ಕೊರೋನಾ ಕರ್ಫ್ಯೂ; ಕಾನೂನು ಉಲ್ಲಂಘಿಸಿದವರಿಗೆ ಜೈಲುಗಳಾಗುತ್ತಿವೆ ಕ್ರಿಕೆಟ್ ಸ್ಟೇಡಿಯಂಗಳು!

COVID-19: ಜನರನ್ನು ರಸ್ತೆಗೆ ಇಳಿಯದೆ ಮನೆಯಲ್ಲೇ ಇರಿ ಎಂದು ಸೂಚನೆ ನೀಡಲಾಗಿದೆ. ಆದರೂ, ಇದನ್ನು ಜನ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಲಾಕ್‌ಡೌನ್ ಮಾಡಿದ್ದರೂ ಸಹ ಕ್ಯಾರೆ ಎನ್ನದ ಹಲವಾರು ಜನ ರಸ್ತೆಗೆ ಇಳಿಯುತ್ತಿದ್ದಾರೆ.

news18-kannada
Updated:March 26, 2020, 1:04 PM IST
ಕೊರೋನಾ ಕರ್ಫ್ಯೂ; ಕಾನೂನು ಉಲ್ಲಂಘಿಸಿದವರಿಗೆ ಜೈಲುಗಳಾಗುತ್ತಿವೆ ಕ್ರಿಕೆಟ್ ಸ್ಟೇಡಿಯಂಗಳು!
ಮಾರಕ ಕೊರೋನಾ ವೈರಸ್ನಿಂದಾಗಿ ಸದ್ಯ ಇಡೀ ಕ್ರಿಕೆಟ್ ಜಗತ್ತು ಸ್ತಬ್ದಗೊಂಡಿದೆ. ಯಾವುದೇ ಪಂದ್ಯಗಳು ನಡೆಯದಿರದ ಕಾರಣ ಆಟಗಾರರು ಮನೆಯಲ್ಲಿಯೇ ಕುಳಿತು ಸಮಯ ಕಳೆಯುವಂತಾಗಿದೆ.
  • Share this:
ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಕೋರೋನಾ ವೈರಸ್​ನಿಂದಾಗಿ ಮತ್ತೆರಡು ಸಾವು ಸಂಭವಿಸಿದ್ದು, ಈ ಮೂಲಕ ಭಾರತದಲ್ಲಿ ಮೃತರ ಸಂಖ್ಯೆ 15ಕ್ಕೆ ಏರಿಕೆ ಆಗಿದೆ. ಕೊರೋನಾ ಸೋಂಕಿತರ ಸಂಖ್ಯೆ 649 ಆಗಿದೆ. ಕಳೆದ ಡಿಸೆಂಬರ್​ ಅಂತ್ಯಕ್ಕೆ ತನ್ನ ಪ್ರಭಾವ ತೋರಿಸಲು ಆರಂಭಿಸಿದ್ದ ಈ ವೈರಸ್​ ನಾಲ್ಕು ತಿಂಗಳಲ್ಲಿ 21 ಸಾವಿರ ಜನರನ್ನು ಬಲಿ ತೆಗೆದುಕೊಂಡಿದೆ.

ಇನ್ನು ಮುಂದಿನ ದಿನಗಳಲ್ಲಿ ಜನರು ಮತ್ತಷ್ಟು ಸಂಕಷ್ಟಕದ ದಿನಗಳನ್ನು ಎಣಿಸಬಹುದಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಕೊರೋನಾ ವೈರಸ್​ ತಡೆಗಟ್ಟಲು ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಷ್ಟಾದರೂ ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿದೆ. ಕೊರೋನಾ ವೈರಸ್​ನ ಗಂಭೀರತೆಯನ್ನು ಅರಿತ ಕೇಂದ್ರ ಸರ್ಕಾರ ದೇಶಾದ್ಯಂತ 21 ದಿನಗಳ ಕಾಲ ಲಾಕ್​ಡೌನ್​​ಗೆ ಕರೆ ನೀಡಿದೆ.

ಧೋನಿ ಅಥವಾ ಕೊಹ್ಲಿ?: ಮನಮುಟ್ಟುವಂತಿದೆ ಶಾಹಿದ್ ಕಪೂರ್ ಮೆಚ್ಚಿನ ಕ್ರಿಕೆಟಿಗನನ್ನು ಆರಿಸಿದ ರೀತಿ!

ಆದರೆ, ಇಂಥ ಭೀಕರ ಸ್ಥಿತಿಯಲ್ಲೂ ಜನತೆ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜನರನ್ನು ರಸ್ತೆಗೆ ಇಳಿಯದೆ ಮನೆಯಲ್ಲೇ ಇರಿ ಎಂದು ಸೂಚನೆ ನೀಡಲಾಗಿದೆ. ಆದರೂ, ಇದನ್ನು ಜನ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಲಾಕ್‌ಡೌನ್ ಮಾಡಿದ್ದರೂ ಸಹ ಕ್ಯಾರೆ ಎನ್ನದ ಹಲವಾರು ಜನ ರಸ್ತೆಗೆ ಇಳಿಯುತ್ತಿದ್ದಾರೆ.

ಹೀಗೆ ನಿಯಮ ಉಲ್ಲಂಘಿಸಿ ಮನೆಯಿಂದ ಹೊರಗೆ ಬರುವವರನ್ನು ಬಂಧಿಸಿಡಲು ಕ್ರಿಕೆಟ್ ಸ್ಟೇಡಿಯಂಗಳನ್ನೇ ಜೈಲ್ ಆಗಿ ಪರಿವರ್ತಿಸಲಾಗಿದೆ. ಚಂಡೀಗಢದ 16 ವಲಯದ ಕ್ರಿಕೆಟ್ ಕ್ರೀಡಾಂಗಣ ಮತ್ತು ಕ್ರೀಡಾ ಸಂಕೀರ್ಣಗಳನ್ನು ಜೈಲಾಗಿ ಪರಿವರ್ತಿಸಲಾಗಿದೆಯಂತೆ.

IPL 2020: ಐಪಿಎಲ್ ಹರಾಜಿನಲ್ಲಿ ನಡೆದಿತ್ತು ಊಹಿಸಲಾಗದ ಘಟನೆ; ಏನದು ಗೊತ್ತಾ..?ಲಾಕ್​ಡೌನ್ ನಿಯಮಗಳನ್ನು ಗಾಳಿಗೆ ತೂರಿ ಮನೆಯಿಂದ ಹೊರ ಬಂದವರನ್ನು ಬಂಧಿಸಿಡಲು ಸ್ಟೇಡಿಯಂಗಳನ್ನು ತಾತ್ಕಾಲಿಕವಾಗಿ ಜೈಲುಗಳಾಗಿ ಬದಲಿಸಲಾಗಿದೆ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಗುಪ್ತಾ ಹೇಳಿದ್ದಾರೆ.
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading