HOME » NEWS » Coronavirus-latest-news » CHIKKAMAGALURU PEOPLE NOT FALLOW COVID RULES WHILE CORONA TESTING VCTV LG

Chikkamagaluru: ಕೊರೋನಾ ಟೆಸ್ಟ್ ಮಾಡಿಸಲು ಮುಗಿಬಿದ್ದ ಕಾಫಿನಾಡಿನ ಜನ

ಕೋವಿಡ್–19 ಲಸಿಕೆಗಳಾದ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಭ್ಯವಿಲ್ಲ. 45 ವರ್ಷ ತುಂಬಿದವರಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, 18ವರ್ಷ ತುಂಬಿದವರಿಗೆ ಲಸಿಕೆ ಹಾಕುವ ಅಭಿಯಾನ ಆರಂಭವಾಗಿರುವುದಿಲ್ಲ ಎಂದು ನಗರದ ಜಿಲ್ಲಾ ಆಸ್ಪತ್ರೆಯ ಕೋವಿಡ್‌ ಲಸಿಕಾ ಕೇಂದ್ರದ ಸೂಚನಾ ಫಲಕದಲ್ಲಿ ಆರೋಗ್ಯ ಇಲಾಖೆ ತಿಳಿಸಿದೆ.

news18-kannada
Updated:May 4, 2021, 9:18 AM IST
Chikkamagaluru: ಕೊರೋನಾ ಟೆಸ್ಟ್ ಮಾಡಿಸಲು ಮುಗಿಬಿದ್ದ ಕಾಫಿನಾಡಿನ ಜನ
ಸಾಂದರ್ಭಿಕ ಚಿತ್ರ
  • Share this:
ಚಿಕ್ಕಮಗಳೂರು(ಮೇ 04): ಕಾಫಿನಾಡಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕೋವಿಡ್ ಟೆಸ್ಟ್ ಮಾಡಿಸಲು ಜನರು ಸ್ವಯಂ ಪ್ರೇರಿತವಾಗಿ ಮುಂದಾಗಿದ್ದಾರೆ. ಈ ವೇಳೆ ಕೋವಿಡ್ ಟೆಸ್ಟ್ ಕೇಂದ್ರದ ಬಳಿಯೇ ಸಾಮಾಜಿಕ ಅಂತರ ಮರೆತು ಜನರು ವರ್ತಿಸಿದ್ದಾರೆ. ಅಲ್ಲಿನ ಸಿಬ್ಬಂದಿಗಳು ಕೂಡ ಸಾಮಾಜಿಕ ಅಂತರ ಕಾಪಾಡುವಂತೆ ಸೂಚನೆ ಕೂಡ ನೀಡದೇ ಮೈಮರೆತು ಕೆಲಸದಲ್ಲಿ ನಿರತರಾಗಿದ್ದರು. ಮಾಸ್ಕ್ ಹಾಕಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರು ನಿರ್ಲಕ್ಷ್ಯ ವಹಿಸಿದ್ದಾರೆ. ಇವರಲ್ಲಿ ಕೊರೋನಾ ಸೋಂಕಿತರಿದ್ರೆ ಬೇರೆಯವರಿಗೂ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುತ್ತೆ. ಹೀಗಿದ್ದರೂ ಕೂಡ ಸಿಬ್ಬಂದಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು. ಗುಂಪು ಗುಂಪಾಗಿ ನಿಂತು  ಜನರು ಕೋವಿಡ್ ಟೆಸ್ಟ್  ಮಾಡಿಸಿಕೊಳ್ಳುತ್ತಿದ್ದರು. ಸಾಮಾಜಿಕ ಅಂತರ ಕಾಪಾಡದೇ ಇರುವುದರಿಂದ ಕೆಲವರು ಭಯದಲ್ಲೇ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳದೇ ವಾಪಸ್ಸು ತೆರಳಿದ್ರು. ಇದನ್ನ ಕಂಡ ಸ್ಥಳೀಯರು ಆರೋಗ್ಯಾಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ರು.

CoronaVirus: ಹಳ್ಳಿ ಭಾಗದಲ್ಲೇ ಹೆಚ್ಚುತ್ತಿದೆ ಸೋಂಕು; ಸ್ಥಳೀಯ ಗ್ರಾಮ ಪಂ‌ಚಾಯತಿಗಳಿಗೆ ನಿಲ್ಲದ ತಲೆನೋವು!

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಸಂಪೂರ್ಣ ಖಾಲಿಯಾಗಿದ್ದು ಲಸಿಕೆ ಹಾಕಿಸಿಕೊಳ್ಳೋಕೆ ಬಂದವರು ಹಾಗೇ ವಾಪಸ್ಸು ಹೋಗ್ತಿದ್ದಾರೆ. ಮೂರು ದಿನಗಳ ನಂತರ ಲಸಿಕಾ ಕೇಂದ್ರಗಳಿಗೆ ಬರುವಂತೆ ಲಸಿಕಾ ಕೇಂದ್ರದ ಮುಂಭಾಗ ಸೂಚನಾ ಫಲಕವನ್ನ ಆರೋಗ್ಯ ಇಲಾಖೆ ಹಾಕಿದೆ.

ಕೋವಿಡ್–19 ಲಸಿಕೆಗಳಾದ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಭ್ಯವಿಲ್ಲ. 45 ವರ್ಷ ತುಂಬಿದವರಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, 18ವರ್ಷ ತುಂಬಿದವರಿಗೆ ಲಸಿಕೆ ಹಾಕುವ ಅಭಿಯಾನ ಆರಂಭವಾಗಿರುವುದಿಲ್ಲ ಎಂದು ನಗರದ ಜಿಲ್ಲಾ ಆಸ್ಪತ್ರೆಯ ಕೋವಿಡ್‌ ಲಸಿಕಾ ಕೇಂದ್ರದ ಸೂಚನಾ ಫಲಕದಲ್ಲಿ ಆರೋಗ್ಯ ಇಲಾಖೆ ತಿಳಿಸಿದೆ. ಕೋವಿಡ್‌ ಲಸಿಕಾ ಕೇಂದ್ರಕ್ಕೆ ನೂರಾರು ಮಂದಿ ಲಸಿಕೆ ಪಡೆಯಲು ಆಗಮಿಸಿ ಬಾಗಿಲಿಗೆ ಅಂಟಿಸಿದ್ದ ಬೋರ್ಡ್‌ ನೋಡಿ, ಕಂಗಾಲಾಗಿ ಹಿಂತಿರುಗಿದ್ದಾರೆ.

ಲಸಿಕೆ ಬರುವ ದಿನಾಂಕದ ಬಗ್ಗೆ ಕೆಲವರು ಲಸಿಕಾ ಕೇಂದ್ರದ ಸಿಬ್ಬಂದಿ ಬಳಿ ವಿಚಾರಿಸಿಕೊಂಡು ನಿರಾಶೆಯಿಂದ ವಾಪಸ್ಸಾದರು. ಕೋವಿಡ್‌–19 ಹರಡುವಿಕೆ ದಿನೇ ದಿನೇ ಹೆಚ್ಚುತ್ತಿದೆ. ಲಸಿಕೆ ಪಡೆಯುವಂತೆ ಸರ್ಕಾರ ಪ್ರಚಾರ ಮಾಡುತ್ತಿದೆ. ಕೋವಿಡ್‌ ಪ್ರಥಮ ಲಸಿಕೆ ಪಡೆಯಲು ಜಿಲ್ಲಾಸ್ಪತ್ರೆಗೆ ಬಂದಿದ್ದೇನೆ. ಲಸಿಕೆ ಲಭ್ಯವಿಲ್ಲವೆಂದು ಬೋರ್ಡ್‌ ಹಾಕಿದ್ದಾರೆ. ಲಸಿಕೆಯ ಎರಡನೇ ಡೋಸ್‌ ಕೊಡಿಸಲು ನಡೆಯಲು ಆಗದ ವೃದ್ಧ, ವೃದ್ಧೆಯರನ್ನು ಕೆಲವರು ಕಾರುಗಳಲ್ಲಿ ಕರೆತಂದಿದ್ದಾರೆ. ಅವರು ಹತಾಶೆಯಿಂದ ಹಿಂತಿರುಗುವಂತಾಗಿದೆ, ಜಿಲ್ಲೆಗೆ ಶೀಘ್ರವಾಗಿ ಲಸಿಕೆ ಪೂರೈಕೆ ಮಾಡಬೇಕೆಂದು ಸರ್ಕಾರಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
Published by: Latha CG
First published: May 4, 2021, 9:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories