ಚಿಕ್ಕಮಗಳೂರು; ಉಪವಾಸವಿದ್ದ 18 ಕಾರ್ಮಿಕರಿಗೆ ಊಟ ನೀಡಿ ಮಾನವೀಯತೆ ಮೆರೆದ ಪೊಲೀಸರು

Lockdown In Chikmagalur | Thank You Coronavirus Helpers: ಚಿಕ್ಕಮಗಳೂರಿನ ವಿವಿಧ ಕಾಫಿ ಎಸ್ಟೇಟ್​ಗಳಲ್ಲಿ ಕೂಲಿ ಮಾಡುತ್ತಿದ್ದ ಕಾರ್ಮಿಕರು ಲಾಕ್​ಡೌನ್ ನಂತರ ಕೂಲಿಯೂ ಇಲ್ಲದೆ, ಊಟಕ್ಕೆ ದಿನಸಿಯೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು.

ಮಕ್ಕಳಿಗೆ ಊಟ ವಿತರಿಸುತ್ತಿರುವ ಚಿಕ್ಕಮಗಳೂರು ಪೊಲೀಸ್

ಮಕ್ಕಳಿಗೆ ಊಟ ವಿತರಿಸುತ್ತಿರುವ ಚಿಕ್ಕಮಗಳೂರು ಪೊಲೀಸ್

  • Share this:
ಚಿಕ್ಕಮಗಳೂರು (ಏ. 13): ಕೊರೋನಾ ಸೋಂಕಿನ ಭೀತಿಯಿಂದ ದೇಶವೇ ಲಾಕ್ ಡೌನ್ ಆಗಿದೆ. ಇದರಿಂದಾಗಿ, ಅನ್ನ, ನೀರು ಸಿಗದೆ ರಸ್ತೆ ಬದಿಯಲ್ಲೇ ಟೆಂಟ್ ಹಾಕಿಕೊಂಡು ಕುಳಿತಿದ್ದ ವಲಸೆ ಕಾರ್ಮಿಕರನ್ನು ಠಾಣೆಗೆ ಕರೆತಂದು ಊಟ ಕೊಟ್ಟು ಪೊಲೀಸರು ಮಾನವೀಯತೆ ಮೆರೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. 

ಲಾಕ್​ಡೌನ್​ ಆದಾಗಿನಿಂದ ಸರಿಯಾದ ಊಟವಿಲ್ಲದೆ, ಹಸಿವಿನಿಂದ ಬಳಲುತ್ತಿದ್ದ ಮಕ್ಕಳು ಆಹಾರದ ಬಾಕ್ಸ್ ನೋಡುತ್ತಿದ್ದಂತೆ ಖುಷಿಯಿಂದ ಕೈ ಚಾಚಿದ ದೃಶ್ಯ ಪೊಲೀಸರ ಕಣ್ಣಾಲಿಯಲ್ಲೂ ನೀರು ತರಿಸಿತ್ತು. ಕೂಲಿ ಅರಸಿ ಹಗರಿಬೊಮ್ಮನಹಳ್ಳಿಯಿಂದ ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ಗೆ ಬಂದಿದ್ದ 18 ಕಾರ್ಮಿಕರು ಕೆಲಸವೂ ಸಿಕ್ಕದೆ, ಅನ್ನ ಆಹಾರವೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಚಿಕ್ಕಮಗಳೂರು ತಾಲೂಕಿನ ಕೈಮರ ಬಳಿ ರಸ್ತೆ ಬದಿಯಲ್ಲೇ ಟೆಂಟ್ ಹಾಕಿಕೊಂಡು ಕುಳಿತಿದ್ದ ಕಾರ್ಮಿಕರನ್ನು ಗುರುತಿಸಿದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು, ಠಾಣೆಗೆ ಕರೆತಂದು ಊಟ ನೀಡಿ ಹಸಿವು ನೀಗಿಸಿದ್ದಾರೆ.

ಇದನ್ನೂ ಓದಿ: Bangalore Sealdown: ಸೀಲ್​ಡೌನ್​ ಆದ ಬೆಂಗಳೂರಿನ ವಾರ್ಡ್​ಗಳಲ್ಲಿ ಕಟ್ಟೆಚ್ಚರ; ಜನರ ಮೇಲೆ ಕಣ್ಣಿಡಲು ಸಿಸಿಟಿವಿ ಅಳವಡಿಕೆ

ಚಿಕ್ಕಮಗಳೂರಿನ ವಿವಿಧ ಕಾಫಿ ಎಸ್ಟೇಟ್​ಗಳಲ್ಲಿ ಕೂಲಿ ಮಾಡುತ್ತಿದ್ದ ಈ ಕಾರ್ಮಿಕರು ಲಾಕ್​ಡೌನ್ ನಂತರ ಕೂಲಿಯೂ ಇಲ್ಲದೆ, ಊಟಕ್ಕೆ ದಿನಸಿಯೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. 12 ಕಾರ್ಮಿಕರು, 6 ಮಕ್ಕಳನ್ನೊಳಗೊಂಡ ಕಾರ್ಮಿಕರಿಗೆ ಪೊಲೀಸರು ತಾತ್ಕಾಲಿಕ ಆಶ್ರಯ ಕಲ್ಪಿಸಿದ್ದಾರೆ. ಪೊಲೀಸರು ಆಹಾರದ ಪೊಟ್ಟಣ ತೆರೆಯುತ್ತಿದ್ದಂತೆ ಮಕ್ಕಳು ಕೈಚಾಚುವ ದೃಶ್ಯ ಮನಕಲಕುವಂತಿತ್ತು. ಕೂಲಿ ಅರಸಿ ವಲಸೆ ಬಂದ ಸಾವಿರಾರು ಕಾರ್ಮಿಕರು ಅತಂತ್ರರಾಗಿದ್ದು, ಸಿಕ್ಕಿದ ವಾಹನಗಳಲ್ಲಿ ಊರಿಗೆ ಹೋಗಲು ಯತ್ನಿಸಿ ಚೆಕ್​ಪೋಸ್ಟ್​ನಲ್ಲಿ ಸಿಕ್ಕಿಬಿದ್ದು ಆಶ್ರಯ ತಾಣ ಸೇರುತ್ತಿದ್ದಾರೆ. ಇಂತಹವರನ್ನು ಗುರುತಿಸಿ ಊಟೋಪಚಾರ ನೀಡುವ ಪೊಲೀಸರು, ತಾತ್ಕಾಲಿಕ ಆಶ್ರಯ ತಾಣಗಳಿಗೆ ಸೇರಿಸುತ್ತಿದ್ದಾರೆ.

Chikmagalur Police distribute food to Coffee Estate Workers.

ಹಕ್ಕಿಪಿಕ್ಕಿಗಳ ಅಳಲು:
ತಾಲೂಕಿನ ಮಲ್ಲೇನಹಳ್ಳಿ ಬಳಿ ಇರುವ ಹಕ್ಕಿಪಿಕ್ಕಿ ಕುಟುಂಬಗಳು ಊಟ ಕೊಡುವಂತೆ ಒತ್ತಾಯಿಸಿದ್ದಾರೆ. ದುಡಿಮೆ ಇಲ್ಲದೆ, ದಿನಸಿಯೂ ಇಲ್ಲದೆ ಪುಟ್ಟ ಮಕ್ಕಳು ಊಟವಿಲ್ಲದೆ ನೀರು ಕುಡಿದು ಬದುಕುವಂತಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಗೋಳು ಕೇಳುತ್ತಿಲ್ಲ ಎಂದು ದೂರಿದ್ದಾರೆ. ಊಟ ಕೊಡಿ ಎಂದು ತಟ್ಟೆ, ಲೋಟ ಹಿಡಿದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್ ಸಂದರ್ಭದಲ್ಲಿ ಇವೆಲ್ಲಾ ಬೇಕಿತ್ತಾ?; ಟ್ವಿಟರ್‌ನಲ್ಲಿ ವ್ಯಾಪಕ ಟೀಕೆಗೆ ಗುರಿಯಾಯ್ತು ಸಚಿವ ಸುಧಾಕರ್‌ ನಡೆ

ಹೊರ ಜಿಲ್ಲೆಗಳ ಗಡಿ ಬಂದ್:
ಹೊರ ಜಿಲ್ಲೆಗಳಿಂದ ಬರುವ ವಾಹನ ಸಂಚಾರ ಬಂದ್ ಮಾಡಲು ಜಿಲ್ಲಾಡಳಿತ ಗ್ರಾಮಾಂತರ ಪ್ರದೇಶದ ಸಂಪರ್ಕ ರಸ್ತೆಗಳಿಗೆ ಅಡ್ಡಲಾಗಿ ಮಣ್ಣು ಸುರಿಯುತ್ತಿದೆ. ಶನಿವಾರ ಹಾಸನ ಜಿಲ್ಲೆಯಿಂದ ಸಂಪರ್ಕ ಕಲ್ಪಿಸುವ ಗ್ರಾಮಾಂತರ ಸಂಪರ್ಕ ರಸ್ತೆಗೆ ಜೆಸಿಬಿ ಮೂಲಕ ಮಣ್ಣು ಸುರಿಯಲಾಗಿತ್ತು. ಮಣ್ಣಿನ ತಡೆಗೋಡೆ ಮೇಲೆ ಕಾರು ಹತ್ತಿಸಿಕೊಂಡು ಹೋಗುವ ಸಾಹಸಕ್ಕೆ ಕೈಹಾಕಿದ ಯುವಕರ ತಂಡದ ಕಾರು ಮಣ್ಣಿನಲ್ಲಿ ಸಿಕ್ಕಿಬಿದ್ದಿದೆ. ಕಾರಿನ ಚಾರ್ಸಿ ಮಣ್ಣಿಗೆ ಸಿಲುಕಿ ಲಾಕ್ ಆಗಿದ್ದು, ಕಾರು ಹಿಂದಕ್ಕೆ, ಮುಂದಕ್ಕೆ ಹೋಗದೆ ಸಿಕ್ಕಿ ಹಾಕಿಕೊಂಡಿದೆ.

ಮೂಡಿಗೆರೆಯಿಂದ ಗೆಂಡೆಹಳ್ಳಿ ಮೂಲಕ ಬೇಲೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೂ ಬಸ್ಕಲ್ ಬಳಿ ಮಣ್ಣು ಸುರಿದು ಸಂಪರ್ಕ ಬಂದ್ ಮಾಡಲಾಗಿದೆ. ಹೊರ ಜಿಲ್ಲೆಗಳಿಂದ ಬರುವ ವಾಹನಗಳನ್ನು ತಡೆಯಲು ಜಿಲ್ಲಾಡಳಿತ ಹರಸಾಹಸ ಮಾಡುತ್ತಿದ್ದು, ಪೊಲೀಸ್ ಇಲಾಖೆ ಸಹಯೋಗದಲ್ಲಿ ಇಂತಹ ರಸ್ತೆಗಳ ಮೇಲೆ ಕಲ್ಲುಮಣ್ಣು ಸುರಿದು ಸಂಪರ್ಕ ಬಂದ್ ಮಾಡುತ್ತಿದೆ.
First published: