Corona Effect: ಮದುವೆಯಲ್ಲಿ ಸಾಮಾಜಿಕ ಅಂತರ; ಬಿದಿರಿನ ಕೋಲಿನಲ್ಲಿ ಹಾರ ಬದಲಾಯಿಸಿಕೊಂಡ ವಧು-ವರ!

ಇತ್ತೀಚೆಗೆ ಮದುವೆಯಾದ ನವಜೋಡಿಯೊಂದು ಸಾಮಾಜಿಕ ಅಂತರ ಕಾಯ್ದುಕೊಂಡು ವಿವಾಹವಾಗಿದ್ದಾರೆ. ಇವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆಯಲ್ಲಿ ವಧು ವರ ಹೂವಿನ ಹಾರವನ್ನು ಪರಸ್ಪರ ಬದಲಾಯಿಸಿಕೊಳ್ಳುವ ಸಂಪ್ರದಾಯವಿದೆ. ಈ ವೇಳೆ ವಧು ವರರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಬಿದಿರಿನ ಕೋಲಿನಲ್ಲಿ ಇಬ್ಬರು ಹಾರ ಬದಲಾಯಿಸಿಕೊಂಡಿದ್ದಾರೆ. ಮದುವೆಗೆ ಬಂದ ಅತಿಥಿಗಳು ಸಹ ದೂರದಲ್ಲಿಯೇ ನಿಂತು ಶುಭಹಾರೈಸಿದ್ದಾರೆ.

ಬಿದಿರುಕೋಲಿನಲ್ಲಿ ವರಮಾಲೆ

ಬಿದಿರುಕೋಲಿನಲ್ಲಿ ವರಮಾಲೆ

  • Share this:
Covid Effect: ಡೆಡ್ಲಿ ಕೊರೋನಾ ವೈರಸ್​ನಿಂದ ಜನಸಾಮಾನ್ಯರ ಜೀವನ ದಿಕ್ಕಿಲ್ಲದ ಹಡಗಿನಂತಾಗುತ್ತಿದೆ, ದಿಕ್ಕು ತೋಚದೆ ಕಂಗಲಾಗುತ್ತಿದ್ದಾರೆ. ಎಲ್ಲೆಡೆ ಜನತಾ ಕರ್ಫ್ಯೂ ಜಾರಿಯಾಗಿದ್ದು, ಸರ್ಕಾರದ ಆದೇಶದ ಪ್ರಕಾರ ಬದುಕುವುದು ಅನಿವಾರ್ಯವಾಗಿದೆ. ಇನ್ನು ಸರ್ಕಾರ ಸೂಚಿಸಿರುವ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಇದು ಎಲ್ಲಾ ಸಭೆ ಸಮಾರಂಭಕ್ಕೂ ಅನ್ವಯವಾಗಿದೆ. ಕೆಲವರು ಸರ್ಕಾರದ ಕೋವಿಡ್ ನಿಯಮಗಳನ್ನು ಚಾಚುತಪ್ಪದೇ ಪಾಲಿಸಿದರೆ ಇನ್ನು ಕೆಲವರು ಉಡಾಫೆ ತೋರುತ್ತಿದ್ದಾರೆ. ಇಂತಹವರ ಮಧ್ಯೆ ಛತ್ತೀಸ್‌ಗಢದ ಜೋಡಿಯೊಂದು ನಿದರ್ಶನವಾಗಿದೆ.

ಇತ್ತೀಚೆಗೆ ಮದುವೆಯಾದ ನವಜೋಡಿಯೊಂದು ಸಾಮಾಜಿಕ ಅಂತರ ಕಾಯ್ದುಕೊಂಡು ವಿವಾಹವಾಗಿದ್ದಾರೆ. ಇವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆಯಲ್ಲಿ ವಧು ವರ ಹೂವಿನ ಹಾರವನ್ನು ಪರಸ್ಪರ ಬದಲಾಯಿಸಿಕೊಳ್ಳುವ ಸಂಪ್ರದಾಯವಿದೆ. ಈ ವೇಳೆ ವಧು ವರರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಬಿದಿರಿನ ಕೋಲಿನಲ್ಲಿ ಇಬ್ಬರು ಹಾರ ಬದಲಾಯಿಸಿಕೊಂಡಿದ್ದಾರೆ. ಮದುವೆಗೆ ಬಂದ ಅತಿಥಿಗಳು ಸಹ ದೂರದಲ್ಲಿಯೇ ನಿಂತು ಶುಭಹಾರೈಸಿದ್ದಾರೆ.

ಈ ವಿಡಿಯೋವನ್ನು ಛತ್ತೀಸ್‌ಗಢದ ಹೆಚ್ಚುವರಿ ಸಾರಿಗೆ ಆಯುಕ್ತರಾದ ದೀಪಾಂಶು ಕಬ್ರಾ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಮೇ 2ರಂದು ಶೇರ್ ಮಾಡಿ, ಈವೆಂಟ್ ಮ್ಯಾನೇಜರ್‌ಗಳು ಕೊರೋನಾ ಸಮಯದಲ್ಲಿ ತಾವು ವಹಿಸಿಕೊಂಡ ಕಾರ್ಯಕ್ರಮ ಅತ್ಯಂತ ಸುರಕ್ಷಿತವಾಗಿ ನಡೆಯಲು ಏನೆಲ್ಲಾ ಚಮತ್ಕಾರಿ ಮಾರ್ಗಗಳನ್ನು ಅನುಸರಿಸುತ್ತಾರೆ ನೋಡಿ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಹಲವಾರು ನೆಟ್ಟಿಗರು ಕಮೆಂಟ್ ಮಾಡಿದ್ದು, ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬರು ಕೋವಿಡ್ ಸಮಯದಲ್ಲಿ ಮದುವೆಯ ವೇಳೆ ಇಂತಹ ಮುಂಜಾಗ್ರತಾ ಕ್ರಮ ವಹಿಸಿರುವುದು ಉತ್ತಮ ಎಂದು ಹೇಳಿದರೆ, ಇನ್ನು ಕೆಲವರು ಈ ರೀತಿಯ ನಿರ್ಧಾರಕ್ಕಿಂತ ಮದುವೆಯನ್ನು ಮುಂದಕ್ಕೆ ಹಾಕಿದ್ದರೆ ಒಳ್ಳೆಯದಿತ್ತು ಅಥವಾ ಸರಳವಾಗಿ ಮಾಡಿಕೊಂಡಿದ್ದರೆ ಉತ್ತಮವಾಗಿತ್ತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನೀಶ್‌ ಎಂಬುವವರು ಇದು ಮೂರ್ಖತನದ ಪರಮಾವಧಿ ಎಂದಿದ್ದಾರೆ. ರೋಸಿ ಎಂಬುವವರು ಏನಾದರೂ ಆಗಲಿ ಮದ್ವೆ ಆಗಬೇಕು ಎಂದು ಕಮೆಂಟ್ ಹಾಕಿದ್ದಾರೆ. ಇನ್ನು ಕೆಲವರು ಮದುವೆಯಾಗುವ ಅವಶ್ಯಕತೆ ಇತ್ತಾ? ಎಂದು ಪ್ರಶ್ನಿಸಿದರೆ, ಇನ್ನು ಹಲವರು ಅದ್ಭುತ ಎಂದು ನಗಾಡಿದ್ದಾರೆ. ಇಶಾ ಬಜಾಜ್ ಎಂಬುವವರು ಈ ಉಪಾಯ ನಮ್ಮ ದೇಶದಿಂದ ಹೊರಗೆ ಹೋಗಬಾರದು ಎಂದು ವ್ಯಂಗ್ಯವಾಡಿದ್ದಾರೆ.

ಭಾರತದಲ್ಲಿ 2 ಕೋಟಿಗೂ ಹೆಚ್ಚು ಕೊರೊನಾ ವೈರಸ್‌ ಪ್ರಕರಣಗಳಿದ್ದು, ಸುಮಾರು 3 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಿನೇ ದಿನೇ ದಾಖಲಾಗುತ್ತಿದೆ. ಅಲ್ಲದೆ, ವೈರಾಣುವಿಗೆ 2.22 ಲಕ್ಷ ಸಾವುಗಳು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಸುಮಾರು ಮಂದಿ ತಮ್ಮ ಮದುವೆಯನ್ನು ಮುಂದೂಡಿದ್ದಾರೆ ಅಥವಾ ಛತ್ತೀಸ್‍ಗಡದ ಜೋಡಿಯ ರೀತಿಯಲ್ಲಿ ಮುನ್ನೆಚ್ಚರಿಕೆ ತೆಗೆದುಕೊಂಡು ವಿವಾಹವಾಗುತ್ತಿದ್ದಾರೆ. ಅಲ್ಲದೇ ಕೇರಳದಲ್ಲಿ ವರನೊಬ್ಬ ಪಿಪಿಇ ಕಿಟ್ ಧರಿಸಿ ಮದುವೆಯಾಗಿದ್ದರು. ರಾಜಸ್ಥಾನದಲ್ಲಿ ವಧು ಪಿಪಿಇ ಕಿಟ್ ಧರಿಸಿ ಮದುವೆಯಾಗಿದ್ದರು. ಈ ಎರಡು ಪ್ರಕರಣಗಳು ಕೋವಿಡ್ ಪ್ರಕರಣಗಳಾಗಿದ್ದವು.
Published by:Soumya KN
First published: