Covid Vaccine: ಈ ಬಿಜೆಪಿ ನಾಯಕ 5 ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರಂತೆ, 6ನೆಯದಕ್ಕೆ ವೇಯ್ಟಿಂಗ್!

Covid Vaccine: ಡಿಸೆಂಬರ್ 2021 ಮತ್ತು ಜನವರಿ 2022ರ ನಡುವೆ 6ನೇ ಡೋಸ್ ಲಸಿಕೆಯನ್ನು ಪಡೆಯಬೇಕೆಂದು ಸರ್ಟಿಫಿಕೇಟ್​​ನಲ್ಲಿ ಹೇಳಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನವದೆಹಲಿ(ಸೆ.20): ವಿಶ್ವ ಆರೋಗ್ಯ ಸಂಸ್ಥೆಯ(World Health Organization) ಸೂಚನೆಯಂತೆ ಎಲ್ಲರೂ ಸಹ 2 ಡೋಸ್ ಕೊರೋನಾ(Corona Vaccine) ಲಸಿಕೆಯನ್ನು ಪಡೆಯಬೇಕು. ಆದರೆ ಉತ್ತರ ಪ್ರದೇಶದ(Uttar Pradesh) ಬಿಜೆಪಿ ಬೂತ್ ಮಟ್ಟದ(BJP Booth level Leader) ನಾಯಕ ಒಂದಲ್ಲ, ಎರಡಲ್ಲ ಬರೋಬ್ಬರಿ 5 ಡೋಸ್ ಲಸಿಕೆಗಳನ್ನು ಪಡೆದಿದ್ದಾರೆ ಎಂದು ಅವರ ಸರ್ಟಿಫಿಕೇಟ್(Certificate) ಹೇಳುತ್ತಿದೆ. ಅಷ್ಟೇ ಅಲ್ಲದೇ, ಈಗ 6ನೇ ಡೋಸ್​ ಲಸಿಕೆ ಪಡೆಯಲು ದಿನಾಂಕ ನಿಗದಿಯಾಗಿದೆ. ಇದು ಕಿಡಿಗೇಡಿತನ ಹಾಗೂ ಪಿತೂರಿ ಪ್ರಕರಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. 73 ವರ್ಷದ ರಾಮ್ಪಾಲ್​ ಸಿಂಗ್​ 5 ಡೋಸ್ ಲಸಿಕೆಗಳನ್ನು ಪಡೆದಿದ್ದಾರೆ ಎಂದು ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ. ಇವರು ಸರ್ಧನ ಪ್ರದೇಶದ ಬೂತ್ ನಂಬರ್ 79ರ ಬಿಜೆಪಿ ನಾಯಕ ಹಾಗೂ ಹಿಂದೂ ಯುವ ವಾಹಿನಿಯ ಸದಸ್ಯ ಕೂಡ ಹೌದು. ಇವರು ಲಸಿಕೆ ಪಡೆದಿರುವ ಸರ್ಟಿಫಿಕೇಟ್​​ನ್ನು ಡೌನ್ ಲೋಡ್ ಮಾಡಲಾಗಿದೆ. ಅದರಲ್ಲಿ ಈಗಾಗಲೇ ರಾಮ್ಪಾಲ್​ ಸಿಂಗ್ 5 ಡೋಸ್ ಕೊರೋನಾ ಲಸಿಕೆಗಳನ್ನು ಪಡೆದಿದ್ದು, ಈಗ 6ನೇ ಡೋಸ್ ಪಡೆಯಲು ದಿನಾಂಕ ನಿಗದಿಯಾಗಿದೆ ಎಂದು ಹೇಳಲಾಗಿದೆ.

    ಇದು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಎಂದು ಬಿಜೆಪಿ ನಾಯಕ ಆರೋಪಿಸುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ. ಸಿಂಗ್ ಮಾರ್ಚ್​ 16ರಂದು ತಮ್ಮ ಮೊದಲ ಕೊರೋನಾ ಲಸಿಕೆಯನ್ನು ಪಡೆದಿದ್ದು, ಮೇ 8ರಂದು ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದರು ಎಂದು ತಿಳಿದು ಬಂದಿದೆ. ಆದರೆ ಕೊರೋನಾ ವ್ಯಾಕ್ಸಿನ್ ಪಡೆದ ಪ್ರಮಾಣ ಪತ್ರವನ್ನು ಅಧಿಕೃತ ಪೋರ್ಟಲ್​​ನಿಂದ ಡೌನ್​ಲೋಡ್ ಮಾಡಿದಾಗ, ಅಲ್ಲಿ ಈಗಾಗಲೇ 5 ಡೋಸ್ ಕೊರೋನಾ ಲಸಿಕೆ ಪಡೆದಿದ್ದಾರೆ ಎಂದು ಹೇಳಿದೆ. ಹಾಗೂ 6ನೇ ಡೋಸ್ ಲಸಿಕೆ ಪಡೆಯಲು ದಿನಾಂಕವೂ ನಿಗದಿಯಾಗಿದೆ.

    ಇದನ್ನೂ ಓದಿ:CoronaVirus| ದೇಶದಲ್ಲಿ ಶೇ.15 ರಷ್ಟು ಕುಸಿತ ಕಂಡ ಕೊರೋನಾ ಕೇಸ್, 6 ತಿಂಗಳಲ್ಲೇ ಅತೀ ಕಡಿಮೆ; ದೆಹಲಿಯಲ್ಲಿ ಶೂನ್ಯ ಸಾವು!

    ಡಿಸೆಂಬರ್ 2021 ಮತ್ತು ಜನವರಿ 2022ರ ನಡುವೆ 6ನೇ ಡೋಸ್ ಲಸಿಕೆಯನ್ನು ಪಡೆಯಬೇಕೆಂದು ಸರ್ಟಿಫಿಕೇಟ್​​ನಲ್ಲಿ ಹೇಳಲಾಗಿದೆ. ಮೊದಲ ಡೋಸ್ ಮಾರ್ಚ್​ 16ರಂದು, ಎರಡನೇ ಡೋಸ್ ಮೇ 8ರಂದು, ಮೂರನೇ ಡೋಸ್ ಮೇ 15ರಂದು, ಹಾಗೂ ನಾಲ್ಕು ಮತ್ತು 5ನೇ ಡೋಸ್​ ಸೆಪ್ಟೆಂಬರ್ 15ರಂದು ತೋರಿಸುತ್ತಿದೆ.

    ಮುಖ್ಯ ವೈದ್ಯಾಧಿಕಾರಿ ಅಖಿಲೇಶ್ ಮೋಹನ್​ ಅವರನ್ನು ಭೇಟಿ ಮಾಡಿದಾಗ, ಕೊರೋನಾ ಲಸಿಕೆ ಪಡೆಯಲು ಎರಡಕ್ಕಿಂತ ಹೆಚ್ಚು ಬಾರಿ ನೊಂದಣಿಯಾಗಿರುವ ಮೊದಲು ಪ್ರಕರಣ ಇದಾಗಿದೆ ಎಂದು ಹೇಳಿದ್ದಾರೆ. ಇದು ಬೇಕದಂತೆ ಮಾಡಿರುವ ಪಿತೂರಿಯಾಗಿದೆ. ಕೆಲವು ಕಿಡಿಗೇಡಿಗಳು ಪೋರ್ಟಲ್​ನ್ನು ಹ್ಯಾಕ್ ಮಾಡಿ ಈ ರೀತಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಲಸಿಕೆ ಅಧಿಕಾರಿ ಪ್ರವೀಣ್ ಗೌತಮ್​ ಅವರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

    ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
    Published by:Latha CG
    First published: