವೈರಸ್​ಗಳಿ ಸಂಬಂಧ ಹೊಂದಿವೆ. ಬಾವಲಿ ಮತ್ತು ಮನುಷ್ಯರಿಂದ ಕೊರೋನಾ ವೈರಸ್​ ಸೋಂಕು ಸಾಕುಪ್ರಾಣಿಗಳು ಮತ್ತು ಕಾಡು ಪ್ರಾಣಿಗಳಿಗೂ ತಗಲುವ ಸಾಧ್ಯತೆ ಇದೆ, ಹಂದಿ, ದನಕರು, ನಾಯಿ, ಬೆಕ್ಕು, ಇಲಿ, ಕೋಳಿ ಗಳಿಗೂ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ.
ಸೋಂಕು ಅತಿಹೆಚ್ಚು ಕಂಡು ಬಂದಿರುವ ಬಾವಲಿಗಳು ಹಾರ್ಸ್​ ಶೂ ಪ್ರಭೇದದವು , 2017ರಲ್ಲಿ ಯುನ್ನಾನ್​ನ ಗುಹೆಯಲ್ಲಿ SARS ಸೋಂಕಿನ ತಳಿ ಹಾರ್ಸ್​ಶೂ ಬಾವಲಿಗಳಲ್ಲಿರುವುದನ್ನು ಪತ್ತೆ ಮಾಡಲಾಗಿತ್ತು.ಗುರುವಾರ ವರದಿಯಲ್ಲಿ ತಿಳಿಸಿರುವ ಮೂರು ಮಾದರಿಗಳು SARSಗೆ ಹೋಲುತ್ತದೆ. ಸ್ಥಳೀಯ ಮಟ್ಟದ್ಲಿ ಬಾವಲಿ ಕೊರೋನಾ ವೈರಸ್​ನ ವೈವಿಧ್ಯತೆಯನ್ನು ಇದು ತೋರಿಸುತ್ತದೆ. SARS-CoV-2 ಮತ್ತು SARS-CoV ಎರಡರ ನಡುವೆ ಸಂಬಂಧವಿದೆ. ಸ್ಯಾಂಪಲ್​ ಪಡೆದ ಬಾವಲಿಗಳು ಸಾಮಾನ್ಯವಾಗಿ ಆಗ್ನೇಯ ಏಷ್ಯಾ, ನೈರುತ್ಯ ಚೀನಾ, ವಿಯೆಟ್ನಾಂ, ಲಾವೋಸ್​ ಸೇರಿದಂತೆ ಹಲವು ಕಡೆ ಕಂಡು ಬರುತ್ತವೆ.
SARS-COV-2 ಪ್ರಾಣಿಗಳಿಂದಲೇ ಅದರಲ್ಲೂ ಬಾವುಲಿಗಳಿಂದಲೇ ಬಂದಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ವರದಿಯಲ್ಲಿ ತಿಳಿಸಿದೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Seema R
First published: June 12, 2021, 8:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories