• Home
  • »
  • News
  • »
  • coronavirus-latest-news
  • »
  • ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾಗೆ ಮುಖಭಂಗ; ದೋಷಪೂರಿತ ಕೊರೋನಾ ಟೆಸ್ಟ್ ಕಿಟ್ ವಾಪಸ್ ಕಳಿಸಿದ ಸ್ಪೇನ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾಗೆ ಮುಖಭಂಗ; ದೋಷಪೂರಿತ ಕೊರೋನಾ ಟೆಸ್ಟ್ ಕಿಟ್ ವಾಪಸ್ ಕಳಿಸಿದ ಸ್ಪೇನ್

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸುಮಾರು 1,50,000 ತರ್ತು ಕೊರೋನಾ ವೈರಸ್​ ಟೆಸ್ಟ್​ ಕಿಟ್​ಗಳನ್ನು ಚೀನಾ ಜೆಕ್​ ಗಣರಾಜ್ಯಕ್ಕೆ ಈ ತಿಂಗಳ ಆರಂಭದಲ್ಲಿ ರಫ್ತು ಮಾಡಿತ್ತು. ಆದರೆ, ಆ ಕಿಟ್​ಗಳಲ್ಲಿ ಲೋಪದೋಷ ಕಂಡುಬಂದಿದೆ.

  • Share this:

    ನವದೆಹಲಿ: ಕೊರೋನಾ ಬಾಧಿತ ದೇಶವಾದ ಸ್ಪೇನ್​ ಮತ್ತು ಜೆಕ್​ ಗಣರಾಜ್ಯಕ್ಕೆ ಚೀನಾ ದೊಡ್ಡ ಪ್ರಮಾಣದಲ್ಲಿ ಕೊರೋನಾ ಪರೀಕ್ಷಾ ಕಿಟ್​ಗಳನ್ನು ರಫ್ತು ಮಾಡಿತ್ತು. ಆದರೆ, ಟೆಸ್ಟ್​ ಕಿಟ್ ಲೋಪದಿಂದ ಕೂಡಿದ ಕಾರಣಕ್ಕೆ ಟೆಸ್ಟ್​ ಕಿಟ್​ಗಳನ್ನು ಸ್ಪೇನ್​ ಚೀನಾಗೆ ವಾಪಸ್ ಕಳುಹಿಸಿದೆ. ಇದರೊಂದಿಗೆ ಚೀನಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಮುಖಭಂಗವಾಗಿದೆ.

    ಸ್ಪೇನ್​ನಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಚೀನಾದಿಂದ ಟೆಸ್ಟ್​ಗಳನ್ನು ಯಥೇಚ್ಛ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗಿತ್ತು. ಆದರೆ, ಚೀನಾದ ಟೆಸ್ಟ್ ಕಿಟ್​ನಲ್ಲಿ ಲೋಪದೋಷಗಳು ಕಂಡು ಬಂದಿವೆ. ಈಗಾಗಿ ಎಲ್ಲ ಟೆಸ್ಟ್​ ಕಿಟ್​ಗಳನ್ನು ಸ್ಪೇನ್​ ಚೀನಾಗೆ ವಾಪಸ್ ಕಳುಹಿಸಿದೆ.

    ಸುಮಾರು 1,50,000 ತರ್ತು ಕೊರೋನಾ ವೈರಸ್​ ಟೆಸ್ಟ್​ ಕಿಟ್​ಗಳನ್ನು ಚೀನಾ ಜೆಕ್​ ಗಣರಾಜ್ಯಕ್ಕೆ ಈ ತಿಂಗಳ ಆರಂಭದಲ್ಲಿ ರಫ್ತು ಮಾಡಿತ್ತು. ಆದರೆ, ಆ ಕಿಟ್​ಗಳಲ್ಲಿ ಲೋಪದೋಷ ಕಂಡುಬಂದಿದೆ. ಸ್ಪೇನ್​ನ ಸ್ಥಳೀಯ ಸುದ್ದಿ ಸಂಸ್ಥೆಯ ತಜ್ಞರು ಹೇಳುವ ಪ್ರಕಾರ, ಆ ಪರೀಕ್ಷಾ ಕಿಟ್​ಗಳು ಹತ್ತು ಅಥವಾ ಹದಿನೈದು ನಿಮಿಷದಲ್ಲಿ ವರದಿ ತಯಾರಿಸಬೇಕು. ಜೊತೆಗೆ ಅವು ಸಾಮಾನ್ಯವಾಗಿ ಇತರ ಪರೀಕ್ಷೆಗಳಿಗಿಂತ ಕಡಿಮೆ ನಿಖರವಾಗಿದೆ. ಏಕೆಂದರೆ ಅವುಗಳು ದೋಷಪೂರಿತವಾಗಿವೆ. ದೇಶವು ಸಾಂಪ್ರದಾಯಿಕ ಪ್ರಯೋಗಾಲಯ ಪರೀಕ್ಷೆಗಳನ್ನು ಅವಲಂಬಿಸುವುದನ್ನು ಮುಂದುವರಿಸಿದೆ, ಅದರಲ್ಲಿ ದಿನಕ್ಕೆ 900 ವರದಿಗಳನ್ನು ನೀಡಲಾಗುತ್ತಿದೆ.

    ಸ್ಪೇನ್​ ಆರೋಗ್ಯ ಸಚಿವಾಲಯವು 1,00,000 ಟೆಸ್ಟ್​ ಕಿಟ್​ಗಳಿಗೆ 5,46,000 ಡಾಲರ್ ಪಾವತಿಸಿದೆ. ಆಂತರಿಕ ಸಚಿವಾಲಯ ಉಳಿದ 50 ಸಾವಿರ ಕಿಟ್​ಗಳ ಬೆಲೆಯನ್ನು ಪಾವತಿಸಿದೆ.

    ಸ್ಪೇನ್​ಗೆ ರಫ್ತು ಮಾಡಲಾಗಿದ್ದ 9 ಸಾವಿರ ಪರೀಕ್ಷಾ ಕಿಟ್​ಗಳಲ್ಲಿ ಅತಿಯಾದ ಲೋಪದೋಷಗಳು ಕಂಡುಬಂದಿದ್ದರಿಂದ ಅವುಗಳನ್ನು ಚೀನಾಗೆ ವಾಪಸ್​ ಕಳುಹಿಸಲಾಗಿದೆ.

    ಇದನ್ನು ಓದಿ: ಜಗತ್ತಿನಾದ್ಯಂತ 24,087ಕ್ಕೇರಿದ ಕೊರೋನಾ ಸಾವಿನ ಸಂಖ್ಯೆ; ಯಾವ ದೇಶದಲ್ಲಿ ಎಷ್ಟು ಸಾವು? ಇಲ್ಲಿದೆ ಮಾಹಿತಿ

    ಇಡೀ ವಿಶ್ವವನ್ನೇ ಇಂದು ಕೊರೋನಾ ದೊಡ್ಡ ಪೆಡಂಭೂತದಂತೆ ಕಾಡುತ್ತಿದೆ. ಚೀನಾದಿಂದ ಆರಂಭವಾದ ಈ ಸೋಂಕು ಪ್ರಸ್ತುತ ಇಟಲಿ, ಫ್ರಾನ್ಸ್ ನಂತರ ರಾಷ್ಟ್ರಗಳನ್ನು ಮಾತ್ರವಲ್ಲ ಖುದ್ದು ವಿಶ್ವದ ದೊಡ್ಡಣ ಅಮೆರಿಕವನ್ನೂ ತತ್ತರಿಸುವಂತೆ ಮಾಡಿದೆ. ಜೆಕ್​ ಗಣರಾಜ್ಯ ಸ್ಪೇನ್​ನಲ್ಲೂ ಕರಾಳ ನರ್ತನ ತೋರಿರುವ ಕೊರೋನಾ ಈವರೆಗೂ 4365 ಜನರನ್ನು ಬಲಿಪಡೆದುಕೊಂಡಿದೆ. ಸಾವಿನ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿ ಸ್ಪೇನ್‌ ಇದ್ದು ನಿನ್ನೆ ಒಂದೇ ದಿನದಲ್ಲಿ ಸುಮಾರು 650 ಜನ ಸಾವಿಗೀಡಾಗಿದ್ದಾರೆ.


     

    First published: