• Home
  • »
  • News
  • »
  • coronavirus-latest-news
  • »
  • ಭೀಮಾ ತೀರದ ಚಡಚಣದ ವಿವಾದಿತ ಪಿಎಸ್ಐ ಓಓಡಿ ಮೇಲೆ ಎಸ್ಪಿ ಕಚೇರಿಗೆ ವರ್ಗಾವಣೆ; ಸಿ.ಬಿ.ಬಾಗೇವಾಡಿ ನೂತನ ಪಿಎಸ್ಐ

ಭೀಮಾ ತೀರದ ಚಡಚಣದ ವಿವಾದಿತ ಪಿಎಸ್ಐ ಓಓಡಿ ಮೇಲೆ ಎಸ್ಪಿ ಕಚೇರಿಗೆ ವರ್ಗಾವಣೆ; ಸಿ.ಬಿ.ಬಾಗೇವಾಡಿ ನೂತನ ಪಿಎಸ್ಐ

ಪಿಎಸ್​ಐ ಮಹಾದೇವ ಯಲಿಗಾರ

ಪಿಎಸ್​ಐ ಮಹಾದೇವ ಯಲಿಗಾರ

ಮುಂದಿನ ಆದೇಶದವರೆಗೆ ಎಸ್ಪಿ ಕಚೇರಿಯಲ್ಲಿದ್ದ ಪಿಎಸ್ಐ ಸಿ.ಬಿ. ಬಾಗೇವಾಡಿ ಅವರನ್ನು ಚಡಚಣ ಪಿಎಸ್ಐ ಆಗಿ ಕಾರ್ಯ ನಿರ್ವಹಿಸುವಂತೆ ಆದೇಶದಲ್ಲಿ ಸೂಚನೆ ನೀಡಿದ್ದಾರೆ. ಈ ಮಧ್ಯೆ ಪಿಎಸ್ಐ ಮಹಾದೇವ ಯಲಿಗಾರ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ವಿಜಯಪುರ ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಿದ್ದಾರೆ.

ಮುಂದೆ ಓದಿ ...
  • Share this:

ವಿಜಯಪುರ (ಮೇ 09): ಭೀಮಾ ತೀರದ ಚಡಚಣ ಪಿಎಸ್ಐ ಮಹಾದೇವ ಯಲಿಗಾರ ಅವರನ್ನು ಓಓಡಿ ಮೇಲೆ ವಿಜಯಪುರ ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಇವರ ಜಾಗಕ್ಕೆ ಸಿ.ಬಿ. ಬಾಗೇವಾಡಿ ಅವರನ್ನು ನೇಮಿಸಲಾಗಿದೆ.


ವಿಜಯಪುರ ಜಿಲ್ಲೆಯ ಭೀಮಾ ತೀರದ ಚಡಚಣ ಪಿಎಸ್ಐ ಆಗಿದ್ದ ಮಹಾದೇವ ಯಲಿಗಾರ ಅವರ ಮೇಲೆ ಹಲವು ಆರೋಪಗಳು ಕೇಳಿ ಬಂದಿದ್ದವು. ಚಡಚಣ ಮಹಾರಾಷ್ಟ್ರದ ಗಡಿಯಲ್ಲಿರುವ ತಾಲೂಕು ಕೇಂದ್ರವಾಗಿದ್ದು, ಇಲ್ಲಿಗೆ ಪ್ರತಿನಿತ್ಯ ಹಲವಾರು ಜನ ಮಹಾರಾಷ್ಟ್ರದಿಂದ ಅಕ್ರಮವಾಗಿ ವಿಜಯಪುರ ಜಿಲ್ಲೆಗೆ ಬರುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದರ ಮಧ್ಯೆಯೇ ಪಿಎಸ್​ಐ ಕೊರೋನಾ ವಾರಿಯರ್ಸ್ ಸನ್ಮಾನದ ಹೆಸರಿನಲ್ಲಿ ನಾನಾ ಗ್ರಾಮಗಳಲ್ಲಿ ಸನ್ಮಾನ ಸ್ವೀಕರಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಠಾಣೆಯ ಸಿಬ್ಬಂದಿಯೂ ಅದರಲ್ಲಿ ಭಾಗಿಯಾಗಿದ್ದರು.  ಈ ಕಾರ್ಯಕ್ರಮಗಳಲ್ಲಿ ಜನರು ಮಾಸ್ಕ್ ಕೂಡ ಧರಿಸಿರಲಿಲ್ಲ. ಅಲ್ಲದೇ, ಸಾಮಾಜಿಕ ಅಂತರವೂ ಪಾಲನೆಯಾಗಿರಲಿಲ್ಲ.


ಚಡಚಣ ತಾಲೂಕು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವುದರಿಂದ ವಿಜಯಪುರ ಜಿಲ್ಲಾಡಳಿತ ಈ ಪ್ರದೇಶದಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಿದೆ. ಇದೇ ಗಡಿ ಭಾಗದಲ್ಲಿರುವ ದೇವರ ನಿಂಬರಗಿ ಗ್ರಾಮದಲ್ಲಿ ಕಾರ್ಯಕ್ರಮ ನಡೆದಿದ್ದು, ಚಡಚಣ ಪಿಎಸ್​ಐ ಮಹಾದೇವ  ಯಲಿಗಾರ, ಸಿಬ್ಬಂದಿಯಿಂದ ದಿವ್ಯ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿತ್ತು. ಈ ಕಾರ್ಯಕ್ರಮದಲ್ಲಿ ನೂರಾರು ಜನ ಸೇರಿದ್ದು, ಸರಕಾರದ ಆದೇಶಕ್ಕೂ ಕ್ಯಾರೆ ಎನ್ನದೆ ಪಿ ಎಸ್​ಐ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.


ಕೊರೋನ ಎಮರ್ಜೆನ್ಸಿಯಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಗ್ರಾಮಸ್ಥರು ಸನ್ಮಾನಿಸಿದ್ದಾರೆ. ಆದರೆ, ಇಷ್ಟೊಂದು ಜನ ಸೇರಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದವರು ಯಾರು ಎಂಬ ಪ್ರಶ್ನೆ ಎದುರಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿಯೂ ವರದಿ ಪ್ರಸಾರವಾಗಿತ್ತು. ಶಿಸ್ತು ಕಾಪಾಡಬೇಕಾದ ಪೊಲೀಸ್ ಅಧಿಕಾರಿಯಿಂದಲೇ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದರು. ಪಿಎಸ್​ಐ ವರ್ತನೆಗಳಿಂದ ಹಿರಿಯ ಪೊಲೀಸ್ ಅಧಿಕಾರಿಗಳೂ ಬೇಸತ್ತಿದ್ದರು ಎನ್ನಲಾಗಿದೆ. ಅಲ್ಲದೇ, ಪಿಎಸ್ಐ ಮಹಾದೇವ ಯಲಿಗಾರ ವಿರುದ್ಧ ನಾನಾ ಆರೋಪಗಳೂ ಕೇಳಿ ಬಂದಿದ್ದವು. ಈ ಎಲ್ಲ ಅಂಶಗಳನ್ನು ಪರಿಗಣಿಸಿದ ವಿಜಯಪುರ ಎಸ್ಪಿ ಅನುಪಮ ಅಗರವಾಲ ತಕ್ಷಣದಿಂದ ಜಾರಿಗೆ ಬರುವಂತೆ ಮಹಾದೇವ ಯಲಿಗಾರ ಅವರನ್ನು ಚಡಚಣ ಸೇವೆಯಿಂದ ಬಿಡುಗಡೆ ಮಾಡಿ ವಿಜಯಪುರ ಎಸ್ಪಿ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.


ಅಲ್ಲದೇ, ಮುಂದಿನ ಆದೇಶದವರೆಗೆ ಎಸ್ಪಿ ಕಚೇರಿಯಲ್ಲಿದ್ದ ಪಿಎಸ್ಐ ಸಿ.ಬಿ. ಬಾಗೇವಾಡಿ ಅವರನ್ನು ಚಡಚಣ ಪಿಎಸ್ಐ ಆಗಿ ಕಾರ್ಯ ನಿರ್ವಹಿಸುವಂತೆ ಆದೇಶದಲ್ಲಿ ಸೂಚನೆ ನೀಡಿದ್ದಾರೆ. ಈ ಮಧ್ಯೆ ಪಿಎಸ್ಐ ಮಹಾದೇವ ಯಲಿಗಾರ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ವಿಜಯಪುರ ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಿದ್ದಾರೆ.


ಇದನ್ನು ಓದಿ: ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ಪರಿಹಾರ ಹಣ ವಿತರಣೆಗೆ ಮಾರ್ಗಸೂಚಿ ಸಿದ್ಧಪಡಿಸಿದ ಸಾರಿಗೆ ಇಲಾಖೆ


ಈ ಮುಂಚೆ ಚಡಚಣಕ್ಕೆ ಎರಡನೇ ಬಾರಿ ಪಿಎಸ್​ಐ ಆಗಿ ವರ್ಗಾವಣೆಯಾಗಿ ಕರ್ತವ್ಯಕ್ಕೆ ಹಾಜರಾಗುವಾಗ ಮಹಾದೇವ ಯಲಿಗಾರ ಅವರನ್ನು ಜನರು ಭರ್ಜರಿ ಮೆರವಣಿಗೆಯ ಮೂಲಕ ಸ್ವಾಗತ ಕೋರಿದ್ದರು.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು