ಬೆಂಗಳೂರಿನಲ್ಲಿ ತೀವ್ರಗೊಂಡ ಕೊರೋನಾ: ಯಾವ ಏರಿಯಾದಲ್ಲಿ ಎಷ್ಟು ಮಂದಿಗೆ ಸೋಂಕು?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಸರ್ಕಾರದ ಸೂಚನೆ ಮೇರೆಗೆ ಬಿಬಿಎಂಪಿಯೂ ನಗರದಲ್ಲಿ ನಿಧಾನವಾಗಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿದೆ. ಹೀಗಿರುವಾಗ ಬೆಂಗಳೂರಿನಲ್ಲಿ ಕೊರೋನಾ ವೈರಸ್‌ ಕಂಟೈನ್‌ಮೆಂಟ್‌ ಜೋನ್‌ಗಳ ಸಂಖ್ಯೆಯನ್ನು 21ರಿಂದ 18ಕ್ಕೆ ಇಳಿಕೆ ಮಾಡಿ ಆರೋಗ್ಯ ಇಲಾಖೆ ಆದೇಶಿಸಿದೆ.

news18-kannada
Updated:May 10, 2020, 7:14 AM IST
ಬೆಂಗಳೂರಿನಲ್ಲಿ ತೀವ್ರಗೊಂಡ ಕೊರೋನಾ: ಯಾವ ಏರಿಯಾದಲ್ಲಿ ಎಷ್ಟು ಮಂದಿಗೆ ಸೋಂಕು?
ಸಾಂದರ್ಭಿಕ ಚಿತ್ರ
 • Share this:
ಬೆಂಗಳೂರು(ಮೇ.10): ಕರ್ನಾಟಕದಲ್ಲಿ ಕೊರೋನಾ ವೈರಸ್​​ ಆರ್ಭಟ ಮುಂದುವರಿದಿದೆ. ಈ ಮಾರಕ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳು ಬೆಂಗಳೂರಿನಲ್ಲೇ ದಾಖಲಾಗಿವೆ. ಅಂದರೆ ಇದುವರೆಗೂ 189 ಮಂದಿಗೆ ಕೊರೋನಾ ಬಂದಿದೆ.

ಇನ್ನು, 189 ಮಂದಿ ಪೈಕಿ 100 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಸದ್ಯ 82 ಜನ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಜತೆಗೆ 6 ಮಂದಿ ಈ ಮಾರಕ ಕೊರೊನಾದಿಂದ ಸಾವನಪ್ಪಿದ್ದಾರೆ.

ಯಾವಾವ ಏರಿಯಾದಲ್ಲಿ ಎಷ್ಟು ಮಂದಿಗೆ ಕೊರೋನಾ?

 • ಆನೇಕಲ್ - 1

 • ಬೊಮ್ಮನಹಳ್ಳಿ - 40

 • ದಾಸರಹಳ್ಳಿ - 1
 • ಬೆಂಗಳೂರು ಪೂರ್ವ- 27

 • ಮಹದೇವಪುರ - 13

 • ಆರ್ ಆರ್ ನಗರ - 1

 • ಬೆಂಗಳೂರು ದಕ್ಷಿಣ - 63

 • ಬೆಂಗಳೂರು ಪಶ್ಚಿಮ - 33

 • ಯಲಹಂಕ - 9

 • ಬೊಮ್ಮಸಂದ್ರ - 1

ಈ ಮಧ್ಯೆ ನಗರದ ಹಗದೂರು ವಾರ್ಡ್, ರಾಧಾಕೃಷ್ಣ ಟೆಂಪಲ್ ವಾರ್ಡ್, ಮಾರುತಿ ಸೇವಾ ನಗರವನ್ನು ಕಂಟೈನ್ಮೆಂಟ್​​ ಜೋನ್​​ನಿಂದ ತೆರವುಗೊಳಿಸಲಾಗಿದೆ. ಉಳಿದ 18 ವಾರ್ಡ್​ ಕಂಟೈನ್ಮೆಂಟ್​ಗಳಾದ ಬಿಳೇಕಹಳ್ಳಿ, ಹೊಂಗಸಂದ್ರ, ಬೇಗೂರು, ಶಿವಾಜಿನಗರ, ವಸಂತನಗರ, ಸುಧಾಮನಗರ, ಹಂಪಿ ನಗರ, ದೀಪಾಂಜಲಿ ನಗರ, ಭೈರಸಂದ್ರ , ಬಿಟಿಎಂ ಲೇಔಟ್ , ಮಲ್ಲೇಶ್ವರ, ಪಾದರಾಯನಪುರ, ಜೆಜೆ ನಗರ, ಛಲವಾದಿ ಪಾಳ್ಯ, ಕೆ.ಆರ್.ಮಾರ್ಕೆಟ್ , ಯಶವಂತಪುರ, ಆರ್ ಆರ್ ನಗರದಲ್ಲಿ ಮಾತ್ರ ಮುಂಜಾಗೃತ ಕ್ರಮ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಕೋವಿಡ್​​-19: ಬೆಂಗಳೂರಿನಲ್ಲಿ 22 ಕಂಟೈನ್ಮೆಂಟ್ ಜೋನ್​​ಗಳಿಂದ 18ಕ್ಕೆ ಇಳಿಕೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಸರ್ಕಾರದ ಸೂಚನೆ ಮೇರೆಗೆ ಬಿಬಿಎಂಪಿಯೂ ನಗರದಲ್ಲಿ ನಿಧಾನವಾಗಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿದೆ. ಹೀಗಿರುವಾಗ ಬೆಂಗಳೂರಿನಲ್ಲಿ ಕೊರೋನಾ ವೈರಸ್‌ ಕಂಟೈನ್‌ಮೆಂಟ್‌ ಜೋನ್‌ಗಳ ಸಂಖ್ಯೆಯನ್ನು 21ರಿಂದ 18ಕ್ಕೆ ಇಳಿಕೆ ಮಾಡಿ ಆರೋಗ್ಯ ಇಲಾಖೆ ಆದೇಶಿಸಿದೆ.
First published: May 10, 2020, 7:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading