HOME » NEWS » Coronavirus-latest-news » CET 2021 EXAM POSTPONED DUE TO COVID SESR

CET 2021: ಸಿಇಟಿ ಪರೀಕ್ಷೆ ಮುಂದೂಡಿಕೆ; ಆಗಸ್ಟ್​ನಲ್ಲಿ ಪರೀಕ್ಷೆ ಮರು ನಿಗದಿ

. ಈ ಮೊದಲು ಜುಲೈ 7 ಮತ್ತು 8 ರಂದು ಸಿಇಟಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಇದೀಗ ಈ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಮರು ದಿನಾಂಕವನ್ನು ಪ್ರಕಟಿಸಲಾಗಿದೆ

news18-kannada
Updated:May 12, 2021, 6:06 PM IST
CET 2021: ಸಿಇಟಿ ಪರೀಕ್ಷೆ ಮುಂದೂಡಿಕೆ; ಆಗಸ್ಟ್​ನಲ್ಲಿ ಪರೀಕ್ಷೆ ಮರು ನಿಗದಿ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು (ಮೇ. 12): ರಾಜ್ಯದಲ್ಲಿ ಎರಡನೇ ಅಲೆ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ)ಯನ್ನು ಮುಂದೂಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದೇಶ ನೀಡಿದೆ. ಈಗ ಪರಿಷ್ಕೃತ ವೇಳ ಪಟ್ಟಿಯನ್ನು ಪ್ರಕಟಿಸಿದ್ದು, ಇದೇ ಆಗಸ್ಟ್​ 28 ರಿಂದ ಪರೀಕ್ಷೆ ನಡೆಸಲಿ ನಿರ್ಧರಿಸಲಾಗಿದೆ. ಈ ಮೊದಲು ಜುಲೈ 7 ಮತ್ತು 8 ರಂದು ಸಿಇಟಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಇದೀಗ ಈ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಮರು ದಿನಾಂಕವನ್ನು ಪ್ರಕಟಿಸಲಾಗಿದೆ ದ್ವೀತಿಯ ಪಿಯುಸಿ ಪರೀಕ್ಷೆ ಮುಂದೂಡಿರುವ ಹಿನ್ನಲೆ ಈ ನಿರ್ಧಾರವನ್ನು ನಡೆಸಲಾಗಿದೆ. ಹೊಸ ವೇಳಾಪಟ್ಟಿಯಂತೆ ಆಗಸ್ಟ್​ 28 ಮತ್ತು 29ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಆಗಸ್ಟ್​​ 28 ರಂದು ಬೆಳಗ್ಗೆ ಜೀವಶಾಸ್ತ್ರ ಪರೀಕ್ಷೆ ನಡೆಯಲಿದ್ದು, ಮಧ್ಯಾಹ್ನ ಗಣಿತ ಪರೀಕ್ಷೆ ನಡೆಯಲಿದೆ. ಆಗಸ್ಟ್​ 29 ರಂದು ಬೆಳಗ್ಗೆ ಭೌತಶಾಸ್ತ್ರ ಪರೀಕ್ಷೆ ನಡೆಯಲಿದ್ದು ಮಧ್ಯಾಹ್ನ ರಸಾಯನ ಶಾಸ್ತ್ರ ಪರೀಕ್ಷೆ ನಡೆಯಲಿದೆ. ಜುಲೈ 9 ರಂದು ನಿಗದಿಯಾಗಿದ್ದ ಕನ್ನಡ ಭಾಷಾ ಪರೀಕ್ಷೆಯನ್ನು ಆಗಸ್ಟ್​​ 30 ರಂದು ನಿಗದಿಸಲಾಗಿದೆ ಎಂದು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

Youtube Video

ಶೀಘ್ರದಲ್ಲಿಯೇ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಹೆಚ್ಚಿನ ವಿವರಗಳನ್ನು ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್​ನಲ್ಲಿ ಪಡೆಯಬಹುದಾಗಿದೆ.    https://cetonline.karnataka.gov.in/kea/ ವೆಬ್‌ ತಾಣಕ್ಕೆ ಭೇಟಿ ನೀಡಬಹುದು. ವಿದ್ಯಾರ್ಥಿಗಳು ಕೋವಿಡ್‌ನಿಂದ ಸುರಕ್ಷಿತವಾಗಿದ್ದು, ಪಿಯುಸಿ ಮತ್ತು ಸಿಇಟಿ ಪರೀಕ್ಷೆಗೆ ಉತ್ತಮ ಸಿದ್ಧತೆ ಮಾಡಿಕೊಳ್ಳುವಂತೆ ಉನ್ನತ ಶಿಕ್ಷಣ ಸಚಿವರು ತಿಳಿಸಿದ್ದಾರೆ

ಇದೇ  ಮೇ 24ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಈಗಾಗಲೇ ಮುಂದೂಡಲಾಗಿದ್ದು, ಮರು ದಿನಾಂಕವನ್ನು ಇನ್ನು ಪ್ರಕಟಿಸಿಲ್ಲ. ಈ ಹಿನ್ನಲೆಯಲ್ಲಿ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ.
Published by: Seema R
First published: May 12, 2021, 5:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories