CoronaVirus| ಶಾಲೆಗಳಲ್ಲಿ ಕೋವಿಡ್ ಹರಡುತ್ತದೆಂಬ ಭಯಬೇಡ, ಮಕ್ಕಳನ್ನು ಶಾಲೆಗೆ ಕಳುಹಿಸಿ: WHO ಮುಖ್ಯ ವಿಜ್ಞಾನಿ

ಸೆರೋ ಅಧ್ಯಯನದಲ್ಲಿ ಐಸಿಎಂಆರ್ ಕಂಡು ಕೊಂಡಿದ್ದು ಏನೆಂದರೆ, ದೇಶದಲ್ಲಿ ಕೋವಿಡ್ ಹರಡುವಿಕೆಯು ಶೇಕಡಾ 67.6 ಇದೆ. ಆದರೆ ಇದು 6-9 ವಯಸ್ಸಿನ ಗುಂಪಿನಲ್ಲಿ ಶೇಕಡಾ 57.2 ಮತ್ತು 10-17 ವಯಸ್ಸಿನ ಗುಂಪಿನಲ್ಲಿ ಶೇಕಡಾ 61.6 ಆಗಿದೆ.

ಡಬ್ಲ್ಯುಎಚ್‍ಒ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್.

ಡಬ್ಲ್ಯುಎಚ್‍ಒ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್.

  • Share this:
ಕಳೆದ 18 ತಿಂಗಳಿಂದ ಕೋವಿಡ್ (Covid 19) ಕಾರಣ ಎಲ್ಲಾ ಶಾಲಾ, ತರಗತಿಗಳನ್ನು ಮುಚ್ಚಲಾಗಿತ್ತು. ಇದೀಗ ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದರಿಂದ ಶಾಲೆ, ತರಗತಿಗಳು ತೆರೆಯಬೇಕು ಎಂದು ಡಬ್ಲ್ಯುಎಚ್‍ಒ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ (Soumya Swaminathan) ಅವರು ಸೆರೋ ಸಮೀಕ್ಷೆ ಅಂಕಿ ಅಂಶಗಳನ್ನು ಉಲ್ಲೇಖಿಸಿ ಹೇಳಿದ್ದಾರೆ. ಸೆರೋ ಸಮೀಕ್ಷೆ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಕಲಿಕಾ ಮಟ್ಟವು ಕೂಡ ಕುಸಿದಿದೆ ಎಂದು ತಿಳಿಸಿದರು.ಭಾನುವಾರ ಇಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಸೌಮ್ಯ, ಐಸಿಎಂಆರ್ ನ ನಾಲ್ಕನೇ ಸೆರೋ ಹರಡುವಿಕೆ ಅಧ್ಯಯನದ ಒಂದು ಪ್ರಮುಖ ಸಂಶೋಧನೆಯನ್ನು ಜೂನ್ ಮತ್ತು ಜುಲೈ ತಿಂಗಳಲ್ಲಿ ಕೈಗೊಳ್ಳಲಾಗಿತ್ತು. ಶಾಲೆಗಳು ಮುಚ್ಚಿದ ಹೊರತಾಗಿಯೂ ವಯಸ್ಕರಂತೆಯೇ ಮಕ್ಕಳು ಕೂಡ ಕೋವಿಡ್ -19 ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂದು ತಿಳಿಸಿದರು.

ಎಂಎಸ್ ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನದಲ್ಲಿ "ಪ್ರತಿ ಮಗು ವಿಜ್ಞಾನಿ" ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಾಮೊಜಿ ತರಗತಿಗಳನ್ನು ಪುನರಾರಂಭಿಸುವ ಕುರಿತು ಸಿಎಂ ಎಂಕೆ ಸ್ಟಾಲಿನ್ ಅವರಿಗೆ ತಮ್ಮ ಅಂತಿಮ ನಿರ್ಧಾರ ಹೇಳಲಿದ್ದಾರೆ.

ಸೆರೋ ಅಧ್ಯಯನದಲ್ಲಿ ಐಸಿಎಂಆರ್ ಕಂಡು ಕೊಂಡಿದ್ದು ಏನೆಂದರೆ, ದೇಶದಲ್ಲಿ ಕೋವಿಡ್ ಹರಡುವಿಕೆಯು ಶೇಕಡಾ 67.6 ಇದೆ. ಆದರೆ ಇದು 6-9 ವಯಸ್ಸಿನ ಗುಂಪಿನಲ್ಲಿ ಶೇಕಡಾ 57.2 ಮತ್ತು 10-17 ವಯಸ್ಸಿನ ಗುಂಪಿನಲ್ಲಿ ಶೇಕಡಾ 61.6 ಆಗಿದೆ. ಸಮಾರಂಭದಲ್ಲಿ, ಮಕ್ಕಳು ಶಾಪಿಂಗ್ ಮಾಡಲು, ಆಟವಾಡಲು ಮತ್ತು ಇತರರೊಂದಿಗೆ ಬೆರೆಯಲು ಸಮುದಾಯದಲ್ಲಿ ಒಡ್ಡಿಕೊಳ್ಳುತ್ತಿರುವುದರಿಂದ ಮಕ್ಕಳಲ್ಲಿ ಪ್ರತಿಕಾಯದ ಕಾರ್ಯ ಹೆಚ್ಚಾಗಿದೆ. ಶಾಲೆಗಳಲ್ಲಿ ಕೋವಿಡ್ ಸೋಂಕು ಹರಡುವ ಸಾಧ್ಯತೆಗಳು ಕಡಿಮೆ ಮತ್ತು ನಾವು ಸ್ಯಾನಿಟೈಸರ್, ಮಾಸ್ಕ್ ಸಾಮಾಜಿಕ ಅಂತರ, ನೈರ್ಮಲ್ಯದಂತಹ ನಿಯಮಗಳನ್ನು ಅನುಸರಿಸಿದರೆ, ಶಾಲೆಗಳನ್ನು ತೆರೆಯಲು ಸಾಧ್ಯವಾಗುತ್ತದೆ ಎಂದು ಸೌಮ್ಯ ಹೇಳಿದರು.

ಎರಡು ಅಲೆಗಳ ಮೂಲಕ ಪ್ರತಿಯೊಬ್ಬರ ಬದುಕನ್ನು ಹೈರಾಣಾಗಿಸಿದ್ದ ಕೋವಿಡ್-19 ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲು ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಅವರು ಹೇಳಿದರು. ಮಕ್ಕಳಿಗೆ ಲಸಿಕೆ ಹಾಕಿಲ್ಲ. ಆದ್ದರಿಂದ, ಸೋಂಕಿನ ಪ್ರಮಾಣವು ಬದಲಾಗುವ ಸಾಧ್ಯತೆಯಿದೆ, ಆದರೆ ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ರೋಗದ ತೀವ್ರತೆಯು ತುಂಬಾ ಕಡಿಮೆ ಇರುತ್ತದೆ. ಕಿರಿಯ ವಯಸ್ಸಿನವರಲ್ಲಿ ಶೇಕಡಾ 1 ಕ್ಕಿಂತ ಕಡಿಮೆ ಮಕ್ಕಳು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.

ಭಾರತ್ ಬಯೋಟೆಕ್ ಮತ್ತು ಜೀಡಸ್ ಕ್ಯಾಡಿಲಾ ಕಂಪನಿಗಳಿಂದ ದೇಶದ ಮಕ್ಕಳಿಗಾಗಿ ಎರಡು ಲಸಿಕೆಗಳಿಗಾಗಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಈ ಹಿಂದೆ, ಡಬ್ಲ್ಯುಎಚ್‍ಒ ಮುಖ್ಯ ವಿಜ್ಞಾನಿ ಮಕ್ಕಳು ಕಳೆದ 18 ತಿಂಗಳುಗಳಿಂದ ಶಾಲೆಯಿಂದ ದೂರವಿದ್ದರು. ಆದ ಕಾರಣ ಕಲಿಕೆಯಲ್ಲಿ ಭಾರೀ ಹಿನ್ನೆಡೆ ಸಂಭವಿಸಿದೆ ಎಂದು ಹೇಳಿದರು.

ಇದನ್ನೂ ಓದಿ: Rakesh Tikait| ರೈತರ ಹೋರಾಟ 10 ತಿಂಗಳಲ್ಲ 10 ವರ್ಷವಾದರೂ ಮುಂದುವರೆಯುತ್ತದೆ; ರೈತ ಮುಖಂಡ ರಾಕೇಶ್ ಟಿಕಾಯತ್

ಕರ್ನಾಟಕ ಈಗಾಗಲೇ ಕೋವಿಡ್ ನಿಯಾಮನುಸಾರ ಆರರಿಂದ ಎಂಟನೇ ತರಗತಿ ಆರಂಭವಾಗಿದೆ. ಅದೇ ಮಾರ್ಗಸೂಚಿಯಂತೆ ಪ್ರಾಥಮಿಕ ಶಾಲೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಒಂದರಿಂದ ಐದನೇ ತರಗತಿ ಶಾಲೆ ಆರಂಭದ ಬದಲಾಗಿ, ಮೂರರಿಂದ ಐದನೇ ತರಗತಿ ಶಾಲೆ ಆರಂಭದ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published: