Chikmagalur: ಕಾಫಿನಾಡಿಗೆ ಬೆಂಗಳೂರೇ ಕಂಟಕ; ಗ್ರೀನ್​ ಜೋನ್​ನಲ್ಲಿದ್ದ ಚಿಕ್ಕಮಗಳೂರಿನಲ್ಲಿ ಕೊರೋನಾ ಹೆಚ್ಚಲು ಇದೇ ಕಾರಣ?

Chikmagalur Coronavirus | ಕೊರೋನಾ ಮೊದಲ ಅಲೆಯಲ್ಲಿ ಕಾಫಿನಾಡು ಮೊದಲ ಎರಡು ತಿಂಗಳು ಸಂಪೂರ್ಣ ಗ್ರೀನ್ ಜೋನ್​ನಲ್ಲಿತ್ತು. ಮೊದಲ ಅಲೆಯುದ್ಧಕ್ಕೂ ಜಿಲ್ಲೆಯಲ್ಲಿ ಒಂದೇ ದಿನ 276 ಕೇಸ್ ಬಂದದ್ದೇ ಹೆಚ್ಚು. ಆದರೆ ಇಂದು, ಇಡೀ ರಾಜ್ಯಕ್ಕೆ ನಂಬರ್ 1 ಸ್ಥಾನದಲ್ಲಿದೆ.

ಚಿಕ್ಕಮಗಳೂರು

ಚಿಕ್ಕಮಗಳೂರು

  • Share this:
ಚಿಕ್ಕಮಗಳೂರು : ಈಗ ಇಡೀ ರಾಜ್ಯದಲ್ಲಿ ಸೋಂಕು ಕಡಿಮೆಯಾಗಿದ್ದರೂ ರಾಜ್ಯದಲ್ಲಿ ಸೋಂಕಿತರು ಹೆಚ್ಚಿರುವ ಜಿಲ್ಲೆಯಲ್ಲಿ ಕಾಫಿನಾಡಿಗೆ ಅಗ್ರಸ್ಥಾನ ಅನ್ನೋದು ಗುಟ್ಟಾಗಿ ಉಳಿದಿಲ್ಲ. ಕೊರೋನಾ ಮೊದಲ ಅಲೆಯಲ್ಲಿ ಕಾಫಿನಾಡು ಮೊದಲ ಎರಡು ತಿಂಗಳು ಸಂಪೂರ್ಣ ಗ್ರೀನ್ ಜೋನ್​ನಲ್ಲಿತ್ತು. ಮೊದಲ ಅಲೆಯುದ್ಧಕ್ಕೂ ಜಿಲ್ಲೆಯಲ್ಲಿ ಒಂದೇ ದಿನ 276 ಕೇಸ್ ಬಂದದ್ದೇ ಹೆಚ್ಚು. ಆದರೆ ಇಂದು, ಇಡೀ ರಾಜ್ಯಕ್ಕೆ ನಂಬರ್ 1 ಸ್ಥಾನದಲ್ಲಿದೆ. ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಒಂದೇ ದಿನ 12,00ರ ಗಡಿ ದಾಟಿದೆ. ಇದಕ್ಕೆಲ್ಲಾ ಬೆಂಗಳೂರಿನಿಂದ ವಾಪಾಸ್ ಹಳ್ಳಿಗೆ ಬಂದವರೇ ಕಾರಣ ಎಂಬುದು ಖಾತ್ರಿಯಾಗಿದೆ. ಮೇ ತಿಂಗಳಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆ ಹಾಗೂ ರಾಜ್ಯದಿಂದ ಚಿಕ್ಕಮಗಳೂರಿಗೆ ಬಂದವರ ಸಂಖ್ಯೆ ಸುಮಾರು 18,000. ಅವರೆಲ್ಲಾ ಬಂದದ್ದು ಬೆಂಗಳೂರಿನಲ್ಲಿ ಸೋಂಕು ಹೆಚ್ಚಾದ ಬಳಿಕವೇ. ಹಾಗಾಗಿ, ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗಿರೋದನ್ನ ಜಿಲ್ಲಾಧಿಕಾರಿಗಳೇ ಒಪ್ಪಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗ ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ. ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬರಲು ಇನ್ನೂ ಎರಡು ವಾರ ಬೇಕು ಅನ್ನೋದನ್ನ ಜಿಲ್ಲಾಧಿಕಾರಿಗಳೇ ಒಪ್ಪಿದ್ದಾರೆ. ಇನ್ನು ಸಿಎಂ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಬಳಿಕ ಸಚಿವ ಅಂಗಾರ ಕೂಡ ಸೋಂಕು ಕಡಿಮೆ ಆಗ್ತಿದೆ ಎಂದಿದ್ದಾರೆ. ಜಿಲ್ಲೆಯಲ್ಲಿ ಮೇ 22ರಂದು ಇದ್ದ 7,250 ಪ್ರಕರಣಗಳು, ಮೇ 30ರ ವೇಳೆಗೆ 6,237ಕ್ಕೆ ಬಂದಿತ್ತು. ಜೂನ್ 9ರ ವೇಳೆಗೆ 4,422 ಕೇಸ್‍ಗಳಾಗಿವೆ. ದಿನದಿಂದ ದಿನಕ್ಕೆ ಕೋವಿಡ್ ಪ್ರಮಾಣ ಇಳಿಮುಖವಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು ಶೇಕಡಾ 54ರಷ್ಟು ಕೋವಿಡ್ ಮುಕ್ತ ಗ್ರಾಮಗಳಿವೆ. ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ ಯಶಸ್ವಿಯಾಗಿದೆ ಅಂತಾರೆ. ಇನ್ನೊಂದು ವಾರದಲ್ಲಿ ಜಿಲ್ಲೆಯಲ್ಲಿ ಸೋಂಕು ಕಡಿಮೆಯಾಗಲಿದೆ. ಹಾಗಾಗಿ, ಸಿಎಂ ಮತ್ತೊಂದು ವಾರ ಲಾಕ್‍ಡೌನ್ ಮುಂದುವರೆಸಲು ಅನುಮತಿ ಕೇಳಿದ್ದಾರೆ.

ಇದನ್ನೂ ಓದಿ: ಕೊರೋನಾ ಕಾಲದಲ್ಲಿ ರೈತರ ಗಾಯದ ಮೇರೆ ಬರೆ; ದುಬಾರಿಯಾದ ಬಿತ್ತನೆ ಬೀಜ

ಇನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಸ್ತುತ ಕೊರೋನಾ ಪಾಸಿಟಿವಿಟಿ ದರ ಶೇಕಡಾ 12ಕ್ಕಿಂತ ಹೆಚ್ಚಿದೆ. ಹಾಗಾಗಿ, ರೆಡ್ ಜ್ಹೋನ್ ಪಟ್ಟಿಯನ್ನ ಹಣೆಗೆ ಕಟ್ಟಿಕೊಂಡಿರೋ ಜಿಲ್ಲೆಗೆ ಇನ್ನೊಂದು ವಾರ ಲಾಕ್‍ಡೌನ್ ಮುಂದುವರೆಸೋದು ಅನಿವಾರ್ಯ ಹಾಗೂ ಅಗತ್ಯವಾಗಿದೆ. ಸಭೆಯಲ್ಲಿ ಸಿಎಂ ಜಿಲ್ಲಾ ಉಸ್ತುವಾರಿಗಳ ಕೈಗೇ ಅನ್‍ಲಾಕ್ ಕೀ ಕೊಟ್ಟಿದೆ. ಜಿಲ್ಲೆ ರಾಜ್ಯದಲ್ಲೇ ಸೋಂಕಿತರ ಸಂಖ್ಯೆಯಲ್ಲಿ ಮೊದಲಿದೆ. ಇಷ್ಟಾದ್ರು ಸಚಿವರು ಸಿಎಂ ಸಭೆ ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ ಅಂತಿರೋದನ್ನ ಕಂಡ್ರೆ ಮತ್ತಿನ್ನೇನು ಮಾಡ್ತಾರೋ ಅನ್ನೋದು ಜಿಲ್ಲೆಯ ಜನರಲ್ಲಿ ಆತಂಕ ತಂದಿದೆ.

ಒಟ್ಟಾರೆ, ಕೂಲ್ ಸಿಟಿ ಕಾಫಿನಾಡು ಮಳೆಗಾಲದಲ್ಲೂ ಹಾಟ್ ಆಗಿ ಬದಲಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏನೋ ಕಡಿಮೆಯಾಗ್ತಿದೆ. ನಿಜಕ್ಕೂ ಕಡಿಮೆಯಾಗ್ತಿದ್ಯೋ ಅಥವ ಸರ್ಕಾರ ಕ್ಲಾಸ್ ತೆಗೆದುಕೊಳ್ತಿದೆ. ಚಾರ್ಜ್ ಮಾಡ್ತಿದೆ ಅಂತಾ ಕಡಿಕೆಯಾಗ್ತಿದ್ಯೋ ಗೊತ್ತಿಲ್ಲ. ಸೋಂಕಿತನ ಪಾಸಿವಿಟಿವಿಟಿ ದರ ಮಾತ್ರ 12.35ರ ಸಮೀಪವಿದೆ. ಇಂದಿನ ಸಿಎಂ ಸಭೆಯಲ್ಲಿ ಸಿಎಂ, ಹೆಲ್ತ್ ಮಿನಿಸ್ಟು ಜಿಲ್ಲಾಡಳಿತಕ್ಕೆ ವಾಟ್ ಆರ್ ಯೂ ಡೂಯಿಂಗ್ ಅಂದಿದೆ. ಅದೇನೆ ಇರಲಿ, ಆದಷ್ಟು ಬೇಗ ಕಾಫಿನಾಡಲ್ಲಿ ಈ ಕೊರೋನಾ ಹೆಮ್ಮಾರಿ ಅಬ್ಬರ ತಗ್ಗಿದರೆ ಸಾಕು ಅಂತಿದ್ದಾರೆ ಕಾಫಿನಾಡಿಗರು.

ನಿನ್ನೆ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಹೆಚ್ಚಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ.

(ವರದಿ: ವೀರೇಶ್ ಹೆಚ್ ಜಿ)
Published by:Sushma Chakre
First published: