Vaccine For children: ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ಮೊದಲು ಲಸಿಕೆ: ಆದ್ಯತೆ ಮೇರೆಗೆ ವ್ಯಾಕ್ಸಿನ್​ ನೀಡಲು ನಿರ್ಧಾರ

Vaccine for Children: ವಿವಿಧ ರೀತಿಯ ಆರೋಗ್ಯ ಸಮಸ್ಯೆ ಅನುಭವಿಸುತ್ತಿರುವ ಮಕ್ಕಳಿಗೆ ಮೊದಲು ಲಸಿಕೆ  ನೀಡಲಾಗುವುದು ಎಂದು ಎನ್​ಟಿಅಜಿಐ ಮುಖ್ಯಸ್ಥ ಎನ್​ಕೆ ಅರೋರಾ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನವದೆಹಲಿ (ಆ. 23):  ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ  ಆದ್ಯತೆ ಮೇರೆಗೆ ಲಸಿಕೆ ಹಾಕಲಾಗುವುದು ಎಂದು ರಾಷ್ಟ್ರೀಯ ರೋಗ ನಿರೋಧಕ ತಾಂತ್ರಿಕ ಸಲಹಾ ಗುಂಪಿನ ಸರ್ಕಾರಿ ಸಲಹಾ ಸಮಿತಿ ತಿಳಿಸಿದೆ. ಈಗಾಗಲೇ ಝೈಡಸ್​ ಕ್ಯಾಡಿಲಾ (Zydus Cadila) ಕಂಪನಿ ಮಕ್ಕಳಿಗಾಗಿ ಕೋವಿಡ್​ ಲಸಿಕೆ ಅಭಿವೃದ್ಧಿ ಪಡಿಸಿದೆ. ಝೈಕೋವ್​ ಡಿ ( Zycov-D vaccine) ಲಸಿಕೆಯನ್ನು 12 ವರ್ಷದ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗೆ ಕಳೆದ ವಾರ ಭಾರತೀಯ ಪ್ರಧಾನ ಔಷಧ ನಿಯಂತ್ರಣದಿಂದಲೂ (DCGI)  ಅನುಮತಿ ಪಡೆದಿದೆ. ವಿವಿಧ ರೀತಿಯ ಆರೋಗ್ಯ ಸಮಸ್ಯೆ ಅನುಭವಿಸುತ್ತಿರುವ ಮಕ್ಕಳಿಗೆ ಮೊದಲು ಲಸಿಕೆ  ನೀಡಲಾಗುವುದು ಎಂದು ಎನ್​ಟಿಅಜಿಐ ಮುಖ್ಯಸ್ಥ ಎನ್​ಕೆ ಅರೋರಾ ತಿಳಿಸಿದ್ದಾರೆ.

    ಇದರ ಜೊತೆಗೆ ವಯಸ್ಕರಿಗೂ ಕೂಡ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದಿದ್ದಾರೆ.
    ಭಾರತ್​ ಬಯೋಟೆಕ್​ (Bharat Biotech) ಮಕ್ಕಳಿಗಾಗಿ ಅಭಿವೃದ್ಧಿ ಪಡಿಸಿರುವ ಕೋವಾಕ್ಸಿನ್ (Covaxin)​ ಅನ್ನು ಕೂಡ ಇದೇ ಸೆಪ್ಟೆಂಬರ್​ ಕೊನೆ ಮತ್ತು ಅಕ್ಟೋಬರ್​ನಿಂದ ನೀಡಲಾಗುವುದು. ಸೆಪ್ಟಂಬರ್​​ನಿಂದ 10 ಕೋಟಿ ಕೋವಾಕ್ಸಿನ್​ ಡೋಸ್​ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಇದೇ ವೇಳೆ ಸಿಎನ್​ಬಿಸಿ ಟಿವಿ 18ಗೆ ಹೇಳಿದ್ದಾರೆ

    ಝೈಡಸ್​ ಕ್ಯಾಡಿಲಾದ ಮೂರು ಡೋಸ್​ ಕೋವಿಡ್​ 19 ಡಿಎನ್​ಎ (COVID-19 DNA) ಲಸಿಕೆ ತುರ್ತು ಬಳಕೆಗೆ ಅನುಮೋದಿಸಲಾಗಿದೆ. ಈ ಮೂಲಕ ದೇಶದಲ್ಲಿ ಅಧಿಕೃತವಾಗಿ ಬಳಕೆಗೆ ಅವಕಾಶ ಪಡೆದ ಆರನೇ ಲಸಿಕೆ ಇದಾಗಿದೆ.

    ಝೈಡಸ್​ ಕ್ಯಾಡಿಲಾ ಕಂಪನಿಯು ವಾರ್ಷಿಕವಾಗಿ 100 ದಶಲಕ್ಷದಿಂದ 120 ದಶಲಕ್ಷ ಡೋಸ್‌ಗಳ ಝೈಕೋವ್​ ಡಿ (ZyCoV-D) ತಯಾರಿಸಲು ಯೋಜಿಸಿದೆ. ಜೊತೆಗೆ ಲಸಿಕೆಯನ್ನು ಸಂಗ್ರಹಿಸಲು ಆರಂಭಿಸಿದೆ ಎಂದು ಕಂಪನಿ ತಿಳಿಸಿದೆ

    ಅಹ್ಮದಾಬಾದ್​ ಮೂಲದ ಝೈಡಸ್​ ಕಂಪನಿ ಈಗಾಗಲೇ ಕೋವಿಡ್​ 19 ಡಿಎನ್​ಎ ಲಸಿಕೆಯನ್ನು 28,000 ಜನರ ಮೇಲೆ ನಡೆದ ಪ್ರಯೋಗದಲ್ಲಿ ಈ ಲಸಿಕೆ 66.6% ಪರಿಣಾಮಕಾರಿ ಎಂದು ಸಾಬೀತಾಗಿದೆ. 3ನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿ 28,000 ಜನರ ಮೇಲೆ ಲಸಿಕೆಯನ್ನು ಪ್ರಯೋಗ ನಡೆಸಿದಾಗ ಶೇಕಡಾ 66.6 ರಷ್ಟು ಪ್ರಾಥಮಿಕ ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತದಲ್ಲಿ ಇದುವರೆ ನಡೆದ ಅತಿದೊಡ್ಡ ಲಸಿಕಾ ಪ್ರಯೋಗ ಇದಾಗಿದೆ.

    ಇದನ್ನು ಓದಿ: ನಮ್ಮ ತಾಯಿಗೆ ಕ್ಯಾನ್ಸರ್ ಆದಾಗ ಇಷ್ಟು ವೈದ್ಯಕೀಯ ಸೌಲಭ್ಯವಿರಲಿಲ್ಲ: ಸಿಎಂ ಬೊಮ್ಮಾಯಿ

    ಹೆಚ್ಚಿನ ಕೋವಿಡ್ -19 ಲಸಿಕೆಗಳನ್ನು ಪ್ರಸ್ತುತ ಎರಡು ಡೋಸ್‌ಗಳಲ್ಲಿ ನೀಡಲಾಗಿದ್ದು, ಒಂದೆರಡು ಲಸಿಕೆಗಳು ಕೇವಲ ಒಂದು ಡೋಸ್‌ನಲ್ಲಿ ಲಭ್ಯವಿದೆ. ಇದಕ್ಕೆ ವಿರುದ್ಧವಾಗಿ ಜೈಕೋವ್-ಡಿ 3 ಡೋಸ್‌ಗಳಲ್ಲಿ ನೀಡಲಾಗುವುದು, 28 ದಿನಗಳ ಮಧ್ಯಂತರದಲ್ಲಿ ಮೊದಲ ಮತ್ತು ಎರಡನೇ ಹಾಗೂ ಮೂರನೇ ಡೋಸ್‌ಗಳನ್ನು ನೀಡಲಾಗುತ್ತದೆ

    ಲಸಿಕೆಯ ಇನ್ನೊಂದು ವಿಶಿಷ್ಟವಾದ ವಿಷಯವೆಂದರೆ ಅದನ್ನು ನೀಡುವ ವಿಧಾನ. ಯಾವುದೇ ಸೂಜಿಯನ್ನು ಬಳಸದೆ, ಬದಲಾಗಿ ಒಂದು ಸ್ಪ್ರಿಂಗ್ ಚಾಲಿತ ಸಾಧನವು ಚರ್ಮದಲ್ಲಿ ಚಿಕ್ಕದಾಗಿ ತೂರಿಸಿ ಈ ಲಸಿಕೆಯ ದ್ರವ ನೀಡಲಾಗುತ್ತದೆ. ಜೈಕೋವ್-ಡಿ ಲಸಿಕೆಯನ್ನು ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:Seema R
    First published: