ಚಾಮರಾಜನಗರದ ಕೋವಿಡ್ ಪ್ರಯೋಗಾಲಯ ಸೀಲ್​ಡೌನ್​; ವರದಿ ವಿಳಂಬದಿಂದ ಶಂಕಿತರಲ್ಲಿ ಆತಂಕ

ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸೀಲ್ ಡೌನ್ ಮಾಡಿ ಈಗಾಗಲೇ ನಾಲ್ಕು ದಿನ ಕಳೆದಿರುವುದರಿಂದ ಈಗ ಪ್ರಯೋಗಾಲಯನ್ನು ತೆರೆಯಬಹುದಾಗಿದ್ದರೂ,  ಲ್ಯಾಬ್ ಟೆಕ್ನಿಷಿಯನ್ ಗಳು ಕ್ವಾರಂಟೈನ್ ಆಗಿರುವ ಕಾರಣ  ಇಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ.

news18-kannada
Updated:July 1, 2020, 11:56 AM IST
ಚಾಮರಾಜನಗರದ ಕೋವಿಡ್ ಪ್ರಯೋಗಾಲಯ ಸೀಲ್​ಡೌನ್​; ವರದಿ ವಿಳಂಬದಿಂದ ಶಂಕಿತರಲ್ಲಿ ಆತಂಕ
ಚಾಮರಾಜನಗರ ಕೋವಿಡ್​​-19 ಆಸ್ಪತ್ರೆ
  • Share this:
ಚಾಮರಾಜನಗರ (ಜು.1) ಚಾಮರಾಜನಗರ ಮೆಡಿಕಲ್  ಕಾಲೇಜಿನ ಕೋವಿಡ್ ಪ್ರಯೋಗಾಲಯ ಕಳೆದ ನಾಲ್ಕು ದಿನಗಳಿಂದ ಸೀಲ್ ಡೌನ್ ಆಗಿದ್ದು, ಕೋವಿಡ್ ಪರೀಕ್ಷೆ ಸ್ಥಗಿತಗೊಂಡಿದೆ.  ಪರಿಣಾಮ ಕಳೆದ ನಾಲ್ಕು ದಿನಗಳಿಂದ  1684 ಕೊರೋನಾ ಶಂಕಿತರ ಗಂಟಲು ದ್ರವ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆದರೆ ಇನ್ನೂ ಸಹ ವರದಿ ಬಾರದೆ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕೊಟ್ಟವರಲ್ಲಿ ಆತಂಕ ಮುಂದುವರಿದಿದೆ.

ಈಗಾಗಲೇ ಜಿಲ್ಲೆಯಲ್ಲಿ 33 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಇವರ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕದಲ್ಲಿದ್ದವರು ಹಾಗು ಜ್ವರ,ಶೀತ,ಗಂಟಲು ನೋವಿನ ಲಕ್ಷಣಗಳಿರುವವರ ಗಂಟಲು ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಆದರೆ ಪರೀಕ್ಷಾ ವರದಿ ತಡವಾಗುತ್ತಿರುವುದರಿಂದ ಆತಂಕ ಹೆಚ್ಚಾಗಿದೆ.

ಕಳೆದ ಐದು ದಿನಗಳ ಹಿಂದೆ ಕೋವಿಡ್ ಪ್ರಯೋಗಾಲಯದ  ಮಹಿಳಾ ಲ್ಯಾಬ್ ಟೆಕ್ನಿಷಿಯನ್ ಒಬ್ಬರಿಗೆ  ಕೊರೊನಾ ದೃಢವಾದ ಹಿನ್ನಲೆಯಲ್ಲಿ  ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಈ ಪ್ರಯೋಗಾಲಯವನ್ನು ಸೀಲ್ ಡೌನ್ ಮಾಡಲಾಗಿದೆ. ಹಾಗೆಯೇ ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಇತರೆ ಏಳು ಮಂದಿ ಟೆಕ್ನಿಷಿಯನ್ ಗಳನ್ನು ಕ್ವಾರಂಟೈನ್ ಮಾಡಲಾಗಿದೆ.

ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸೀಲ್ ಡೌನ್ ಮಾಡಿ ಈಗಾಗಲೇ ನಾಲ್ಕು ದಿನ ಕಳೆದಿರುವುದರಿಂದ ಈಗ ಪ್ರಯೋಗಾಲಯನ್ನು ತೆರೆಯಬಹುದಾಗಿದ್ದರೂ,  ಲ್ಯಾಬ್ ಟೆಕ್ನಿಷಿಯನ್ ಗಳು ಕ್ವಾರಂಟೈನ್ ಆಗಿರುವ ಕಾರಣ  ಇಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ.

ಹೈಕೋರ್ಟ್​​ಗೂ ತಟ್ಟಿದ ಕೊರೋನಾ ಭೀತಿ; ಆನ್​ಲೈನ್ ಕಲಾಪ ನಡೆಸಲು ಮುಖ್ಯ ನ್ಯಾಯಮೂರ್ತಿ ನಿರ್ಧಾರ

ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಮೈಸೂರು ಮೆಡಿಕಲ್ ಕಾಲೇಜಿನಿಂದ ಚಾಮರಾಜನಗರದ ಕೋವಿಡ್ ಪ್ರಯೋಗಾಲಯಕ್ಕೆ   ಒಬ್ಬ   ಮೈಕ್ರೋ ಬಯೋಲಜಿಸ್ಟ್ ಹಾಗು ಒಬ್ಬ ಲ್ಯಾಬ್ ಟೆಕ್ನಿಷಿಯನ್ ನಿಯೋಜಿಸಲಾಗುತ್ತಿದ್ದು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಯಿಂದ ಪರೀಕ್ಷೆಗಳನ್ನು ಆರಂಭಿಸಲಾಗುವುದು ಎಂದು ಚಾಮರಾಜನಗರ ಮೆಡಿಕಲ್ ಕಾಲೇಜಿನ ಡೀನ್ ಡಾ.ಸಂಜೀವ್ ನ್ಯೂಸ್ 18 ಗೆ ತಿಳಿಸಿದ್ದಾರೆ.

ಗಂಟಲು ದ್ರವ ಪರೀಕ್ಷೆ ಕೊಟ್ಟವರು ಪರೀಕ್ಷಾ ವರದಿ ಬರುವವರೆಗೆ ಸ್ವಯಂ ಕ್ವಾರಂಟೈನ್ ಲ್ಲಿರಬೇಕು ಇಲ್ಲವೆ ಅವರನ್ನು ಕ್ವಾರಂಟೈನ್ ನಲ್ಲಿ ಇರುವಂತೆ ಅಧಿಕಾರಿಗಳು ತಿಳುವಳಿಕೆ ನೀಡಿ  ತಾಕೀತು  ಮಾಡಬೇಕು. ಆದರೆ ಈ ಕೆಲಸ ಆಗುತ್ತಿಲ್ಲ ಎಂದ ದೂರುಗಳು ಕೇಳಿಬರುತ್ತಿವೆ.  ಬಹುತೇಕ ಮಂದಿ ಸ್ವಯಂ ಕ್ವಾರಂಟೈನ್ ನಲ್ಲಿ ಇರದೆ  ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ.

ಒಂದು ವೇಳೆ ಇವರ ಪೈಕಿ ಯಾರಿಗಾದರೂ ಕೊರೋನಾ ಪಾಸಿಟಿವ್ ವರದಿ ಬಂದರೆ ಯಾರು ಹೊಣೆ  ಅವರನ್ನು ಪತ್ತೆ ಹಚ್ಚುವಷ್ಟರೊಳಗೆ ಅವರಿಂದ ಮತ್ತಷ್ಟು ಜನರಿಗೆ ಕೊರೋನಾ ಸೋಂಕು ಹರಡುವುದಿಲ್ಲವೆ ಎಂಬ ಆತಂಕ ಸಾರ್ವಜನಿಕರಲ್ಲಿ ಕಾಡುತ್ತಿದೆ.
First published:July 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading