ಮಕ್ಕಳಲ್ಲೂ ಬಹುಬೇಗ ಹರಡತ್ತೆ Covid​​; ಎಚ್ಚರ

ಮಕ್ಕಳು ಸೂಪರ್ ಸ್ಪ್ರೆಡರ್‌ಗಳಾಗಿ ಬದಲಾಗುತ್ತಿದ್ದು ಯಾವುದೇ ವಿಶೇಷ ರೋಗ ಲಕ್ಷಣಗಳನ್ನು ತೋರ್ಪಡಿಸದ ಕಾರಣ ವೈರಸ್ ಅನ್ನು ಅವರಲ್ಲಿ ಗುರುತಿಸಲು ಸಾಧ್ಯವಾಗುತ್ತಿಲ್ಲ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೋವಿಡ್ -19ನ ಓಮೈಕ್ರಾನ್ (Omicron) ರೂಪಾಂತರವು ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿರುವುದರಿಂದಾಗಿ ಸೋಂಕನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ(Banaras Hindu University) ಆಣ್ವಿಕ ಜೀವಶಾಸ್ತ್ರ ಘಟಕದ ಮುಖ್ಯಸ್ಥ ಮತ್ತು ಪ್ರಸಿದ್ಧ ವೈರಾಲಜಿಸ್ಟ್ (Virologist) ಪ್ರೊಫೆಸರ್ ಸುನಿತ್ ಕುಮಾರ್ ಸಿಂಗ್ (Sunit Kumar Singh) ಹೇಳುತ್ತಾರೆ. ಈ ಕಾರಣದಿಂದಾಗಿ ಮಕ್ಕಳು ಸೋಂಕನ್ನು ಹರಡುವುದರಲ್ಲಿ ಸೂಪರ್-ಸ್ಪ್ರೆಡರ್‌ಗಳಾಗಿ ಬದಲಾಗುತ್ತಿದ್ದು ಅವರ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರಿಗೂ ಸೋಂಕು ತಗುಲುತ್ತಿದೆ ಎಂದಿದ್ದಾರೆ. ಹಿಂದೊಮ್ಮೆ ತಜ್ಞರು ಮಕ್ಕಳು ವೈರಸ್‌ಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ವರದಿ ಮಾಡಿದ್ದರು. ಆದರೆ ಈಗ ಮಕ್ಕಳು ರೋಗದ ಸೂಪರ್-ಸ್ಪ್ರೆಡರ್‌ಗಳಾಗುವ (Super-Spreaders) ಅಪಾಯ ಕಂಡು ಬರುತ್ತಿದೆ .

ವೈರಸ್ ಕಂಡೂ ಕಾಣದಂತೆ ಇರಲಿದೆ
ಈ ಸಂಬಂಧ ನ್ಯೂಸ್ 18 ಜೊತೆ ಮಾತನಾಡಿದ ಪ್ರೊಫೆಸರ್ ಸುನಿತ್ ಕುಮಾರ್ ಸಿಂಗ್, ರೋಗಲಕ್ಷಣವಿಲ್ಲದ ರೋಗಿಗಳು ಕೋವಿಡ್ -19 ಅನ್ನು ವೇಗವಾಗಿ ಹರಡುತ್ತಾರೆ ಎಂದು ಹೇಳಿದ್ದಾರೆ. ಕೇವಲ ಕೆಮ್ಮು ಮತ್ತು ಸೀನು ಮಾತ್ರ ಹೊಂದಿರುವ ಮಕ್ಕಳು ಕೂಡ ಸೋಂಕಿಗೆ ಒಳಗಾಗಿರುವ ಸಾಧ್ಯತೆಗಳಿವೆ ಎಂದಿದ್ದಾರೆ. ಡಾ. ಸುನೀತ್ ಕುಮಾರ್ ಅವರ ಪ್ರಕಾರ, ರೋಗಲಕ್ಷಣಗಳು ಕಂಡು ಬಂದರೂ , ಬರದಿದ್ದರೂ ವೈರಸ್ ಅನೇಕ ರೂಪಾಂತರಗಳನ್ನು ಹೊಂದಿದೆ. ಸೋಂಕಿಗೆ ಒಳಗಾದ ಅದೆಷ್ಟೋ ಮಕ್ಕಳು ಜ್ವರದ ಯಾವುದೇ ಲಕ್ಷಣಗಳನ್ನು ಹೊಂದಿರದೆ ಇರಬಹುದು ಆದರೆ ಅವರೊಳಗೆ ವೈರಸ್ ಕಂಡೂ ಕಾಣದಂತೆ ಮನೆ ಮಾಡಿರುವ ಸಾಧ್ಯತೆ ಹೆಚ್ಚು .

ಮಕ್ಕಳು ಸೂಪರ್ ಸ್ಪ್ರೆಡರ್‌ಗಳಾಗಿ ಬದಲಾಗುತ್ತಿದ್ದು ಯಾವುದೇ ವಿಶೇಷ ರೋಗ ಲಕ್ಷಣಗಳನ್ನು ತೋರ್ಪಡಿಸದ ಕಾರಣ ವೈರಸ್ ಅನ್ನು ಅವರಲ್ಲಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪೋಷಕರು ಮಾಡಬಹುದಾದ ಏಕೈಕ ಕೆಲಸವೆಂದರೆ ತಮ್ಮ ಮಕ್ಕಳನ್ನು ಸೋಂಕಿನಿಂದ ರಕ್ಷಿಸುವುದು ಎಂದು ಡಾ. ಸುನಿತ್ ಕುಮಾರ್ ಹೇಳಿದರು.

ಇದನ್ನೂ ಓದಿ: Corona Vaccine: 12-14 ವರ್ಷದೊಳಗಿನ ಮಕ್ಕಳಿಗೂ ಕೊರೋನಾ ಲಸಿಕೆ, ಯಾವಾಗಿಂದ ಹಂಚಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ 

ತಜ್ಞರ ಪ್ರಕಾರ ಮೂರನೇ ಅಲೆ
ಆದ್ದರಿಂದ ಪಾಲಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ . ಮಕ್ಕಳನ್ನು ಸಾರ್ವಜನಿಕ ಸ್ಥಳಗಳಿಗೆ ಕಳುಹಿಸಬಾರದು ಮತ್ತು ಅವರು ಹೊರಗೆ ಹೋದಾಗಲೆಲ್ಲಾ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಯನದ ಪ್ರಕಾರ, ವೈರಸ್  ಓಮೈಕ್ರಾನ್ ನ ಹೊಸ ಆವೃತ್ತಿಯ ಮೂರನೇ ಅಲೆಯು ಫೆಬ್ರವರಿ 2022ರಲ್ಲಿ ಉತ್ತುಂಗಕ್ಕೇರುವ ನಿರೀಕ್ಷೆಯಿದೆ. ತಜ್ಞರ ಪ್ರಕಾರ ಮೂರನೇ ಅಲೆಯು ಸನ್ನಿಹಿತವಾಗಿದೆ.

ಅವಳಿ ಬೆದರಿಕೆ
WHO ಡೆಲ್ಟಾ ಮತ್ತು ಓಮೈಕ್ರಾನ್ ರೂಪಾಂತರಗಳನ್ನು ಬೆದರಿಕೆ ಎಂದು ಘೋಷಿಸಿದೆ ಮತ್ತು ಅವುಗಳನ್ನು ಅವಳಿ ಬೆದರಿಕೆಗಳು ಎಂದು ಪರಿಗಣಿಸಿದೆ. ಈ ರೂಪಾಂತರಗಳಿಂದಾಗಿ ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹೊಸ ಪ್ರಕರಣಗಳು ಗರಿಷ್ಠ ಮಟ್ಟವನ್ನು ತಲುಪುತ್ತಿದ್ದು ಇದರ ಪರಿಣಾಮವಾಗಿ, ಆಸ್ಪತ್ರೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಿವೆ . ಹೊಸ ಪ್ರಕರಣಗಳ ಇತ್ತೀಚಿನ ಹೆಚ್ಚಳಕ್ಕೆ ಪ್ರತಿಕ್ರಿಯೆಯಾಗಿ, ಭಾರತ ಸರ್ಕಾರವು ರೋಗ ಹರಡುವುದನ್ನು ತಡೆಯಲು ಎಲ್ಲಾ ರಾಜ್ಯಗಳಿಗೆ ಹೊಸ ಸೂಚನೆಗಳನ್ನು ನೀಡಿದೆ. ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳು ಡೆಲ್ಟಾ ರೂಪಾಂತರಗಳನ್ನು ಬದಲಿಸುತ್ತಿವೆ.

ಇದನ್ನೂ ಓದಿ: Booster Dose: ನೀವು ಬೂಸ್ಟರ್ ಡೋಸ್ ಪಡೆಯಲು ಅರ್ಹರೆ? ಎಲ್ಲಾ ಅನುಮಾನಗಳಿಗೆ ವೈದ್ಯರ ಉತ್ತರ ಇಲ್ಲಿದೆ

ಓಮೈಕ್ರಾನ್ ರೋಗದ ಹರಡುವಿಕೆ:
ಓಮೈಕ್ರಾನ್, ಹೊಸ ರೂಪಾಂತರವು ದ್ವಿಗುಣಗೊಳ್ಳಲು ತೆಗೆದುಕೊಳ್ಳುತ್ತಿರುವ ಸಮಯ ಎರಡರಿಂದ ಮೂರು ದಿನಗಳು. ಡೆಲ್ಟಾ ಆವೃತ್ತಿಯ ಐದು ದಿನಗಳಿಗೆ ಹೋಲಿಸಿದರೆ ಓಮೈಕ್ರಾನ್ ತ್ವರಿತಗತಿಯಲ್ಲಿ ಹರಡುತ್ತಿದೆ . ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಾವೇರಿ ಆಸ್ಪತ್ರೆಯ ಹಿರಿಯ ಸಲಹೆಗಾರ ನಿಯೋನಾಟಾಲಜಿಸ್ಟ್ ಡಾ. ಶ್ರೀನಾಥ್ ಮಣಿಕಾಂತಿ ಅವರ ಪ್ರಕಾರ, ಡೆಲ್ಟಾದಲ್ಲಿನ ಎಂಟು ರೂಪಾಂತರಗಳಿಗೆ ಹೋಲಿಸಿದರೆ ಓಮೈಕ್ರಾನ್ ರೂಪಾಂತರವು ಸ್ಪೈಕ್ ಪ್ರೋಟೀನ್‌ನಲ್ಲಿ 34 ರೂಪಾಂತರಗಳನ್ನು ಹೊಂದಿದೆ. ಹಾಗಾದರೆ ಓಮೈಕ್ರಾನ್ ಡೆಲ್ಟಾಕ್ಕಿಂತ ಹೆಚ್ಚು ಅಪಾಯಕಾರಿಯೇ?.. ಈ ಪ್ರಶ್ನೆ ಇನ್ನೂ ಅನಿಶ್ಚಿತವಾಗಿದೆ ಎಂದು ತಜ್ಞರು ಹೇಳುತ್ತಾರೆ.

ಇದು ಅನೇಕ ದೇಶಗಳಲ್ಲಿ ವೇಗಗತಿಯಲ್ಲಿ ಹರಡುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ. ಅನೇಕ ದೇಶಗಳಲ್ಲಿ, ಆಸ್ಪತ್ರೆಯಲ್ಲಿ ದಾಖಲೀಕರಣ ಹೆಚ್ಚಾಗುತ್ತಿದ್ದು ಆರೋಗ್ಯ ವ್ಯವಸ್ಥೆಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಿವೆ. ಆದರೆ ಸಾವಿನ ಪ್ರಮಾಣವು ಡೆಲ್ಟಾ ರೂಪಾಂತರಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ ಎಂದು ವರದಿಯಾಗಿದೆ.
Published by:vanithasanjevani vanithasanjevani
First published: