HOME » NEWS » Coronavirus-latest-news » CHIKMAGALUR CORONAVIRUS CHIKMAGALUR MAN DIES BY COVID 19 ON RAMADAN FESTIVAL BEFORE HE BECAME FATHER VCTV SCT

Chikmagalur: ರಂಜಾನ್ ಸಂಭ್ರಮವನ್ನೇ ಕಿತ್ತುಕೊಂಡ ಕೊರೊನಾ; ಚಿಕ್ಕಮಗಳೂರಿನಲ್ಲಿ 8 ತಿಂಗಳ ಗರ್ಭಿಣಿಯ ಗಂಡ ಕೊರೋನಾಗೆ ಬಲಿ

Chikmagalur Coronavirus Death: ಕೊರೋನಾ ಸೋಂಕಿತ ಯುವಕ ಎಂಟು ತಿಂಗಳ ಗರ್ಭಿಣಿ ಪತ್ನಿಯನ್ನು ಬಿಟ್ಟು ಇಹಲೋಕ ತ್ಯಜಿಸಿರುವ ಘಟನೆ ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆಯಲ್ಲಿ ನಡೆದಿದೆ.

news18-kannada
Updated:May 15, 2021, 9:32 AM IST
Chikmagalur: ರಂಜಾನ್ ಸಂಭ್ರಮವನ್ನೇ ಕಿತ್ತುಕೊಂಡ ಕೊರೊನಾ; ಚಿಕ್ಕಮಗಳೂರಿನಲ್ಲಿ 8 ತಿಂಗಳ ಗರ್ಭಿಣಿಯ ಗಂಡ ಕೊರೋನಾಗೆ ಬಲಿ
ಮೃತ ಯುವಕ
  • Share this:
ಚಿಕ್ಕಮಗಳೂರು : 1 ವಾರದ ಹಿಂದೆ ತಾಯಿಯನ್ನ ಕಳೆದುಕೊಂಡಿದ್ದ ಕೊರೋನಾ ಸೋಂಕಿತ ಯುವಕ ಎಂಟು ತಿಂಗಳ ಗರ್ಭಿಣಿ ಪತ್ನಿಯನ್ನು ಬಿಟ್ಟು ಇಹಲೋಕ ತ್ಯಜಿಸಿರುವ ಘಟನೆ ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆಯಲ್ಲಿ ನಡೆದಿದೆ. ಮೃತನನ್ನ 30 ವರ್ಷದ ಮದೀನ್ ಎಂದು ಗುರುತಿಸಲಾಗಿದೆ. ನಿನ್ನೆ ರಂಜಾನ್ ಹಬ್ಬ. ಸಂಭ್ರಮ-ಸಡಗರ ನೆಲೆಸಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ತಾಯಿ ಹಾಗೂ ಮಗನಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಇಬ್ಬರನ್ನೂ ನಗರದ ಕೆ.ಆರ್.ಎಸ್. ಆಸ್ಪತ್ರೆಗೆ ದಾಖಲಿಸಿದ್ದರು. ಕಳೆದ ವಾರವಷ್ಟೆ ಮದೀನ್ ತಾಯಿ ಶಾಯಿನ್ ಸಾವನ್ನಪ್ಪಿದ್ದರು.

ಇಂದು 30 ವರ್ಷದ ಮದೀನ್ ಕೂಡ ಸಾವನ್ನಪ್ಪಿದ್ದಾನೆ. ಆರೋಗ್ಯವಾಗಿದ್ದ ಮದೀನ್ ತಾಯಿ ತೀರಿಕೊಂಡ ಬಳಿಕ ತೀವ್ರ ಅಸ್ವಸ್ಥನಾಗಿದ್ದ. ಕಳೆದೊಂದು ವಾರದಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಮದೀನ್ ಇಂದು ಕೊನೆಯುಸಿರೆಳೆದಿದ್ದಾನೆ. ಆರೋಗ್ಯವಾಗಿದ್ದ ಮಗ ಹೇಗೆ ಸತ್ತ ಎಂದು ಮದೀನ್ ತಂದೆ ಶಫೀವುಲ್ಲಾ ಆತಂಕಕ್ಕೀಡಾಗಿದ್ದಾರೆ. ಒಂದು ಕ್ವಿಂಟಾಲ್ ಅಕ್ಕಿ ಮೂಟೆಯನ್ನ ಎತ್ತಿ ಎಸೆಯುತ್ತಿದ್ದ. ಅಷ್ಟು ಗಟ್ಟಿ ಇದ್ದವನು ಹೇಗೆ ವೀಕ್ ಆದ, ಸಾವನ್ನಪ್ಪಿದ ಎಂದು ಕಂಗಾಲಾಗಿದ್ದಾರೆ. ಗುರುವಾರ ರಾತ್ರಿ 1 ಗಂಟೆಯವರೆಗೆ ಸ್ನೇಹಿತರ ಜೊತೆ ಮಾತನಾಡಿರೋನು ನಿನ್ನೆ ಬೆಳಗ್ಗಿನ ಜಾವ ಸತ್ತಿದ್ದಾನೆ ಅಂದರೆ ನಂಬಲು ಅಸಾಧ್ಯ ಎಂದು ನೊಂದಿದ್ದಾರೆ. ನೊಂದ ತಂದೆ ಕೊರೋನಾ ಬಂತು ಅಂತ ಆಸ್ಪತ್ರೆಗೆ ಹೋಗಬೇಡಿ. ಆಸ್ಪತ್ರೆಗೆ ಹೋದೆ ಕಥೆ ಮುಗಿಯಿತು. ಮನೆಯಲ್ಲೇ ಕಷಾಯ ಕುಡಿದು ಹುಷಾರಾಗಿ. ಆಸ್ಪತ್ರೆಗೆ ಹೋದ್ರೆ ವಾಪಸ್ ಬರಲ್ಲ ಎಂದು ಅಸಮಾಧಾನದ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ಇಂದಿನಿಂದ ಭಾರೀ ಮಳೆ; ಶಿವಮೊಗ್ಗ, ಕರಾವಳಿ, ಕೊಡಗು ಸೇರಿ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್​

ಆಸ್ಪತ್ರೆಗಳು ನೆಪ ಮಾತ್ರಕ್ಕೆ ಅಷ್ಟೆ. ನಾವು ಆಸ್ಪತ್ರೆಯನ್ನ ದೂರಿ ಪ್ರಯೋಜನವಿಲ್ಲ. ನಮ್ಮ ವ್ಯವಸ್ಥೆಯೇ ಹಾಳಾಗಿ ಹೋಗಿದೆ. ಸರಿಯಾದ ವೈದ್ಯರಿಲ್ಲ. ರೋಗಿಗಳ ಆರೋಗ್ಯದ ಬಗ್ಗೆ ಸರಿಯಾಗಿ ನಿಗಾ ವಹಿಸೋರು ಇಲ್ಲ. ಹೇಗಾಗಿದೆ ಅಂದ್ರೆ ನಮ್ಮ ಅಕ್ಕಪಕ್ಕದ ಮನೆಯವರೇ ನಮ್ಮ ಮನೆಗೆ ಬರ್ತಿಲ್ಲ. ಸರಿಯಾಗಿ ಮಾತನಾಡ್ತಿಲ್ಲ. ಕೊರೋನಾ ಬಾರದಂತೆ ಎಚ್ಚರವಹಿಸೋದೇ ಉತ್ತಮ ಅಂತಾರೆ ಪತ್ನಿ-ಮಗನನ್ನ ಕಳೆದುಕೊಂಡ ಶಫಿಯುಲ್ಲಾ. ಎಲ್ಲಾ ಸರಿಯಾಗಿದ್ರೆ ಇವತ್ತು ನಮ್ಮ ಮನೆಯಲ್ಲಿ ಸಂಭ್ರಮ ಇರುತ್ತಿತ್ತು. ಹೆಂಡತಿ ಕಳೆದುಕೊಂಡೆ, ಮಗನನ್ನ ಕಳೆದುಕೊಂಡೆ, ಮಗನ ಪತ್ನಿ ಎಂಟು ತಿಂಗಳ ಗಭೀಣಿ. ನಮ್ಮ ಸಹಾಯಕ್ಕೆ ಯಾರೂ ಇಲ್ಲ ಅಂತ ಶಫಿವುಲ್ಲಾ ಬೇಸರ ತೊಂಡಿಕೊಂಡಿದ್ದಾರೆ.
Youtube Video

ಒಟ್ಟಾರೆ, ಚಿಕ್ಕಮಗಳೂರಲ್ಲಿ ಹದಿಹರೆಯದ ಯುವಕರೇ ಹೆಚ್ಚು ಕೊರೋನಾಗೆ ಬಲಿಯಾಗ್ತಿದ್ದಾರೆ. ಮೂಡಿಗೆರೆ ತಾಲೂಕಿನ ಗೌತಳ್ಳಿ ಗ್ರಾಮದ 22 ವರ್ಷದ ಶ್ರೇಯಸ್ ಎಂಬ ಯುವಕನೂ ಕೂಡ ಇದೇ ಕ್ರೂರಿ ಕೊರೋನಾದಿಂದ ಮಸಣ ಸೇರಿದ್ದಾನೆ. ಎದೆಮಟ್ಟಕ್ಕೆ ಬೆಳೆದ ಮಕ್ಕಳನ್ನ ಕಳೆದುಕೊಂಡು ಹೆತ್ತವರು ಕಣ್ಣೀರಿಡ್ತಿದ್ದಾರೆ. ಮದೀನ್, ಶ್ರೇಯಸ್‍ರಂತಹ ಗಟ್ಟಿಮುಟ್ಟಿನ ಯುವಕರೇ ಕೊರೋನಾಗೆ ಬಲಿಯಾಗ್ತಿರೋದು ಕಾಫಿನಾಡಿಗರನ್ನ ಮತ್ತಷ್ಟು ಆತಂಕಕ್ಕೀಡುಮಾಡಿದೆ.

(ವರದಿ: ವೀರೇಶ್ ಹೆಚ್ ಜಿ)
Published by: Sushma Chakre
First published: May 15, 2021, 9:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories