HOME » NEWS » Coronavirus-latest-news » CENTRAL RELEASES GUIDELINES AS SECOND PHASE LOCKDOWN STARTS FROM TODAY COVID19 PANDEMIC MAK

Lockdown Guidelines: ಇಂದಿನಿಂದ ದೇಶದಾದ್ಯಂತ 2ನೇ ಹಂತದ ಲಾಕ್​ಡೌನ್‌; ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ; ಏನುಂಟು? ಏನಿಲ್ಲ?

Second Phase Lockdown Guidelines: ಈ ಮೊದಲು ಸರ್ಕಾರ ಏಪ್ರಿಲ್.14 ರವರೆಗೆ ಮಾತ್ರ 21 ದಿನಗಳ ಲಾಕ್‌ಡೌನ್‌ ಘೋಷಿಸಿತ್ತು. ಆದರೆ, ಈ ಅವಧಿಯಲ್ಲಿ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಭಾರದ ಕಾರಣ ಇಂದಿನಿಂದ 19 ದಿನಗಳ ಮತ್ತೊಂದು ಅವಧಿಯ ಲಾಕ್‌ಡೌನ್ ಘೋಷಿಸಲಾಗಿದೆ.

news18-kannada
Updated:April 15, 2020, 10:53 AM IST
Lockdown Guidelines: ಇಂದಿನಿಂದ ದೇಶದಾದ್ಯಂತ 2ನೇ ಹಂತದ ಲಾಕ್​ಡೌನ್‌; ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ; ಏನುಂಟು? ಏನಿಲ್ಲ?
ಸಾಂದರ್ಭಿಕ ಚಿತ್ರ
  • Share this:
ನವ ದೆಹಲಿ (ಏಪ್ರಿಲ್ 15): ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಏಪ್ರಿಲ್.15 ರಿಂದ ಕೇಂದ್ರ ಸರ್ಕಾರ ಎರಡನೇ ಹಂತದ ಲಾಕ್‌ಡೌನ್‌ ಘೋಷಿಸಿದ್ದು, ಈ ಲಾಕ್‌ಡೌನ್‌ ಹೇಗಿರಲಿದೆ? ಜನ ಏನು ಮಾಡಬೇಕು? ಏನು ಮಾಡಬಾರದು? ಯಾವುದು ಲಭ್ಯ? ಯಾವುದು ಅಲಭ್ಯ? ಎಂಬ ಕುರಿತ ಸಂಪೂರ್ಣ ಮಾರ್ಗಸೂಚಿಯನ್ನು ಇಂದು ಬಿಡುಗಡೆ ಮಾಡಲಾಗಿದೆ.

ಈ ಮೊದಲು ಸರ್ಕಾರ ಏಪ್ರಿಲ್.14 ರವರೆಗೆ ಮಾತ್ರ 21 ದಿನಗಳ ಲಾಕ್‌ಡೌನ್‌ ಘೋಷಿಸಿತ್ತು. ಆದರೆ, ಈ ಅವಧಿಯಲ್ಲಿ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಭಾರದ ಕಾರಣ ಇಂದಿನಿಂದ 19 ದಿನಗಳ ಮತ್ತೊಂದು ಅವಧಿಯ ಲಾಕ್‌ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಹೇಗೆ ನಡೆದುಕೊಳ್ಳಬೇಕು? ಅವರಿಗೆ ಏನೆಲ್ಲ ಲಭ್ಯ? ಏನೆಲ್ಲಾ ನಿಷೇಧ ಎಂಬ ಕುರಿತ ಸಂಪೂರ್ಣ ವಿವರವನ್ನು ಈ ಮಾರ್ಗಸೂಚಿ ಹೊಂದಿದೆ. ಅಲ್ಲದೆ, ಎಲ್ಲರೂ ಚಾಚೂ ತಪ್ಪದೆ ಪಾಲಿಸಲು ಸೂಚಿಸಲಾಗಿದೆ.

ಈ ಮಾರ್ಗಸೂಚಿಯಲ್ಲಿ ಎರಡನೇ ಹಂತದ ಲಾಕ್‌ಡೌನ್‌ ಅವಧಿಯಲ್ಲಿ ಕೃಷಿ, ಕೈಗಾರಿಕೆ ಹಾಗೂ ಅಭಿವೃದ್ಧಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಸಡಿಲಿಸಲಾಗಿದ್ದು, ಕೆಲಸಕ್ಕೆ ಅವಕಾಶ ನೀಡಲಾಗಿದೆ. ಈ ಮೂಲಕ ಲಾಕ್‌ಡೌನ್ ಅವಧಿಯಲ್ಲಿ ರೈತರು ಮತ್ತು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಂತೆ ನೋಡಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ.

ಏನೆಲ್ಲಾ ಇರುವುದಿಲ್ಲ?

#ಲಾಕ್‌ಡೌನ್‌ ನಿಂದಾಗಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಮಾನಗಳು, ಎಲ್ಲಾ ರೀತಿಯ ರೈಲು ಸೇವೆಗಳು ಮತ್ತು ಬಸ್‌ ಸಂಚಾರ ಸೇವೆಯನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು ಮೇ 03ರ ವರೆಗೆ ಇದು ಮುಂದುವರೆಯುತ್ತದೆ.

#ಎಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಸ್ಥಗಿತ.

#ಧಾರ್ಮಿಕ ಕ್ಷೇತ್ರಗಳ ಸ್ಥಗಿತ ಮುಂದುವರೆಯಲಿದೆ.#ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗಿರುವ ಪ್ರದೇಶಗಳಿಗೆ ಹೊರಗಿನಿಂದ ಯಾರ ಪ್ರವೇಶಕ್ಕೂ ಅನುಮತಿ ಇಲ್ಲ. ಈ ಪ್ರದೇಶದಲ್ಲಿ ಕಾನೂನು ಕಠಿಣವಾಗಿರಲಿದ್ದು, ಮಾಲಿನ್ಯಕ್ಕೆ ಕಾರಣವಾಗುವವರ ವಿರುದ್ಧ ಕಠಿಣ ಕ್ರಮ.

#ಎಲ್ಲಾ ರೀತಿಯ ಸಾರ್ವಜನಿಕ ಸಮಾರಭಗಳಿಗೂ ತಡೆ.

#ಚಿತ್ರ ಮಂದಿರಗಳು, ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಈಜುಕೊಳ ಸೇರಿದಂತೆ ಎಲ್ಲಾ ಕ್ರೀಡಾ ಮತ್ತು ಮನರಂಜನಾ ಕ್ಷೇತ್ರಗಳು ತೆರೆಯಲಾಗುವುದಿಲ್ಲ.

# ಈ ಅವಧಿಯಲ್ಲಿ ಎಲ್ಲೇ ಯಾರೇ ಮೃತರಾದರೂ 20ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.

#ಟ್ಯಾಕ್ಸಿ ಸೇರಿದಂತೆ ಯಾವುದೇ ಖಾಸಗಿ ವಾಹನ ಸಾರಿಗೆಗೆ ಅವಕಾಶ ಇಲ್ಲ.

ಏನೆಲ್ಲಾ ಇರಲಿದೆ?

#ಎಲ್ಲಾ ಆಸ್ಪತ್ರೆಗಳು ತೆರೆದಿರಲಿವೆ. ಎಲ್ಲಾ ರೀತಿಯ ರೋಗಿಗಳಿಗೂ ಸೂಕ್ತ ಚಿಕಿತ್ಸೆ.

#ಆಸ್ಪತ್ರೆಗೆ ಸಂಬಂಧಿಸಿದ ಎಲ್ಲಾ ರೀತಿಯ ಲ್ಯಾಬ್‌, ಮೆಡಿಕಲ್ ಶಾಪ್ ಸೇರಿದಂತೆ ಎಲ್ಲವೂ ತೆರೆದಿರಲಿವೆ.

#ರೈತರು ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಂಪೂರ್ಣವಾಗಿ ತೊಡಗಲು ಅನುವು ಮಾಡಿಕೊಡಲಾಗಿದೆ.

#ರೈತರಿಗೆ ಪೂರಕವಾಗಿ ಗೊಬ್ಬರು, ಬೀಜ ಮತ್ತು ಕೃಷಿ ಸಲಕರಣೆಗಳನ್ನು ಮಾರಾಟ ಮಾಡುವ ಕಂಪೆನಿಗಳು ಕಾರ್ಯ ಆರಂಭಿಸಲು ಅವಕಾಶ ನೀಡಲಾಗಿದೆ.

#ಆಹಾರದ ಸರಪಳಿ ತುಂಡರಿಯದೆ ನೋಡಿಕೊಳ್ಳುವ ಸಲುವಾಗಿ ರೈತರಿಂದ ಪದಾರ್ಥಗಳನ್ನು ಕೊಂಡು ಮಾರುಕಟ್ಟೆಗೆ ಸಾಗಿಸುವ ಎಲ್ಲಾ ಮಾದರಿಯ ಸಂಪರ್ಕಕ್ಕೂ ಕೇಂದ್ರ ಹಸಿರು ನಿಶಾನೆ ನೀಡಿದೆ.

#ಗ್ರಾಮೀಣ ಭಾಗದಲ್ಲಿ ಎಂಎನ್‌ಆರ್‌ಇಜಿಎ (MNREGA) ಕೆಲಸಗಳಿಗೆ ಅನುಮತಿ. ಈ ಮೂಲಕ ಕೃಷಿ ಕೂಲಿಗಳಿಗೆ ಕೆಲಸ ನೀಡಬಹುದು.

#ಅಡಿಗೆ ಅನಿಲ ಪೂರೈಕೆ, ನೀರು ಸರಬರಾಜು ಹಾಗೂ ಶುಚಿ ಕೆಲಸದಲ್ಲಿ ತೊಡಗಿರುವವರಿಗೆ ಯಾವುದೇ ತೊಂದರೆ ಇಲ್ಲ.

#ಗೂಡ್ಸ್‌ ರೈಲು ಎಂದಿನಂತೆ ಕಾರ್ಯನಿರ್ವಹಿಸಲಿದೆ.

#ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

#IT ಉದ್ಯಮ ಶೇ.50 ರಷ್ಟು ಉದ್ಯೋಗಿಗಳ ಜೊತೆಗೆ ಕಚೇರಿಯಲ್ಲಿ ಎಂದಿನಂತೆ ಕಾರ್ಯಾರಂಭ ಮಾಡಲು ಅನುಮತಿ.

#ಗ್ರಾಮ ಪಂಚಾಯತಿ ಮಟ್ಟದ ಸರ್ಕಾರಿ ಕಚೇರಿಗಳನ್ನು ತೆರೆಯಲಾಗುವುದು.

#ವಿಶೇಷ ಆರ್ಥಿಕ ವಲಯದ ಅಡಿಯಲ್ಲಿ ಬರುವ ಎಲ್ಲಾ ಕೈಗಾರಿಕೆಗಳು ಹಾಗೂ ಆಹಾರ ಸಂರಕ್ಷಣಾ ಘಟಕಗಳು ಎಂದಿನಂತೆ ಕಾರ್ಯಾರಂಭ ಮಾಡಬಹುದು. ಆದರೆ, ಉದ್ಯೋಗಿಗಳನ್ನು ಸಾಮಾಜಿಕ ಅಂತರದ ನಿಮಯಮಗಳಿಗೆ ಅನುಸಾರವಾಗಿ ಕೈಗಾರಿಕೆಗಳಿಗೆ ಕರೆತರಬೇಕು. ಉತ್ತಮ ಸಾರಿಗೆ ವ್ಯವಸ್ಥೆ ನೀಡಬೇಕು.

#ರಸ್ತೆ, ನೀರಾವರಿ, ಕಟ್ಟಡ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಚಟುವಟಿಕೆಗಳಿಗೂ ಹಸಿರು ನಿಶಾನೆ.

#ಆರೋಗ್ಯ ಸೇವೆ ಸೇರಿದಂತೆ ತುರ್ತು ಸಂದರ್ಭದಲ್ಲಿ ಮಾತ್ರ ಖಾಸಗಿ ವಾಹನಗಳ ಓಡಾಡಕ್ಕೆ ಅವಕಾಶ.

#ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ರಕ್ಷಣಾ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಇಲಾಖೆ ಎಂದಿನಂತೆ ಕಾರ್ಯನಿರ್ವಹಿಸಲಿವೆ.

#ರಾಜ್ಯ ಸರ್ಕಾರದ ಪೊಲೀಸ್ ಇಲಾಕೆ, ಗೃಹ ರಕ್ಷಕ ದಳ, ಜಿಲ್ಲಾಡಳಿತ, ಖಜಾನೆ ಇಲಾಖೆಗಳು ಕಾರ್ಯ ನಿರ್ವಹಿಸುತ್ತವೆ.

ಈ ಮೇಲಿನ ಎಲ್ಲವೂ ಮುಂದಿನ 19 ದಿನಗಳ ಅವಧಿಯಲ್ಲಿ ಸಾರ್ವಜನಿಕರು ಏನು ಮಾಡಬೇಕು? ಏನು ಮಾಡುವಂತಿಲ್ಲ? ಮತ್ತು ಏನೆಲ್ಲಾ ಲಭ್ಯ-ಅಲಭ್ಯ? ಎಂಬ ಕುರಿತು ಮಾಹಿತಿಯಾಗಿದೆ. ಒಂದು ವೇಳೆ ಸಾರ್ವಜನಿಕರು ಈ ಎಲ್ಲಾ ನಿಯಮಗಳನ್ನು ಮೀರಿ ನಡೆದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : Lockdown Effects: ಲಾಕ್​ಡೌನ್ ಬಳಿಕ ಆಫೀಸ್​ನಲ್ಲಿ 12 ಗಂಟೆ ಕೆಲಸ ಕಡ್ಡಾಯ?; ಸುಗ್ರೀವಾಜ್ಞೆಗೆ ಸರ್ಕಾರ ಚಿಂತನೆ

 
First published: April 15, 2020, 9:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading