ಕೊರೋನಾ ಸೈಡ್ ಎಫೆಕ್ಟ್: ಆನ್​​​ಲೈನ್ ತರಗತಿಗಳಿಂದ ಮಕ್ಕಳ ದೃಷ್ಟಿಗೇ ಕಂಟಕ

ಕಣ್ಣು ಮಿಟುಕಿಸುವುದು (ಬ್ಲಿಂಕಿಂಗ್) ಕಡಿಮೆಯಾಗಿ ಕಣ್ಣು ಬೇಗ ಒಣಗುತ್ತಿದೆ. ಕಣ್ಣಲ್ಲಿ ನೀರು ಸುರಿಯುವುದು, ಉರಿ, ಕಣ್ಣು ಕೆಂಪಾಗುವುದು, ತಲೆನೋವು ಮುಂತಾದ ನಾನಾ ಸಮಸ್ಯೆಗಳಿಂದ ಮಕ್ಕಳು ಬಳಲುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಆ.30): ಇತ್ತೀಚೆಗೆ ದೊಡ್ಡವರಿಗಿಂತ ಹೆಚ್ಚು ಮಕ್ಕಳು ನೇತ್ರತಜ್ಞರನ್ನು ಭೇಟಿ ಮಾಡ್ತಿದ್ದಾರಂತೆ. ಕಣ್ಣು ಉರಿ, ನೋವು, ನಿರಂತರವಾಗಿ ಕಣ್ಣಿನಿಂದ ನೀರು ಸುರಿಯುವುದು ಸಾಮಾನ್ಯವಾಗಿ ಮಕ್ಕಳನ್ನು ಈಗೀಗ ಹೆಚ್ಚು ಕಾಡುತ್ತಿರುವ ಸಮಸ್ಯೆ. ಇದಕ್ಕೆಲ್ಲಾ ಕಾರಣ ಆನ್​ಲೈನ್ ತರಗತಿಗಳು ಅಂತಾರೆ ವೈದ್ಯರು.

ಮಕ್ಕಳು ಈಗ ದಿನಕ್ಕೆ ಕನಿಷ್ಠ 4 ತಾಸುಗಳಾದರೂ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಪರದೆಯ ಮೇಲೇ ಕಣ್ಣು ನೆಟ್ಟಿರಬೇಕು. ಕೇವಲ‌ ಶಾಲಾ ಪಾಠ ಪ್ರವಚನಗಳಿಗೆ ಮಾತ್ರವಲ್ಲ, ಎಲ್ಲಾ ಕಲಿಕೆಯೂ ಈಗ ಆನ್ ಲೈನ್ ಆಗ್ಬಿಟ್ಟಿದೆ. ಡ್ಯಾನ್ಸ್, ಪೇಂಟಿಂಗ್, ಯೋಗ ಏನು ಕಲಿಯುವುದಾದರೂ ಆನ್ ಲೈನ್ ಒಂದೇ ಈಗಿನ ಮಾರ್ಗ ಎನ್ನುವಂತಾಗಿದೆ.

ಹಾಗಾಗಿ ಮಕ್ಕಳು ಅನಿವಾರ್ಯವಾಗಿ ಬಹುಪಾಲು ಕಂಪ್ಯೂಟರ್ ಅಥವಾ ಸೆಲ್ ಫೋನ್ ಪರದೆಯನ್ನೇ ನೋಡುವಂತಾಗಿದೆ. ಅವುಗಳಿಂದ ಹೊಮ್ಮುವ ಹಾನಿಕಾರಕ ಕಿರಣಗಳು ಮಕ್ಕಳ ಕಣ್ಣುಗಳಿಗೆ ಹಾನಿ ಮಾಡುತ್ತಿವೆ. ಇದೆಲ್ಲದರಿಂದ ಸ್ಕ್ರೀನ್ ಟೈಮ್ ಹೆಚ್ಚಾಗಿರೋದ್ರಿಂದ ಮಕ್ಕಳು ಕಣ್ಣಿನ ಉರಿ, ತಲೆನೋವು ಮುಂತಾದ ಸಮಸ್ಯೆಗಳಿಂದ ಬಳಲುವುದು ಹೆಚ್ಚಾಗಿದೆ.

ಕಣ್ಣು ಮಿಟುಕಿಸುವುದು (ಬ್ಲಿಂಕಿಂಗ್) ಕಡಿಮೆಯಾಗಿ ಕಣ್ಣು ಬೇಗ ಒಣಗುತ್ತಿದೆ. ಕಣ್ಣಲ್ಲಿ ನೀರು ಸುರಿಯುವುದು, ಉರಿ, ಕಣ್ಣು ಕೆಂಪಾಗುವುದು, ತಲೆನೋವು ಮುಂತಾದ ನಾನಾ ಸಮಸ್ಯೆಗಳಿಂದ ಮಕ್ಕಳು ಬಳಲುತ್ತಿದ್ದಾರೆ.

ಇನ್ನು ಈಗಾಗಲೇ ಕನ್ನಡಕ ಬಳಸುತ್ತಿರುವವರ ಕನ್ನಡಕದ ಪವರ್ ಹೆಚ್ಚಿದೆ. ಒಟ್ಟಾರೆ ಈ ಸಮಸ್ಯೆಗಳಿಂದ ಬಳಲುವ ಮಕ್ಕಳ ಸಂಖ್ಯೆ ಶೇಕಡಾ 30 ರಷ್ಟು ಜಾಸ್ತಿಯಾಗಿದೆ ಎನ್ನುತ್ತಾರೆ ನೇತ್ರತಜ್ಞರು. ಮಕ್ಕಳ ಈ ಅವಸ್ಥೆ ನೋಡಿ ಪೋಷಕರು ಬಹಳ ಬೇಸರ ವ್ಯಕ್ತಪಡಿಸುತ್ತಾರೆ. ಬೇರೆ ಮಾರ್ಗವಿಲ್ಲದೆ ಮಕ್ಕಳನ್ನು ಕಂಪ್ಯೂಟರ್ ಎದುರು ಕೂರಿಸಬೇಕಾದ ಅನಿವಾರ್ಯತೆ ಇದೆ ಅನ್ನೋದು ಪೋಷಕರ ಅಳಲು.

ಇದನ್ನೂ ಓದಿ: ಭಾರೀ ಮಳೆ ಹಾನಿ: ರಾಜ್ಯಕ್ಕೆ ಬರಬೇಕಿದ್ದ ಕೇಂದ್ರ ಅಧ್ಯಯನ ತಂಡದ ಪ್ರವಾಸ ಮುಂದೂಡಿಕೆ

ಸದ್ಯಕ್ಕೆ ಎಲ್ಲಾ ಸರಿಯಾಗುವ ತನಕ ಅವಶ್ಯಕತೆ ಇದ್ದಾಗ ಮಾತ್ರ ಕಂಪ್ಯೂಟರ್ ಪರದೆ ಎದುರು ಮಕ್ಕಳು ಕುಳಿತುಕೊಳ್ಳಲು ಅವಕಾಶ ಮಾಡಿಕೊಡಿ. ಉಳಿದಂತೆ ಹೂದೋಟ ನಿರ್ವಹಣೆ, ಅಡುಗೆ ತಯಾರಿ ಮುಂತಾದ ತರಗತಿಗಳು ಬೇಡವಾದ ಹವ್ಯಾಸಗಳಲ್ಲಿ ಮಕ್ಕಳು ಹೆಚ್ಚು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳುವುದು ಉತ್ತಮ. ಇದರಿಂದ ಮಕ್ಕಳ ಮನಸ್ಸಿಗೆ ರಿಲ್ಯಾಕ್ಸ್ ಆಗುವುದರ ಜೊತೆಗೆ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು ಎನ್ನುತ್ತಾರೆ ವೈದ್ಯರು.
Published by:Ganesh Nachikethu
First published: