ಚಾಮರಾಜನಗರದಲ್ಲಿ ಕೊರೋನಾ ರಣಕೇಕೆ: ಒಂದೇ ದಿನ 25 ಕೇಸ್​​ ಪತ್ತೆ

ಕೊರೋನಾ ಸೋಂಕಿನಿಂದ ಇಂದು ಕೊಳ್ಳೇಗಾಲ ಪಟ್ಟಣದ ನಾರಾಯಣ ಗುಡಿ ಬೀದಿಯ 68 ವರ್ಷ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಆದರೆ, ಇವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದರಿಂದ ಚಾಮರಾಜನಗರ ಜಿಲ್ಲೆಯ ಅಂಕಿ ಅಂಶಗಳಲ್ಲಿ ಇದನ್ನು ಸೇರಿಸಿಲ್ಲ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಚಾಮರಾಜನಗರ(ಜು.18): ಚಾಮರಾಜನಗರ ಜಿಲ್ಲೆಯಲ್ಲಿಂದು 25 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 259ಕ್ಕೇರಿದೆ. ಇದೇ ವೇಳೆ 40 ಮಂದಿ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಚಾಮರಾಜನಗರ ತಾಲೂಕಿನಲ್ಲಿ 6 ವರ್ಷದ ಬಾಲಕ 11 ವರ್ಷದ ಬಾಲಕಿ ಸೇರಿದಂತೆ 13 ಮಂದಿಗೆ ಕೊರೋನಾ ಬಂದಿದೆ. ಕೊಳ್ಳೇಗಾಲ 4, ಹನೂರು 1 ಹಾಗೂ ಗುಂಡ್ಲುಪೇಟೆ 7 ಮಂದಿಗೆ ಕೊರೋನಾ ದೃಢಪಟ್ಟಿದೆ. ಸೋಂಕಿತರನ್ನು ಚಾಮರಾಜನಗರ ಜಿಲ್ಲೆ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೇ ವೇಳೆ ಗುಂಡ್ಲುಪೇಟೆ ಪಟ್ಟಣದ 75 ವರ್ಷದ ವೃದ್ಧ, ಯಳಂದೂರು ತಾಲೂಕು ಮಾಂಬಳ್ಳಿ ಗ್ರಾಮದ 65 ವರ್ಷದ ವೃದ್ಧೆಯೊಬ್ಬರು ಸೇರಿದಂತೆ ನಲವತ್ತು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಗುಣಮುಖರಾದವರ ಸಂಖ್ಯೆಯೂ 175ಕ್ಕೇರಿದ್ದು, ಸಮಾಧಾನಕರ ಅಂಶವಾಗಿದೆ.

ಉಳಿದಂತೆ  ಐಸಿಯುನಲ್ಲಿ 3 ಮಂದಿ ಸೇರಿದಂತೆ 81 ಮಂದಿಗೆ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಸೋಂಕಿತರ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕದಲ್ಲಿದ್ದ 4599 ಮಂದಿ ನಿಗಾವಣೆಯಲ್ಲಿದ್ದಾರೆ. ಇದುವರೆಗೆ 15,910 ಮಂದಿಯ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 15645 ಮಂದಿಯ ವರದಿ ನೆಗೆಟಿವ್ ಬಂದಿದೆ. ಇನ್ನೂ 143 ಮಂದಿಯ ಪರೀಕ್ಷಾ ವರದಿ ನಿರೀಕ್ಷಿಸಲಾಗುತ್ತಿದೆ.

ಕೊರೋನಾ ಸೋಂಕಿನಿಂದ ಇಂದು ಕೊಳ್ಳೇಗಾಲ ಪಟ್ಟಣದ ನಾರಾಯಣ ಗುಡಿ ಬೀದಿಯ 68 ವರ್ಷ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಆದರೆ, ಇವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದರಿಂದ ಚಾಮರಾಜನಗರ ಜಿಲ್ಲೆಯ ಅಂಕಿ ಅಂಶಗಳಲ್ಲಿ ಇದನ್ನು ಸೇರಿಸಿಲ್ಲ.

ಇದನ್ನೂ ಓದಿ: ‘ನಿನ್ನ ಪ್ರೀತಿಸುತ್ತಿದ್ದೇನೆ‘ ಎಂದ ಆಂಟಿಯನ್ನು ಹುಡುಕಿಕೊಂಡು ಹೋದ ಯುವಕನಿಗೆ ಕಾದಿತ್ತು ಶಾಕ್​​

ಇದೇ ರೀತಿ ಕೊಳ್ಳೇಗಾಲ ದೇವಾಂಗಪೇಟೆಯ 65 ವರ್ಷದ ನಿವೃತ್ತ ನರ್ಸಿಂಗ್ ಸೂಪರಿಂಟೆಂಡೆಂಟ್ ಹಾಗು ಮುಡಿಗುಂಡಂ ಗ್ರಾಮದ 60 ವರ್ಷದ ವ್ಯಕ್ತಿಯೊಬ್ಬರು ಸಹ ಕೊರೋನಾ ಸೋಂಕಿನಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಈ ಪ್ರಕರಣಗಳನ್ನೂ ಸಹ ಚಾಮರಾಜನಗರ ಜಿಲ್ಲೆಯ ಅಂಕಿಅಂಶಗಳಲ್ಲಿ ಸೇರಿಸಿಲ್ಲ. ಒಟ್ಟಾರೆ ಜಿಲ್ಲೆಯಲ್ಲಿ ಇದುವರೆಗೆ ಆರು ಮಂದಿ ಕೊರೋನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ.
Published by:Ganesh Nachikethu
First published: