ಕೊರೋನಾ ಸೊಂಕು ಮತ್ತೆ ವ್ಯಾಪಕವಾಗಿ ಹರಡಿರುವ ಶಂಕೆ: ಬೃಹತ್​ ಪರೀಕ್ಷೆಗೆ ಮುಂದಾದ ಚೀನಾ

ಇಲ್ಲಿಯವರೆಗೆ ಸುಮಾರು 92,364 ಕೋವಿಡ್ ಪ್ರಕರಣಗಳನ್ನು ವರದಿಯಾಗಿದೆ. ಇದರಲ್ಲಿ ಇನ್ನೂ 602 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರಲ್ಲಿ 15 ಮಂದಿಯ ಸ್ಥಿತಿ ತೀವ್ರ ಹದಗೆಟ್ಟಿದೆ ಎಂದು ಕ್ಸಿನ್ಹುವಾ ವರದಿಯೊಂದು ತಿಳಿಸಿದೆ. ಈವರೆಗೆ 4,636 ಮಂದಿ  ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚೀನಾ ದೇಶದ ನಾನ್‌ಜಿಂಗ್‌ ಪ್ರಾಂತ್ಯದ ಜೆನುಗುಸ್​ ಭಾಗದ ವಿಮಾನ ನಿಲ್ದಾಣದ 17  ಜನರನ್ನು ಕೋವಿಡ್​ ಟೆಸ್ಟ್​ಗೆ ಒಳಪಡಿಸಿದಾಗ ಅದರಲ್ಲಿ 9 ಜನ ಕಾರ್ಮಿಕರಿಗೆ ಕೊರೋನಾ ಸೊಂಕು ದೃಡಪಟ್ಟ ಹಿನ್ನೆಯಲ್ಲಿ, ಚೀನಾ ಸರ್ಕಾರವು ಈಗ ಅತಿ ದೊಡ್ಡ ಟೆಸ್ಟಿಂಗ್​ ಮಾಡಲು ಸಜ್ಜಾಗಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಸಿನ್ಹುವಾ  ವರದಿ ಮಾಡಿದೆ. ಅಲ್ಲದೆ ಈ ಭಾಗದ ಎಲ್ಲಾ ವಿಮಾನ ಹಾರಾಟ ಹಾಗೂ ಬುಕ್ಕಿಂಗ್​ ಸೌಲಭ್ಯವನ್ನು ತಾತ್ಕಲಿಕವಾಗಿ ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ. ಇದರಲ್ಲಿ 5 ಜನ ರೋಗ ಲಕ್ಷಣ ಇಲ್ಲದವರು ಎಂದು ಗುರುತಿಸಲಾಗಿದೆ.

  ಉಳಿದ ಮೂವರು ಶಂಕಿತರನ್ನು  ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ  ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ನಾನ್ಜಿಂಗ್ ಲುಕೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಬೇಕಿದ್ದ ಸುಮಾರು 521 ವಿಮಾನಗಳನ್ನು ರದ್ದುಪಡಿಸಲಾಗಿದೆ. ಈ ಮೊದಲು ವಿಮಾನ ನಿಲ್ದಾದಲ್ಲಿ 663 ಒಳಬರುವ ಮತ್ತು ಹೊರಹೋಗುವ ವಿಮಾನಗಳನ್ನು ಬುಧವಾರದಿಂದ ಕಾರ್ಯ ನಿರ್ವಹಿಸಲು ನಿರ್ಧರಿಸಲಾಗಿತ್ತು.

  ಕರೋನ ವೈರಸ್ ಪ್ರಕರಣಗಳು ಪತ್ತೆಯಾದ ನಂತರ ನಗರದ ಜಿಯಾಂಗ್ನಿಂಗ್ ಜಿಲ್ಲೆಯಲ್ಲಿ ಬೃಹತ್ ನ್ಯೂಕ್ಲಿಯಿಕ್ ಆ್ಯಸಿಡ್​ ಪರೀಕ್ಷಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ. 9.3 ದಶಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ನಾನ್‌ಜಿಂಗ್, ಜಿಯಾಂಗ್ನಿಂಗ್ ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಈ ಪರಿಕ್ಷೆಯನ್ನು ಕೈಗೊಳ್ಳಲಾಗಿದೆ.  ಅಭಿಯಾನ ಮುಗಿದ ನಂತರ ನಗರಾದ್ಯಂತ ಅತ್ಯಂತ ತ್ವರಿತವಾಗಿ ಪರೀಕ್ಷೆಯನ್ನು ನಡೆಸಲು ಯೋಜಿಸಿದೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ.

  ಅನವಶ್ಯಕವಾಗಿ ಯಾರು ಕೂಡ ನಗರವನ್ನು ತೊರೆಯಬಾರದು ಎಂದು ಸ್ಥಳೀಯ ಆಡಳಿತ ಜನರಿಗೆ ಸೂಚಿಸಿದೆ. ನಗರದಿಂದ ಹೊರ ಹೋಗುವವರು ನೆಗಿಟಿವ್​ ಪ್ರಮಾ ಪತ್ರ ತೊರಿಸಬೇಕು. ಈ ವರದಿ  48 ಗಂಟೆಗಳ ಮೊದಲು ಮಾಡಿಸಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ನಾನ್‌ಜಿಂಗ್ ಅಧಿಕಾರಿಗಳು ನಾಲ್ಕು ವಿಭಾಗಗಳಾಗಿ ಇಡೀ ನಗರಗಳನ್ನು ವಿಂಗಡಿಸಿದ್ದು. ಅತಿ ಸೂಕ್ಷ್ಮ, ಸೂಕ್ಷ್ಮ, ಸರಾಸರಿ ಸೋಂಕು ಇರುವ ಪ್ರದೇಶಗಳು ಹಾಗೂ ಅತ್ಯಂತ ಕಡಿಮೆ ಸೋಂಕು ಹರಡಿರಬಹುದಾದ ಪ್ರದೇಶಗಳಾಗಿ ವಿಭಾಗಿಸಿದ್ದು, ಅತ್ಯಂತ ತ್ವರಿತವಾಗಿ ಸೊಂಕು ಹರಡುವುದನ್ನು ಕಡಿಮೆ ಮಾಡುವ ಸಲುವಾಗಿ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ. ಅಲ್ಲದೆ ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆಗಳನ್ನು ನಿಲ್ಲಿಸುವ ಹಾಗೂ ಜನರ ಓಡಾಟವನ್ನು ಮತ್ತೆ ನಿರ್ಬಂಧಿಸಬಹುದು ಎಂದು ಹೇಳಲಾಗಿದೆ.

  ಇದನ್ನೂ ಓದಿ: ಕಚೇರಿಗೆ ಬಂದು ಕೆಲಸ ಮಾಡಿ ಎಂದ ಇನ್ಪೋಸಿಸ್​: ಮತ್ತೆ ಬಾಗಿಲು ತೆರೆಯುತ್ತಿದೆ ಐಟಿ ದೈತ್ಯ

  2019 ರ ಡಿಸೆಂಬರ್‌ನಲ್ಲಿ ವುಹಾನ್‌ನಲ್ಲಿ ಕರೋನವೈರಸ್ ಕಂಡುಬಂದ ದಿನದಿಂದ ಇಲ್ಲಿಯವರೆಗೆ ಸುಮಾರು 92,364 ಕೋವಿಡ್ ಪ್ರಕರಣಗಳನ್ನು ವರದಿಯಾಗಿದೆ. ಇದರಲ್ಲಿ ಇನ್ನೂ 602 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರಲ್ಲಿ 15 ಮಂದಿಯ ಸ್ಥಿತಿ ತೀವ್ರ ಹದಗೆಟ್ಟಿದೆ ಎಂದು ಕ್ಸಿನ್ಹುವಾ ವರದಿಯೊಂದು ತಿಳಿಸಿದೆ. ಈವರೆಗೆ 4,636 ಮಂದಿ  ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: