ಬೆಂಗಳೂರಿನಲ್ಲಿರುವವರನ್ನು ಹಳ್ಳಿಗಳಿಗೆ ವಾಪಾಸ್ ಕಳಿಸಿ; ಸಿಎಂಗೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮನವಿ

Coronavirus Lockdown News: ಬೆಂಗಳೂರಿನಲ್ಲಿ ಅಮಾಯಕರ ಮೇಲೆ ಪೊಲೀಸರ ದೌರ್ಜನ್ಯ ಹೆಚ್ಚಾಗಿದೆ. ಇದೀಗ ಅವರೆಲ್ಲರೂ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದಾರೆ ಎಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದ್ದಾರೆ.

news18-kannada
Updated:March 30, 2020, 9:47 AM IST
ಬೆಂಗಳೂರಿನಲ್ಲಿರುವವರನ್ನು ಹಳ್ಳಿಗಳಿಗೆ ವಾಪಾಸ್ ಕಳಿಸಿ; ಸಿಎಂಗೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮನವಿ
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಚಿಕ್ಕಮಗಳೂರು (ಮಾ. 30): ದೇಶಾದ್ಯಂತ ಲಾಕ್​ಡೌನ್ ಘೋಷಿಸಿರುವುದರಿಂದ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಯಾರೂ ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣಿಸುವಂತಿಲ್ಲ. ಇದರಿಂದಾಗಿ ಕರ್ನಾಟಕದಲ್ಲೂ ಅನೇಕ ಜನ ತಮ್ಮ ಊರಿಗೆ ತೆರಳಲಾಗದೆ ಸಿಕ್ಕಿಹಾಕಿಕೊಂಡಿದ್ದಾರೆ. ಅಂಥವರನ್ನು ಅವರವರ ಊರಿಗೆ ಕಳುಹಿಸಬೇಕೆಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಮಾಡಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಬೆಂಗಳೂರಿನಲ್ಲಿರುವ ಜನರನ್ನು ಅವರವರ ಊರಿಗೆ ಕಳುಹಿಸಿಕೊಡಿ. ದಯವಿಟ್ಟು ಯುವಕ-ಯುವತಿಯರನ್ನು ಅವರವರ ಊರಿಗೆ ಕಳುಹಿಸಿಕೊಡಿ. ಬೆಂಗಳೂರಿನಲ್ಲಿ ಅಮಾಯಕರ ಮೇಲೆ ಪೊಲೀಸರ ದೌರ್ಜನ್ಯ ಹೆಚ್ಚಾಗಿದೆ. ಇದೀಗ ಅವರೆಲ್ಲರೂ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದಾರೆ. ನಾವು ತೆಗೆದುಕೊಂಡ ತೀರ್ಮಾನದಿಂದ ಅನೇಕ ಜನರ ಬದುಕು ಬೀದಿಗೆ ಬಿದ್ದಿದೆ. ಅಂಥವರನ್ನು ಊರಿಗೆ ಕಳುಹಿಸಿ ಎಂದು ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅನಗತ್ಯ ಸುತ್ತಾಟಕ್ಕೂ ಬಳಕೆಯಾಗುತ್ತಿದೆ ಪಾಸ್?; ಪೊಲೀಸರಿಗೆ ಆರಂಭವಾಯ್ತು ಹೊಸ ತಲೆನೋವು

ಉತ್ತರಪ್ರದೇಶ, ದೆಹಲಿ ಸರ್ಕಾರಗಳು ನಡೆದುಕೊಂಡ ರೀತಿಯನ್ನು ನಮ್ಮ ಸರ್ಕಾರವೂ ಪಾಲಿಸಿದರೆ ಉತ್ತಮ. ಬೆಂಗಳೂರಿನಿಂದ ನನಗೆ ವೋಟ್ ಹಾಕಲು ಯುವಕ-ಯುವತಿಯರು ಬಂದಿದ್ದರು. ಈಗ ಅವರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ದಯವಿಟ್ಟು ಬೆಂಗಳೂರಿನಲ್ಲಿರುವವರ ವೈದ್ಯಕೀಯ ಪರೀಕ್ಷೆ ಮಾಡಿಸಿ ಹಳ್ಳಿಗಳಿಗೆ ಕಳುಹಿಸಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೆ.ಆರ್.ಮಾರುಕಟ್ಟೆಯ ಎಲ್ಲಾ ರಸ್ತೆಗಳು ಬಂದ್; ಹೆಚ್ಚುವರಿ ಪೊಲೀಸರ ನಿಯೋಜನೆ

 
First published: March 30, 2020, 9:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading