ಇನ್ನು, ನಾಳೆ ಧೋನಿ ಚೆನ್ನೈಗೆ ಆಗಮಿಸಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಸುತ್ತಿರುವ ಮಹೇಂದ್ರ ಸಿಂಗ್ ಧೋನಿಯೂ ತಮಿಳುನಾಡಿನಿಂದಲೇ ಆಗಸ್ಟ್ 22ನೇ ತಾರೀಕಿನಂದು ಯುಎಇಗೆ ತೆರಳುವ ಸಾಧ್ಯತೆ ಇದೆ.
ರಾಂಚಿ(ಆ.13): 13ನೇ ಐಪಿಎಲ್ ಸೀಸನ್ ಸಮೀಪಿಸುತ್ತಿದೆ. ಈ ಬಾರಿ ಐಪಿಎಲ್ ಫೈನಲ್ ಟ್ರೋಫಿ ಗೆಲ್ಲಲು ಎಲ್ಲಾ ತಂಡಗಳಂತೆಯೇ ಚೆನ್ನೈ ಸೂಪರ್ ಕಿಂಗ್ ತಂಡ ರೆಡಿಯಾಗಿದೆ. ಇದಕ್ಕಾಗಿ ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಕ್ರಿಕೆಟ್ ಅಭ್ಯಾಸ ಶುರು ಮಾಡಿದ್ದಾರೆ. ಈ ಮಧ್ಯೆ ಎಂ.ಎಸ್ ಧೋನಿ ಮುಂಜಾಗೃತ ಕ್ರಮವಾಗಿ ಕೊರೋನಾ ಟೆಸ್ಟ್ ಮಾಡಿಸಿದ್ದಾರೆ. ಈಗ ಧೋನಿ ಕೊರೋನಾ ರಿಪೋರ್ಟ್ ನೆಗೆಟಿವ್ ಬಂದಿದೆ.
ಎಂ.ಎಸ್ ಧೋನಿ ಗುರುನಾನಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹಿರಿಯ ಲ್ಯಾಬ್ ಕಾರ್ಯನಿರ್ವಾಹಕರೊಬ್ಬರ ಬಳಿ ಕೊರೋನಾ ಟೆಸ್ಟ್ ಮಾಡಿಸಿದ್ದಾರೆ. ಧೋನಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಇದರ ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ. ಹೀಗಾಗಿ ಧೋನಿಗೆ ಕೊರೋನಾ ಸೋಂಕು ಇಲ್ಲ ಎನ್ನುವುದು ಖಾತ್ರಿಯಾಗಿದೆ.
ಇನ್ನು, ನಾಳೆ ಧೋನಿ ಚೆನ್ನೈಗೆ ಆಗಮಿಸಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಸುತ್ತಿರುವ ಮಹೇಂದ್ರ ಸಿಂಗ್ ಧೋನಿಯೂ ತಮಿಳುನಾಡಿನಿಂದಲೇ ಆಗಸ್ಟ್ 22ನೇ ತಾರೀಕಿನಂದು ಯುಎಇಗೆ ತೆರಳುವ ಸಾಧ್ಯತೆ ಇದೆ.
ಸದ್ಯ ಧೋನಿ ತಮ್ಮ ಫಾರ್ಮ್ ಹೌಸ್ನಲ್ಲಿ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಜಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೋಷಿಯೇಷನ್ನಲ್ಲಿ ಐಪಿಎಲ್ಗಾಗಿ ಟ್ರೈನಿಂಗ್ ಶುರು ಮಾಡಿದ್ದಾರೆ.