Trending Desk: ಭಾರತದ ರಾಜಧಾನಿಯಾದ್ಯಂತ ಹಲವಾರು ರೋಗಿಗಳು ಆಸ್ಪತ್ರೆಗೆ ದಾಖಲಾಗಲು ಪರದಾಡುತ್ತಿದ್ದರೆ, ಆಸ್ಪತ್ರೆಗಳು ಸಹ ಆಕ್ಸಿಜನ್, ರೆಮ್ಡೆಸಿವಿರ್ ಮುಂತಾದ ಔಷಧಿ, ಸಾಮಗ್ರಿಗಳು ದೊರೆಯದೆ ಒದ್ದಾಡುತ್ತಿವೆ. ಈ ಅವ್ಯವಸ್ಥೆಯ ನಡುವೆ ವ್ಯಕ್ತಿಯೊಬ್ಬರು ತನ್ನ ಕೊರೊನಾ ಪೀಡಿತ ತಂದೆಗೆ ಬೆಂಗಳೂರಿನಿಂದ ವಿಮಾನದಲ್ಲಿ ತೆಗೆದುಕೊಂಡು ಹೋದ ಆಕ್ಸಿಜನ್ ಕಾನ್ಸನ್ಟ್ರೇಟರ್ ಅನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಐಪಿಎಲ್ ತಂಡದ ಸದಸ್ಯರೊಬ್ಬರು ಆಕಸ್ಮಿಕವಾಗಿ ಎತ್ತಿಕೊಂಡು ಹೋಗಿದ್ದಾರೆ.
ಅನ್ವರ್ ಅವರ ತಂದೆ ಕಡಿಮೆ ಮಟ್ಟದ SpO2 ಅನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ಅವರ ಪುತ್ರ ಆಕ್ಸಿಜನ್ ಖರೀದಿಸಲು ದೆಹಲಿಯಿಂದ ಬೆಂಗಳೂರಿಗೆ ಹೋಗಿದ್ದಾರೆ. ಅವರು ಆಕ್ಸಿಜನ್ ಸಿಲಿಂಡರ್ ಬದಲಿಗೆ ಆಮ್ಲಜನಕ ಸಾಂದ್ರತೆಯನ್ನು ( ಆಕ್ಸಿಜನ್ ಕಾನ್ಸನ್ಟ್ರೇಟರ್) ಖರೀದಿಸಲು ನಿರ್ಧರಿಸಿದ್ದರು ಎಂದು ದಿ ನ್ಯೂಸ್ ಮಿನಿಟ್ ವೆಬ್‌ಸೈಟ್ ವರದಿ ಮಾಡಿದೆ. ಬೆಂಗಳೂರಿನಲ್ಲಿ ಕಾನ್ಸನ್ಟ್ರೇಟರ್ ಅನ್ನು ಖರೀದಿಸಿದ ಅನ್ವರ್ ಸ್ವತಃ ಇಂಡಿಗೋ ವಿಮಾನದಲ್ಲಿ ಮತ್ತೆ ದೆಹಲಿಗೆ ಕೊಂಡೊಯ್ದರು. ಆದರೆ, ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದ ನಂತರ ಅಮೂಲ್ಯವಾದ ಸಾಂದ್ರತೆಯನ್ನು ಹೊತ್ತ ಕಾರ್ಟನ್ ಬ್ಯಾಗೇಜ್ ಬೆಲ್ಟ್‌ನಲ್ಲಿ ತೋರಿಸಲು ವಿಫಲವಾದಾಗ ಅನ್ವರ್ ಆತಂಕಗೊಂಡಿದ್ದಾರೆ.
ಈ ವಿಚಾರವನ್ನು ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಮಾತನಾಡಿ ಸುಸ್ತಾಗಿದ್ದಾರೆ. ಸುಮಾರು 24 ಗಂಟೆಗಳ ಕಾಲ ಅಧಿಕಾರಿಗಳೊಂದಿಗೆ ಸಮನ್ವಯಗೊಳಿಸಿದ ನಂತರ ಅಧಿಕಾರಿಯೊಬ್ಬರು ನಿಮ್ಮ ಕಾರ್ಟನ್ ಪತ್ತೆಯಾಗಿದೆ ಎಂದು ಹೇಳಿ, ಅದರ ಸ್ಪಷ್ಟೀಕರಣ ಪಡೆದುಕೊಳ್ಳಲು ಫೋಟೋವೊಂದನ್ನು ಕಳಿಸಿದ್ದಾರೆ. ಆ ಬಳಿಕ ಅನ್ವರ್ ಸ್ವಲ್ಪ ಸಮಾಧಾನವಾಗಿದೆ.
ಕಾರ್ಟನ್ ತನ್ನ ಉದ್ದೇಶಿತ ಸಮಯದಲ್ಲಿ ಬೆಂಗಳೂರಿನಿಂದ ದೆಹಲಿಗೆ ಬಂದಿಳಿದಿತ್ತು. ಆದರೆ ಅನ್ವರ್ ಅದನ್ನು ಎತ್ತಿಕೊಳ್ಳುವ ಬದಲು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರೊಬ್ಬರು ಇದನ್ನು ತಪ್ಪು ತಿಳುವಳಿಕೆಯಿಂದ ಎತ್ತಿಕೊಂಡಿದ್ದಾರೆ. ನಂತರ, ಏಪ್ರಿಲ್ 28 ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಕ್ಕಾಗಿ ದೆಹಲಿಗೆ ಆ ಕಾನ್ಸನ್ಟ್ರೇಟರ್ ತಲುಪಿದೆ ಎಂದು ದಿ ನ್ಯೂಸ್ ಮಿನಿಟ್ ವೆಬ್‌ಸೈಟ್ ವರದಿ ಮಾಡಿದೆ.
ಆಟಗಾರರು ಸಾಮಾನ್ಯವಾಗಿ ಚಾರ್ಟರ್ಡ್ ಫ್ಲೈಟ್‌ನಲ್ಲಿ ಹೋದರೆ, ತಂಡದ ಸದಸ್ಯರು ಸಾಮಾನ್ಯ, ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ. ಇನ್ನು, ಕೋವಿಡ್ -19 ನಿರ್ಬಂಧಗಳಿಂದಾಗಿ, ಆಟಗಾರರು ತಮ್ಮೊಂದಿಗೆ ವೈಯಕ್ತಿಕ ವಸ್ತುಗಳನ್ನು ಸಾಗಿಸಲು ಮಾತ್ರ ಅನುಮತಿಸಲಾಗಿದೆ. ಎಲ್ಲಾ ಇತರ ಸಾಮಾನುಗಳನ್ನು ಪ್ರತ್ಯೇಕವಾಗಿ ಸಾಗಿಸಲಾಗುತ್ತದೆ ಮತ್ತು ಆಟಗಾರರನ್ನು ತಲುಪಲು ಅನುಮತಿಸುವ ಮೊದಲು ನೈರ್ಮಲ್ಯದ ಉದ್ದೇಶಗಳಿಗಾಗಿ ಇಡೀ ದಿನ ಹೋಟೆಲ್ ಕೋಣೆಯಲ್ಲಿ ಇಡಲಾಗುತ್ತದೆ.
ಏಪ್ರಿಲ್ 27 ರ ರಾತ್ರಿಯ ಹೊತ್ತಿಗೆ, ಸಿಎಸ್‌ಕೆ ತಂಡದವರು ಆಕಸ್ಮಿಕವಾಗಿ ವಿಮಾನ ನಿಲ್ದಾಣದಿಂದ ಹೆಚ್ಚುವರಿ ವಸ್ತುವನ್ನು ತಂದಿದ್ದಾರೆಂದು ಅರಿತುಕೊಂಡರು ಮತ್ತು ಸಿಬ್ಬಂದಿಗೆ ಮಾಹಿತಿ ನೀಡಿದರು. ಅನ್ವರ್ ಕಾಣೆಯಾದ ಲಗೇಜ್‌ಗಾಗಿ ದೂರು ನೀಡಿದ ನಂತರ ಸ್ವತಃ ಕಾಣೆಯಾದ ಲಗೇಜ್ ಅನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸಿಎಸ್‌ಕೆ ಸದಸ್ಯರು ತಮ್ಮ ಹೋಟೆಲ್‌ಗೆ ಕೊಂಡೊಯ್ದ ಅದೇ ಅನ್ವರ್‌ನ ಪೆಟ್ಟಿಗೆಯನ್ನು ಗುರುತಿಸಲು ಸಿಬ್ಬಂದಿಗೆ ಅವಕಾಶ ಮಾಡಿಕೊಟ್ಟಿತು. ಇದರಿಂದಾಗಿ ಕಳೆದುಹೋದ ಸಾಂದ್ರತೆಯನ್ನು ಅಥವಾ ಕಾನ್ಸನ್ಟ್ರೇಟರ್ ಹಿಂಪಡೆಯಲು ಅನ್ವರ್‌ಗೆ ಸುಮಾರು 36 ಗಂಟೆಗಳ ಸಮಯ ಹಿಡಿಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ