ಕೊರೋನಾ ಎಫೆಕ್ಟ್; ವದಂತಿ ಹಿನ್ನೆಲೆ ಕೋಲಾರದಲ್ಲಿ 9 ಸಾವಿರ ಕೋಳಿಗಳ ನಾಶ

ಕೋಳಿಯಿಂದ ಕೊರೋನಾ ವೈರಸ್​ ಹರಡುತ್ತಿದೆ ಎಂಬ ವದಂತಿ ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಾದ್ಯಂತ ಹರಿದಾಡುತ್ತಲೇ ಇದೆ. ಹೀಗಾಗಿ ಕೋಳಿ ಮಾಂಸದ ಮಾರಾಟದಲ್ಲಿ ಭಾರೀ ಕುಸಿತ ಉಂಟಾಗಿದ್ದು, ಬೆಲೆಯೂ 60 ರಿಂದ 90 ರೂ.ಗೆ ಇಳಿಕೆ ಕಂಡಿದೆ. ಪರಿಣಾಮ ಕೋಳಿ ಸಾಕಾಣೆ ಮಾಡುವವರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಕೋಲಾರ (ಮಾರ್ಚ್​ 09); ಜಿಲ್ಲೆಯಲ್ಲಿ ಕೋಳಿಗಳಿಂದ ಮಾರಣಾಂತಿಕ ಕೊರೋನಾ ವೈರಸ್​ ಹರಡುತ್ತಿದೆ ಎಂಬ ವದಂತಿ ಹಿನ್ನೆಲೆ 9 ಸಾವಿರ ಕೋಳಿಗಳನ್ನು ಸಾಮೂಹಿಕವಾಗಿ ನಾಶ ಮಾಡಿರುವ ಘಟನೆ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದಲ್ಲಿ ನಡೆದಿದೆ.

ಕೋಳಿಯಿಂದ ಕೊರೋನಾ ವೈರಸ್​ ಹರಡುತ್ತಿದೆ ಎಂಬ ವದಂತಿ ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಾದ್ಯಂತ ಹರಿದಾಡುತ್ತಲೇ ಇದೆ. ಹೀಗಾಗಿ ಕೋಳಿ ಮಾಂಸದ ಮಾರಾಟದಲ್ಲಿ ಭಾರೀ ಕುಸಿತ ಉಂಟಾಗಿದ್ದು, ಬೆಲೆಯೂ 60 ರಿಂದ 90 ರೂ.ಗೆ ಇಳಿಕೆ ಕಂಡಿದೆ. ಪರಿಣಾಮ ಕೋಳಿ ಸಾಕಾಣೆ ಮಾಡುವವರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ.

ಹೀಗಾಗಿ ಕೋಳಿಗಳು ಮಾರಾಟವಾದರೂ ಬೆಲೆ ಇಲ್ಲದೆ ನಷ್ಟ ಉಂಟಾಗುವುದು ಖಚಿತವಾಗಿದ್ದು, ಕಂಪೆನಿಯಿಂದಲೇ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಮಾಗೊಂದಿ ಗ್ರಾಮದ ಹೇಮಂತ್ ಎನ್ನುವವರು ತಮ್ಮ ಕೋಳಿ ಫಾರಂನಲ್ಲಿರುವ ಎಲ್ಲಾ ಕೋಳಿಗಳಿಗೂ ಕೆಮಿಕಲ್ ಆಹಾರ ನೀಡಿ ನಾಶ ಮಾಡಿದ್ದಾರೆ.

(ವರದಿ - ರಘುರಾಜ್ ಕೋಲಾರ)

ಇದನ್ನೂ ಓದಿ : ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣ; ಬೆಂಗಳೂರಿನಲ್ಲಿ ಸೋಂಕಿತ ಟೆಕ್ಕಿಗೆ ಮುಂದುವರಿದ ಚಿಕಿತ್ಸೆ
First published: