HOME » NEWS » Coronavirus-latest-news » CHAMARAJANAGAR DISTRICT HOSPITAL FACES BLOOD CRISIS AS DONORS AFRAID OF CORONA INFECTION HK

ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಕೊರತೆ; ಕೊರೋನಾ ಭೀತಿಯಿಂದ ರಕ್ತದಾನ ಮಾಡಲೂ ಜನರಿಗೆ ಭಯ

ಕೊರೋನಾಭೀತಿ ಹಾಗು ಲಾಕ್ ಡೌನ್ ಹಿನ್ನಲೆಯಲ್ಲಿ ರಕ್ತದಾನ ಮಾಡಲು ಜನರು ಹಿಂಜರಿಯುತ್ತಿರುವುದರಿಂದ ಅಗತ್ಯ ಪ್ರಮಾಣದ ರಕ್ತ ಸಂಗ್ರಹಿಸುವುದು ಕಷ್ಟವಾಗಿದೆ.

news18-kannada
Updated:April 7, 2020, 7:46 PM IST
ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಕೊರತೆ; ಕೊರೋನಾ ಭೀತಿಯಿಂದ ರಕ್ತದಾನ ಮಾಡಲೂ ಜನರಿಗೆ ಭಯ
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ(ಏ.07): ಲಾಕ್ ಡೌನ್ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಕೊರತೆ ಎದುರಾಗುತ್ತಿದ್ದು, ರಕ್ತದಾನಿಗಳು ಮುಂದೆ ಬಾರದ ಕಾರಣ ರಕ್ತನಿಧಿಯಲ್ಲಿ ರಕ್ತ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ.

ಈ ಮೊದಲು ಜಿಲ್ಲಾಸ್ಪತ್ರೆ ಯಲ್ಲಿ ಪ್ರತಿದಿನ 10 ರಿಂದ 15 ಯುನಿಟ್ ರಕ್ತದ ಅಗತ್ಯವಿತ್ತು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ಅಸ್ಪತ್ರೆಗೆ ಬರುವುದು ಕಡಿಮೆಯಾಗಿದೆ. ಅಪಘಾತ ಪ್ರಕರಣಗಳು ಇಲ್ಲದಂತಾಗಿದೆ. ಹಾಗಾಗಿ ಈಗ ಅಷ್ಟೊಂದು ಪ್ರಮಾಣ ರಕ್ತದ ಅಗತ್ಯವಿಲ್ಲದಿದ್ದರೂ ಹೆರಿಗೆಗೆ ಬರುವ ಗರ್ಭಿಣಿಯರಿಗೆ ಪ್ರತಿದಿನ ನಾಲ್ಕರಿಂದ ಐದು ಯುನಿಟ್ ರಕ್ತದ ಅವಶ್ಯಕತೆ ಇದೆ. ಕೊರೋನಾಭೀತಿ ಹಾಗು ಲಾಕ್ ಡೌನ್ ಹಿನ್ನಲೆಯಲ್ಲಿ ರಕ್ತದಾನ ಮಾಡಲು ಜನರು ಹಿಂಜರಿಯುತ್ತಿರುವುದರಿಂದ ಅಗತ್ಯ ಪ್ರಮಾಣದ ರಕ್ತ ಸಂಗ್ರಹಿಸುವುದು ಕಷ್ಟವಾಗಿದೆ.

ಈ ಹಿನ್ನಲೆಯಲ್ಲಿ ತುರ್ತು ಸಂದರ್ಭ ಎದುರಾದರೆ ಸಮಸ್ಯೆ ತಲೆದೋರುವ ಸಾಧ್ಯತೆಗಳಿವೆ. ಹಾಗಾಗಿ ರಕ್ತದ ಕೊರತೆ ನೀಗಿಸಲು ನಾಳೆ ಬುಧವಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಇನ್ನೊಂದೆಡೆ ರಕ್ತದಾನಿಗಳನ್ನು ಸಂಪರ್ಕಿಸಿ ರಕ್ತದಾನ ಮಾಡುವಂತೆ ಮನವಿ ಮಾಡಲಾಗುತ್ತಿದೆ. ಲಾಕ್ ಡೌನ್ ಇರುವುದರಿಂದ ರಕ್ತದಾನಿಗಳನ್ನು ಆಸ್ಪತ್ರೆಯ ವಾಹನಗಳಲ್ಲೇ ಕರೆತಂದು ರಕ್ತದಾನ ಮಾಡಿದ ನಂತರ ಅವರನ್ನು ಸುರಕ್ಷಿತವಾಗಿ ಅವರವರ ಗ್ರಾಮಗಳಿಗೆ ಬಿಡಲು ಕ್ರಮವಹಿಸಲಾಗಿದೆ ಎಂದು ರೆಸಿಡೆನ್ಷಿಯಲ್ ಮೆಡಿಕಲ್ ಆಫೀಸರ್ ಡಾ.ಕೃಷ್ಣಪ್ರಸಾದ್ ತಿಳಿಸಿದ್ದಾರೆ.

ಸಧ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಮುಂದೆ ರಕ್ತದ ಕೊರತೆ ಎದುರಾಗುವ ಸಾಧ್ಯತೆಗಳಿರುವುದರಿಂದ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ :

ಇನ್ನೊಂದೆಡೆ ಕೊರೊನಾ ಎಫೆಕ್ಟ್ ನಿಂದ ಚಾಮರಾಜನಗರ ಜಿಲ್ಲೆಯಲ್ಲಿ ರಕ್ತದ ಕೊರತೆ ಎದುರಾಗಿರುವುದು ನಿಜ. ರಕ್ತದಾನ ಮಾಡುವುದರಿಂದ ಕೊರೋನಾ ಬರುವುದಿಲ್ಲ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ.ಇದನ್ನೂ ಓದಿ : ರೈತರ ಬುಡ ಅಲುಗಾಡಿಸಿದ ಕೊರೋನಾ - ಸೂಕ್ತ ಮಾರಕಟ್ಟೆ ಸಿಗದೆ ತೋಟಗಾರಿಕೆ ಬೆಳೆಗಾರರ ಸಂಕಷ್ಟ

ಮುಂದಿನ ದಿನಗಳಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ರಕ್ತದಾನದ ಕ್ಯಾಂಪ್ ಮಾಡುತ್ತೇವೆ. ಈಗಾಗಲೇ ರಕ್ತ ನಿಧಿ ಕೇಂದ್ರದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ರಕ್ತದಾನಿಗಳನ್ನ ಸಂಪರ್ಕಿಸಿ ರಕ್ತದಾನ ಮಾಡುವಂತೆ ಮನವೊಲಿಸುತ್ತೇವೆ ಎಂದು ಡಿ.ಹೆಚ್.ಓ ಡಾ.ರವಿ ಹೇಳುತ್ತಾರೆ.
First published: April 7, 2020, 7:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading