ಚಿಕ್ಕಮಗಳೂರಿನಲ್ಲಿ ಸಾವಿರ ಕೊರೋನಾ ಕೇಸ್​​: ಕೊನೆಗೂ ಓಪನ್ ಆಯ್ತು ಕೋವಿಡ್​​ ಟೆಸ್ಟ್​ ಲ್ಯಾಬ್

ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಲ್ಯಾಬ್ ನಿರ್ಮಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದರು. ಸ್ವಾಬ್ ಕೊಟ್ಟ ವಾರದ ಬಳಿಕ ವರದಿ ಬರುತ್ತಿದೆ. ಕೆಲವರದ್ದು ಸಾವನ್ನಪ್ಪಿ ಅಂತ್ಯಸಂಸ್ಕಾರವಾದ ಮೂರ್ನಾಲ್ಕು ದಿನಗಳ ನಂತರ ವರದಿ ಬರುತ್ತಿದೆ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಅಸಮಾಧಾನ ಆಕ್ರೋಶ ವ್ಯಕ್ತಪಡಿಸಿದ್ದರು.

news18-kannada
Updated:August 1, 2020, 10:15 PM IST
ಚಿಕ್ಕಮಗಳೂರಿನಲ್ಲಿ ಸಾವಿರ ಕೊರೋನಾ ಕೇಸ್​​: ಕೊನೆಗೂ ಓಪನ್ ಆಯ್ತು ಕೋವಿಡ್​​ ಟೆಸ್ಟ್​ ಲ್ಯಾಬ್
ಕೋವಿಡ್​ ಟೆಸ್ಟ್​​ ಲ್ಯಾಬ್​​ ಉದ್ಘಾಟನೆ
  • Share this:
ಚಿಕ್ಕಮಗಳೂರು(ಆ.01): ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸಾವಿರದ ದಾಟಿದೆ. ಇದುವರೆಗೂ 21 ಜನ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇಂದು ಕೋವಿಡ್-19 ಪರೀಕ್ಷೆ ನಡೆಸಲು ಲ್ಯಾಬ್ ನಿರ್ಮಿಣಗೊಂಡಿದೆ. ಚಿಕ್ಕಮಗಳೂರು ನಗರದ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಲ್ಯಾಬ್ ನಿರ್ಮಿಸಿದ್ದು, ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಲ್ಯಾಬ್ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಸಚಿವ ಸಿ.ಟಿ.ರವಿ ಕೂಡ ಇದ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತಾಡಿದ ಸಚಿವ ಸಿ.ಟಿ ರವಿ ಸ್ವ್ಯಾಬ್ ತೆಗೆದ 4 ಗಂಟೆಯೊಳಗೆ ವರದಿ ಸಿಗುವ ವ್ಯವಸ್ಥೆ ಮಾಡಲಾಗಿದೆ. ಇನ್ನು ಮುಂದೆ ಕೋವಿಡ್ ಪರೀಕ್ಷೆ ಫಲಿತಾಂಶ ತಡವಾಗುವುದಿಲ್ಲ. ಜಿಲ್ಲೆಯಲ್ಲಿ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಆರಂಭಿಸಬೇಕು ಎಂಬ ಬೇಡಿಕೆ ಈಡೇರಿದೆ. 1.48 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಲ್ಯಾಬ್ ನಿರ್ಮಾಣವಾಗಿದೆ ಎಂದರು.

ಇನ್ಮುಂದೆ ಹಾಸನ, ಬೆಂಗಳೂರು, ಶಿವಮೊಗ್ಗಕ್ಕೆ ಸ್ವ್ಯಾಬ್ ಟೆಸ್ಟ್​ಗೆ ಕಳಿಸುವ ಅಗತ್ಯವಿಲ್ಲ. ಜುಲೈ 15ರೊಳಗೆ ಲ್ಯಾಬ್ ಆರಂಭಿಸುವ ಉದ್ದೇಶವಿತ್ತು. ಆದರೆ, ಅತ್ಯಾಧುನಿಕ ಹಾಗೂ 5 ವರ್ಷ ಗ್ಯಾರಂಟಿ ಇರುವ ಅತ್ಯುತ್ತಮ ಉಪಕರಣಗಳನ್ನ ಇಂಗ್ಲೆಂಡಿನಿಂದ ಆಮದು ಮಾಡಿಕೊಳ್ಳಲಾಗಿದೆ. ಲಾಕ್ಡೌನ್ ಇದ್ದ ಕಾರಣ ಉಪಕರಣಗಳು ತಡವಾಗಿ ತಲುಪಿವೆ. ಆದ್ದರಿಂದ ತಡವಾಗಿ ಲ್ಯಾಬ್ ಆರಂಭಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಲ್ಯಾಬ್ ನಿರ್ಮಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದರು. ಸ್ವಾಬ್ ಕೊಟ್ಟ ವಾರದ ಬಳಿಕ ವರದಿ ಬರುತ್ತಿದೆ. ಕೆಲವರದ್ದು ಸಾವನ್ನಪ್ಪಿ ಅಂತ್ಯಸಂಸ್ಕಾರವಾದ ಮೂರ್ನಾಲ್ಕು ದಿನಗಳ ನಂತರ ವರದಿ ಬರುತ್ತಿದೆ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಅಸಮಾಧಾನ ಆಕ್ರೋಶ ವ್ಯಕ್ತಪಡಿಸಿದ್ದರು.

ಇಂದು ಲ್ಯಾಬ್ ಓಪನ್ ಆಗಿರೋದು ಜಿಲ್ಲೆಯ ಜನರಲ್ಲಿ ನೋವಿನ ನಡುವೆಯೂ ಸಂತಸ ತಂದಿದೆ. ಇನ್ನು ಮುಂದಾದ್ರು ಬೇಗ ವರದಿ ಸಿಗುತ್ತೆಂದು ಜಿಲ್ಲೆಯ ಜನ ಸಂತಸ ವ್ಯಕ್ತಪಡಿಸಿದ್ದಾರೆ. ಲ್ಯಾಬ್​​ಗೆ ಮೂವರು ವೈರಾಲಜಿಸ್ಟ್ ನೇಮಕ ಮಾಡಲಾಗಿದ್ದು, 2 ಪಾಳಿಯಲ್ಲಿ ಕೆಲಸ ಮಾಡುವ ಸಾಮರ್ಥ್ಯವಿದೆ.

ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿದರೆ 3 ಪಾಳಿಯಲ್ಲಿ ಕೆಲಸ ಮಾಡಬಹುದಾಗಿದೆ. ದಿನಕ್ಕೆ ಸಾವಿರ ಟೆಸ್ಟ್ ಮಾಡಿ ಫಲಿತಾಂಶ ಕೊಡಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ತುಮಕೂರಿನಲ್ಲಿ ಗ್ರಾಮವೊಂದು ಸೀಲ್​​ಡೌನ್​​: ಆಹಾರ ಸಾಮಗ್ರಿಯಿಲ್ಲದೇ ಹಸಿವಿನಿಂದ ಪರದಾಡುತ್ತಿರುವ ಜನ

ಕೋವಿಡ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ, ಡಿಸಿ ಡಾ ಬಗಾದಿ ಗೌತಮ್, ಎಡಿಸಿ ಕುಮಾರ್, ಜಿಲ್ಲಾ ಪಂಚಾಯತ್ ಸಿಇಓ ಪೂವಿತ, ಎಸ್ಪಿ ಅಕ್ಷಯ್ ಮಚ್ಚೀಂದ್ರಾ, ಡಿಎಚ್ಓ ಉಮೇಶ್, ಜಿಲ್ಲಾ ಸರ್ಜನ್ ಮೋಹನ್, ಜಿಲ್ಲಾ ಸರ್ವೇಕ್ಷಾಧಿಕಾರಿ ಮಂಜುನಾಥ್, ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಉಪಸ್ಥಿತರಿದ್ದರು.
Published by: Ganesh Nachikethu
First published: August 1, 2020, 10:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading