ಚೀನಾ ವ್ಯಕ್ತಿಯನ್ನು ಕಂಡು ಬೆಚ್ಚಿದ ಚಿಕ್ಕಮಗಳೂರು ಜನತೆ; ರೂಮ್​ ಸಿಗದೆ ಪರದಾಡಿದ ಪ್ರವಾಸಿಗ

ಚೀನಾ ಎಂದರೆ ಕೊರೋನಾ ವೈರಸ್​ ಎನ್ನುವ ಮಟ್ಟಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಜನರು ಚೀನಾ ವ್ಯಕ್ತಿಯನ್ನು ಕಂಡೊಡನೆ ಹೆದರಲು ಇದು ಪ್ರಮುಖ ಕಾರಣ.

ಚೀನಾ ವ್ಯಕ್ತಿಗೆ ಮಾಸ್ಕ್​ ನೀಡಿದ ಜನತೆ

ಚೀನಾ ವ್ಯಕ್ತಿಗೆ ಮಾಸ್ಕ್​ ನೀಡಿದ ಜನತೆ

  • Share this:
ಚಿಕ್ಕಮಗಳೂರು (ಮಾ.19): ಚಿಕ್ಕಮಗಳೂರಿನ ಕೊಟ್ಟಿಗೆ ಹಾರದ ಜನತೆ ನಿನ್ನೆ ಅಕ್ಷರಶಃ ಹೆದರಿತ್ತು. ವ್ಯಕ್ತಿಯೋರ್ವ ರೂಮ್​ ಕೇಳಿಕೊಂಡು ಬಂದಿದ್ದ. ಆದರೆ, ಅವನನ್ನು ಕಂಡೊಡನೆ ಜನರು ಭಯಭೀತರಾಗಿದ್ದರು. ಅಷ್ಟೇ ಅಲ್ಲ, ಆತನಿಗೆ ರೂಮ್​ ಕೊಡಲು ನಿರಾಕರಿಸಿದ್ದರು! ಏಕೆಂದರೆ ಆತ ಚೀನಾ ಪ್ರವಾಸಿಗ. ಇದು ಜನತೆಲ್ಲಿ ಭಯಮೂಡಲು ಪ್ರಮುಖ ಕಾರಣ.

ಚೀನಾದಲ್ಲಿ ಮೊದಲು ಕಾಣಿಸಿಕೊಂಡಿದ್ದ ಕೊರೋನಾ ವೈರಸ್​ ಅಲ್ಲಿ 3,200ಕ್ಕೂ ಅಧಿಕ ಜನರ ಪ್ರಾಣವನ್ನು ಹಿಂಡಿದೆ. ಈಗ ಈ ವೈರಸ್​ ವಿಶ್ವಾದ್ಯಂತ ಹಬ್ಬುತ್ತಿದೆ. ಭಾರತದಲ್ಲೂ ಸೋಂಕಿತರ ಸಂಖ್ಯೆ 150ರ ಗಡಿ ದಾಟಿದೆ. ಹೀಗಾಗಿ ಸಹಜವಾಗಿಯೇ ಜನರಲ್ಲಿ ಆತಂಕ ಮೂಡಿದೆ. ಇದೇ ಸಂದರ್ಭದಲ್ಲಿ ಕೊಟ್ಟಿಗೆ ಹಾರದಲ್ಲಿ ಪುಂಗಿಮ್ ಹೆಸರಿನ ಚೀನಾ ಪ್ರವಾಸಿಗನೋರ್ವ ಉಳಿಯಲು ರೂಮ್ ಕೇಳಿಕೊಂಡು ಬಂದಿದ್ದ. ಚೀನಾ ವ್ಯಕ್ತಿ ಕಂಡೊಡನೆ ಸ್ಥಳೀಯರು ಭಯಭೀತರಾಗಿದ್ದಾರೆ.

ಚೀನಾ ಎಂದರೆ ಕೊರೋನಾ ವೈರಸ್​ ಎನ್ನುವ ಮಟ್ಟಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಜನರು ಚೀನಾ ವ್ಯಕ್ತಿಯನ್ನು ಕಂಡೊಡನೆ ಹೆದರಲು ಇದು ಪ್ರಮುಖ ಕಾರಣ. ಆತ ರೂಮ್ ಪಡೆಯಲು ಪರದಾಟ ನಡೆಸಿದರೂ ರೂಮ್​​ ಸಿಗಲಿಲ್ಲ. ಹೀಗಾಗಿ ಪುಂಗಿಮ್ ರಸ್ತೆ ಬದಿಯಲ್ಲೇ ಟೆಂಟ್ ಹಾಕಿ ಮಲಗಿದ್ದಾನೆ.

ಇದನ್ನೂ ಓದಿ: ಮಾ. 31ರವರೆಗೆ ಬಂದ್ ಮುಂದುವರಿಕೆ; ಕೊರೋನಾ ನಿಯಂತ್ರಣಕ್ಕೆ 200 ಕೋಟಿ ಬಿಡುಗಡೆ: ಸಿಎಂ ಯಡಿಯೂರಪ್ಪ

ಪುಂಗಿಮ್ ಬೆಂಗಳೂರಿನಿಂದ ಬುಲೆಟ್​ನಲ್ಲಿ ಬಂದಿದ್ದ. ಮಾಸ್ಕ್ ಧರಿಸದೇ ಎಲ್ಲೆಡೆ ಸಂಚರಿಸುತ್ತಿದ್ದ. ಹೀಗಾಗಿ ಪುಂಗಿಮ್​ಗೆ ಸ್ಥಳೀಯರು ಮಾಸ್ಕ್ ನೀಡಿದ್ದಾರೆ. ಈ ವೇಳೆ ಆತ ‘ನನಗೆ ಕೊರೋನಾ ಇಲ್ಲ ಭಯಬೀಳಬೇಡಿ’ ಎಂದಿದ್ದಾನೆ.
First published: