ಕೊರೋನಾ ವಿರುದ್ಧ ಸಮರ: ಕೇಂದ್ರದಿಂದ 30 ಸಾವಿರ ಕೋಟಿ ರೂ. ಅನುದಾನಕ್ಕೆ ಬೇಡಿಕೆಯಿಟ್ಟ ಚತ್ತೀಸ್​​ಗಡ ಸಿಎಂ ಭೂಪೇಶ್​ ಬಘೇಲ್​​

ಚತ್ತೀಸ್​ಗಡದಲ್ಲಿ ಇದುವರೆಗೂ 36 ಮಂದಿಗೆ ಕೊರೋನಾ ಸೋಂಕು ಬಂದಿದೆ. ಮಹಾರಾಷ್ಟ್ರ, ದೆಹಲಿ, ಕೇರಳ, ಮುಂಬೈ, ಕರ್ನಾಟಕಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಇಲ್ಲಿನ ಜನರಿಗೆ ಕೊರೋನಾ ತಗುಲಿದೆ. ಹಾಗಾಗಿ ಕೋವಿಡ್​​-19 ತೀವ್ರಗೊಳ್ಳುವ ಮುನ್ನವೇ ಇದನ್ನು ತಡೆಗಟ್ಟಲು ಸಿಎಂ ಭೂಪೇಶ್​​ ಬಘೇಲ್​​ ಕೇಂದ್ರದಿಂದ 30 ಸಾವಿರ ಕೋಟಿ ರೂ. ಅನುದಾನ ಕೇಳಿದ್ದಾರೆ ಎನ್ನಲಾಗುತ್ತಿದೆ.

news18-kannada
Updated:April 21, 2020, 8:39 PM IST
ಕೊರೋನಾ ವಿರುದ್ಧ ಸಮರ: ಕೇಂದ್ರದಿಂದ 30 ಸಾವಿರ ಕೋಟಿ ರೂ. ಅನುದಾನಕ್ಕೆ ಬೇಡಿಕೆಯಿಟ್ಟ ಚತ್ತೀಸ್​​ಗಡ ಸಿಎಂ ಭೂಪೇಶ್​ ಬಘೇಲ್​​
ಚತ್ತೀಸ್​ಗಡ ಸಿಎಂ ಭೂಪೇಶ್​​ ಬಘೇಲ್​
  • Share this:
ನವದೆಹಲಿ(ಏ.21): ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದಿಂದ 30 ಸಾವಿರ ಕೋಟಿ. ರೂ ಅನುದಾನ ಬಿಡುಗಡೆ ಮಾಡಿ ಎಂದು ಚತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಸದ್ಯ ಕೂಡಲೇ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ. ನಂತರ ಉಳಿದ 20 ಸಾವಿರ ಕೋಟಿ ರೂ. ನೀಡಿ ಎಂದು ಪತ್ರಧಾನಿಗೆ ಬರೆದ ಪತ್ರದಲ್ಲಿ ವಿನಂತಿಸಲಾಗಿದೆ.

ಚತ್ತೀಸ್​ಗಡದಲ್ಲಿ ಇದುವರೆಗೂ 36 ಮಂದಿಗೆ ಕೊರೋನಾ ಸೋಂಕು ಬಂದಿದೆ. ಮಹಾರಾಷ್ಟ್ರ, ದೆಹಲಿ, ಕೇರಳ, ಮುಂಬೈ, ಕರ್ನಾಟಕಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಇಲ್ಲಿನ ಜನರಿಗೆ ಕೊರೋನಾ ತಗುಲಿದೆ. ಹಾಗಾಗಿ ಕೋವಿಡ್​​-19 ತೀವ್ರಗೊಳ್ಳುವ ಮುನ್ನವೇ ಇದನ್ನು ತಡೆಗಟ್ಟಲು ಸಿಎಂ ಭೂಪೇಶ್​​ ಬಘೇಲ್​​ ಕೇಂದ್ರದಿಂದ 30 ಸಾವಿರ ಕೋಟಿ ರೂ. ಅನುದಾನ ಕೇಳಿದ್ದಾರೆ ಎನ್ನಲಾಗುತ್ತಿದೆ.

ದೇಶಾದ್ಯಂತ ಕೋವಿಡ್-19 ವೈರಸ್ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದೆ. ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕಂಗೆಡಿಸಿದೆ. ಭಾರತದಲ್ಲಿ ಮೃತರ ಸಂಖ್ಯೆ 503ಕ್ಕೇರಿರುವುದು ಆತಂಕಕಾರಿಯಾಗಿದೆ. ಮತ್ತೊಂದಡೆ 18,985 ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ.

ಇದನ್ನೂ ಓದಿ: ರಾಜ್ಯದಲ್ಲಿ ಇಂದು 10 ಮಂದಿಗೆ ಕೊರೋನಾ: ಸೋಂಕಿತರ ಸಂಖ್ಯೆ 418ಕ್ಕೇರಿಕೆ, 17 ಸಾವು

ಇನ್ನು, ಜಗತ್ತಿನಾದ್ಯಂತ ಒಟ್ಟು 1,70,226 ಜನರು ಕೊರೋನಾ ವೈರಸ್​ನಿಂದ ಮೃತಪಟ್ಟಿದ್ದಾರೆ. ಇದರಲ್ಲಿ ಯುರೋಪ್​ನಲ್ಲಿಯೇ 1,06,737 ಜನರ ಅಸುನೀಗಿದ್ದಾರೆ. ಅಮೆರಿಕದಲ್ಲಿ 42,364 ಜನರು ಬಲಿಯಾಗಿದ್ದಾರೆ. ಇಟಲಿಯಲ್ಲಿ 24,114 ಹಾಗೂ ಸ್ಪೇನ್​ನಲ್ಲಿ 21,282, ಫ್ರಾನ್​ನಲ್ಲಿ 20,265 ಹಾಗೂ ಬ್ರಿಟನ್​ನಲ್ಲಿ 16,509 ಜನರು ಈವರೆಗೂ ಮಾರಕ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
First published: April 21, 2020, 8:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading