ಏಷ್ಯಾದ ಅತಿದೊಡ್ಡ ಮ್ಯಾಂಗೋ ಮಾರ್ಕೆಟ್​ನಿಂದ ರಾಮನಗರಕ್ಕೆ ಕೊರೋನಾ ಸೋಂಕಿನ ಭೀತಿ

ಬೊಂಬೆನಗರಿಯ ಮ್ಯಾಂಗೋ ಮಾರ್ಕೆಟ್ ಏಷ್ಯದಲ್ಲೇ ನಂ. 1 ಸ್ಥಾನದಲ್ಲಿದೆ. ಆದರೆ ಈಗ ಇದೇ ಮಾರ್ಕೆಟ್ನಿಂದಲೇ ಕೊರೋನಾ ಪಾಸಿಟಿವ್ ಕೇಸ್ಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿ ಕಂಡುಬಂದಿದೆ.

ಚನ್ನಪಟ್ಟಣದ ಮಾವು ಮಾರುಕಟ್ಟೆ

ಚನ್ನಪಟ್ಟಣದ ಮಾವು ಮಾರುಕಟ್ಟೆ

 • Share this:
  ರಾಮನಗರ: ಚನ್ನಪಟ್ಟಣದಲ್ಲಿರುವ ಮ್ಯಾಂಗೋ ಮಾರ್ಕೆಟ್ ಏಷ್ಯದಲ್ಲೇ ಅತಿದೊಡ್ಡ ನಂ.1 ಎಂಬ ಹೆಗ್ಗಳಿಕೆ ಪಡೆದಿದೆ. ಆದರೆ ಈಗ ಇದೇ ಮಾರುಕಟ್ಟೆಯಿಂದ ಕೊರೋನಾ ವೈರಸ್ ಹರಡೋ ಸಾಧ್ಯತೆ ಹೆಚ್ಚಾಗಿದೆ. ಕಳೆದೊಂದು ವಾರದಿಂದ ಈ ಮಾರ್ಕೆಟ್‌ನಲ್ಲಿ ಮಾವಿನಕಾಯಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ. ಜೊತೆಗೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳಿಂದ ನೂರಾರು ಟ್ರಕ್‌ಗಳ ಮೂಲಕ ವ್ಯಾಪರಸ್ಥರು ಮಾವಿನಕಾಯನ್ನ ಮಾರಾಟ ಮಾಡಲು ಮಾರ್ಕೆಟ್‌ಗೆ ತರುತ್ತಿದ್ದಾರೆ. ಆದರೆ ಈಗ ಸದ್ಯ ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗಿರುವ ಕಾರಣ ರಾಮನಗರ ಜಿಲ್ಲೆಯ ಜನರು ಈ ಬಗ್ಗೆ ಆತಂಕವ್ಯಕ್ತಪಡಿಸಿದ್ದಾರೆ.

  ಇನ್ನು ಚನ್ನಪಟ್ಟಣ ಕೃಷಿ ಮಾರುಕಟ್ಟೆಯಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಜನರು ಮಾವಿನಕಾಯಿ ಮಾರಾಟಕ್ಕೆ ಆಗಮಿಸುತ್ತಾರೆ. ಆದರೆ ಈ ಮಾರುಕಟ್ಟೆಯಲ್ಲಿ ಹೊರಗಿನಿಂದ ಬರುವ ಜನರಿಗೆ ಯಾವುದೇ ಆರೋಗ್ಯ ತಪಾಸಣೆ ಮಾಡುತ್ತಿಲ್ಲ. ಜೊತೆಗೆ ಪೊಲೀಸರು ಸ್ಥಳದಲ್ಲಿದ್ದರೂ ಕೂಡ ಮಾವು ಮಾರಾಟಗಾರರು, ಖರೀದಿದಾರರು ಯಾವುದೇ ಭಯವಿಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಇದರಿಂದಾಗಿ ಚನ್ನಪಟ್ಟಣ ಕೃಷಿ ಮಾರುಕಟ್ಟೆಯಿಂದಲೇ ಕೊರೋನಾ ವೈರಸ್ ಹರಡೋ ಸಾಧ್ಯತೆ ಹೆಚ್ಚಾಗಿದೆ ಎಂಬ ಆತಂಕದ ವಾತವರಣ ನಿರ್ಮಾಣವಾಗಿದೆ ಎಂದು ಜಿಲ್ಲೆಯ ಹಿರಿಯ ಕನ್ನಡಪರ ಹೋರಾಟಗಾರ ರಮೇಶ್ ಗೌಡ ಎಚ್ಚರಿಸಿದ್ದಾರೆ.

  ಇದನ್ನೂ ಓದಿ: ಜುಬಿಲೆಂಟ್ಸ್ ಕಾರ್ಖಾನೆ ಪ್ರಕರಣ: ಎಲ್ಲಾ ನೌಕರರ ಕೋವಿಡ್​​-19 ಪರೀಕ್ಷೆ ಮುಕ್ತಾಯ ಎಂದ ಮೈಸೂರು ಡಿಸಿ

  ಒಟ್ಟಾರೆ ರಾಮನಗರ ಜಿಲ್ಲೆಯಲ್ಲಿ ಕೊರೋನಾ ಪಾಸಿಟವ್ ಕೇಸ್‌ಗಳಿಲ್ಲದೇ ಜನರು ಸದ್ಯಕ್ಕೆ ನೆಮ್ಮದಿಯಿಂದೇನೋ ಇದ್ದಾರೆ. ಆದರೆ ಈಗ ಮಾವು ಮಾರುಕಟ್ಟೆಯಿಂದಲೇ ಮುಂದಿನ ದಿನಗಳಲ್ಲಿ ರೇಷ್ಮೆನಗರಿಗೂ ಕೊರೋನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದ್ದು ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮವಹಿಸಬೇಕೆಂದು ಕೂಗು ಕೇಳಿಬಂದಿದೆ.

  ವರದಿ: ಎ.ಟಿ. ವೆಂಕಟೇಶ್

  First published: