Chamundeshwari Temple: ಚಾಮುಂಡೇಶ್ವರಿ ದೇವಾಲಯ ಪ್ರವೇಶ ನಿಷೇಧಿಸಿದರೂ ನಿಂತಿಲ್ಲ ಪ್ರಸಾದ ವಿತರಣೆ

Chamundeshwari Temple: ಚಾಮುಂಡೇಶ್ವರಿ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಪ್ರತಿ ದಿನ ಬೆಳಿಗ್ಗೆ ಹಾಗೂ ಮಧ್ಯಾಹ್ನ ಪ್ರಸಾದ ಮಾಡಿ ಹಂಚಲಾಗುತ್ತಿದೆ.

news18-kannada
Updated:May 7, 2020, 9:18 AM IST
Chamundeshwari Temple: ಚಾಮುಂಡೇಶ್ವರಿ ದೇವಾಲಯ ಪ್ರವೇಶ ನಿಷೇಧಿಸಿದರೂ ನಿಂತಿಲ್ಲ ಪ್ರಸಾದ ವಿತರಣೆ
ಪ್ರಸಾದ
  • Share this:
ಮೈಸೂರು(ಮೇ.07): ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ದೇಶದ ಮೂಲ ‌ಮೂಲೆಯಲ್ಲು ಭಕ್ತರಿದ್ದಾರೆ. ಇದೀಗ ಕೊರೋನಾ ಕಾರಣಕ್ಕೆ ದೇವಾಲಯಕ್ಕೆ ಭಕ್ತರ ನಿಷೇಧ ಮಾಡಲಾಗಿದೆ. ದೇವಾಲಯದಲ್ಲಿ ನೀಡಲಾಗುತ್ತಿದ್ದ ಪ್ರಸಾದ ಮಾತ್ರ ನಿಂತಿಲ್ಲ. ಲಾಕ್‌ಡೌನ್ ನಡುವೆಯು ಚಾಮುಂಡಿ ಪ್ರಸಾದ ವಿತರಣೆ ಮಾತ್ರ ಮುಂದುವರೆದಿದೆ.  ಮೈಸೂರು ಚಾಮುಂಡಿ ಬೆಟ್ಟದಲ್ಲಿ‌ ನೆಲೆಸಿರುವ ತಾಯಿ ಚಾಮುಂಡೇಶ್ವರಿ ನೋಡಲು ಪ್ರತಿ ದಿನ ದೇಶದ ಮೂಲೆಗಳಿಂದ ಸಾವಿರಾರು ಜನ ಹರಿದು ಬರುತ್ತಾರೆ. ಹೀಗೆ ಬರುವ ಭಕ್ತರಿಗೆ ಚಾಮುಂಡಿ ತಾಯಿ ಇಷ್ಟಾರ್ಥ ಸಿದ್ದಿಸಿ ಭಕ್ತರಿಗೆ ದಾಸೋಹದ ಮೂಲಕ ಹೊಟ್ಟೆಯನ್ನು ತುಂಬಿಸುತ್ತಿದಳು. ಆದರೆ, ಕೊರೋನಾ‌ ಮಹಾಮಾರಿಯಿಂದ  ಚಾಮುಂಡಿ ಬೆಟ್ಟಕ್ಕೆ ಭಕ್ತರನ್ನು ನಿಷೇಧಿಸಲಾಗಿದೆ. ಆದರೆ, ಚಾಮುಂಡೇಶ್ವರಿ ದೇವಾಲಯದಲ್ಲಿ ಮಾಡಲಾಗುತ್ತಿದ್ದ ಪ್ರಸಾದ ಮಾತ್ರ ನಿಂತಿಲ್ಲ. ಲಾಕ್‌ಡೌನ್ ದಿನದಿಂದ ಇಂದಿನವರೆಗೂ ಪ್ರಸಾದವನ್ನ ದೇವಾಲಯ ಆಡಳಿತ ಮಂಡಳಿ ಮುಂದುವರೆಸಿಕೊಂಡು ಬಂದಿದೆ. ಇದೀಗ ಕೊರೋನಾ‌ ವಾರಿಯರ್ಸ್ ಹಾಗೂ ನಿರ್ಗತಿಕರಿಗೆ ಚಾಮುಂಡೇಶ್ವರಿ ಹೊಟ್ಟೆ ತುಂಬಿಸುತ್ತಿದ್ದಾಳೆ. ನಾಡದೇವತೆಯಾಗಿ ಇಡೀ ನಾಡನ್ನ ಬೆಟ್ಟದ ಮೇಲೆ‌ ಕೂತು‌ಕಾಯುತ್ತಿರುವ ತಾಯಿ ತನ್ನ ಭಕ್ತರಿಗೆ ಒಂದಿಲ್ಲೊಂದು ರೂಪದಲ್ಲಿ ಪ್ರಸಾದ ನೀಡುತ್ತಿದ್ದಾಳೆ.

ಸದ್ಯ ಚಾಮುಂಡೇಶ್ವರಿ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಪ್ರತಿ ದಿನ ಬೆಳಿಗ್ಗೆ ಹಾಗೂ ಮಧ್ಯಾಹ್ನ ಪ್ರಸಾದ ಮಾಡಿ ಹಂಚಲಾಗುತ್ತಿದೆ. ಎಲ್ಲೆ ಕೊರೋನಾ‌ ವಾರಿಯರ್‌ಗಳಾದ ನರ್ಸ್‌ಗಳು, ಆರೋಗ್ಯ ಇಲಾಖೆ ನೌಕರರು ಹಾಗು ಪೌರಕಾರ್ಮಿಕರಿಗು ಸಹ ಆಹಾರ ವಿತರಣೆ ಮಾಡಲಾಗುತ್ತಿದೆ. ಇನ್ನು‌ ಅದೇ ರೀತಿ‌ ಹಸಿದ ನಿರ್ಗತಿಕರಿಗೆ ಸಹ ದೇವಾಲಯದಿಂದ ಹಸಿವು ನೀಗಿಸಲಾಗುತ್ತಿದೆ. ಪ್ರತಿದಿನ ಬೆಳಿಗ್ಗೆ 8 ಗಂಟೆಗೆಲ್ಲ ತಿಂಡಿ ತಯಾರು ಮಾಡಿದ್ರೆ, ಮಧ್ಯಾಹ್ನ‌  12ಕ್ಕೆ ಊಟ ತಯಾರಾಗಿ ಪ್ಯಾಕೇಟ್ ಮಾಡಿ ಹಂಚಲಾಗುತ್ತೆ. ತಯಾರಾದ ಪ್ಯಾಕೆಟ್‌ಗಳನ್ನ ಆಟೋದಲ್ಲಿ ವಿವಿಧ ಸ್ಥಳಗಳಿಗೆ ಹಂಚಿ ಎಲ್ಲರಿಗು ಚಾಮುಂಡಿ ‌ಪ್ರಸಾದ ತಲುಪಿಸುವಂತೆ ಮಾಡಲಾಗುತ್ತಿದೆ.

ನಾಡ ಅಧಿದೇವತೆ ಚಾಮುಂಡೇಶ್ವರಿ ಇಂತ ಕಷ್ಟದ ಸಂದರ್ಭದಲ್ಲಿ ಹಸಿದವರಿಗೆ ಊಟ ಹಾಕುತಿದ್ದಾಳೆ. ಈ ಕೆಲಸಕ್ಕೆ ಹಲವು ದಾನಿಗಳು ಸಾಥ್ ನೀಡಿದ್ದಾರೆ. ಇನ್ನು ದೇವಾಲಯದ ಆದಾಯ ಶೂನ್ಯವಾಗಿದ್ದರು ದಾಸೋಹಕ್ಕೆ ಕೊರತೆ ಆಗಿಲ್ಲ, ದೇವಾಲಯದ ಆಡಳಿತ ಮಂಡಳಿಯಲ್ಲಿ ದಾಸೋಹಕ್ಕೆ ಮೀಸಲಿಟ್ಟ ಹಣದಲ್ಲಿ ಕೊರತೆ ಆಗಿಲ್ಲ. ಈ ಜೊತೆ ಹಲವು ದಾನಿಗಳು ಅಕ್ಕಿ, ಬೆಳೆ, ಹಾಗೂ ಇತರೆ ಪದಾರ್ಥಗಳನ್ನು ದಾನ ನೀಡುತ್ತಿದ್ದಾರೆ.

ಇನ್ನು ತರಕಾರಿಯನ್ನ ಇಂದಿನವರೆಗೂ ಒಂದೆ ಒಂದು ದಿನವು ಕೊಂಡುಕೊಂಡಿಲ್ಲ,‌ ನಿತ್ಯ ತರಕಾರಿಯನ್ನ ಎಪಿಎಂಸಿಯಿಂದ‌ ಯಾರಾದರೋಬ್ಬರು ದಾನವಾಗಿ ನೀಡುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ನಿತ್ಯ ಎರಡು ಬಾರಿ ಚಾಮುಂಡಿ ಪ್ರಸಾದ ಆಹಾರದ ಪೊಟ್ಟಣದ ರೂಪದಲ್ಲಿ ಜನರಿಗೆ ತಲುಪುತ್ತಿದೆ ಅಂತಾರೆ ದೇವಾಲಯದ ಆಡಳಿತ ಮಂಡಳಿ.

ಇದನ್ನೂ ಓದಿ : ಅಂತರ್ಜಲ ಹೆಚ್ಚಳ ಕಾಮಗಾರಿಗೆ ಚಾಲನೆ ; ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯಲಿದೆ 252 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ

ಮೈಸೂರಿನಲ್ಲಿ ನಾಡದೇವತೆ ನೆಲೆಸಿರುವುದು ಕೊರೋನಾ ನಿಯಂತ್ರಣಕ್ಕು ಕಾರಣವಾಗಿದೆ ಎನ್ನುವುದು ಹಲವು ಆಸ್ತಿಕರ ನಂಬಿಕೆ. ಈ ಕಾರಣದಿಂದಲೇ ಅತಿ ಹೆಚ್ಚು ಕೊರೋನಾ ಪಾಸಿಟಿವ್ ಕೇಸ್ ಇದ್ದರು ಮೈಸೂರಿನಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಭಕ್ತರ ನಂಬಿಕೆಯಂತೆ ತಾಯಿಯೇ ಕೊರೋನಾವನ್ನ ಮೈಸೂರಿನಲ್ಲಿ ನಿಯಂತ್ರಿಸಿದ್ದಾಳೆ. ಎನ್ನುವ ಮಾತುಗಳು ಕೇಳಿ ಬರುತ್ತವೆ. ಅದೇನೆ ಇದ್ದರು ದೇಶವೇ ಸಂಕಷ್ಟದ ಪರಿಸ್ಥಿತಿಯಲ್ಲಿದ್ದರು ಚಾಮುಂಡೇಶ್ವರಿ ಪ್ರಸಾದ ಮಾತ್ರ ನಿಲ್ಲದೆ ಇರುವುದು ನಿಜಕ್ಕು ಶ್ಲಾಘನೀಯ. ಬೆಟ್ಟದ ಆಡಳಿತ ಮಂಡಳಿಯ ಈ ಅವಿರತ ಶ್ರಮದಿಂದಾಗಿ ಲಾಕ್‌ಡೌನ್ ನಡುವೆಯೂ ಚಾಮುಂಡಿ ಪ್ರಸಾದ ಭಕ್ತರಿಗೆ ಸಿಗುವಂತಾಗಿದೆ.
First published: May 7, 2020, 7:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading