Narendra Modi Speech: ಎರಡನೇ ಹಂತದ ಲಾಕ್‌ಡೌನ್‌ಗೆ ಮುಂದಾದ ಕೇಂದ್ರ; ಹಾಟ್‌ ಸ್ಪಾಟ್‌ಗಳಲ್ಲಿ ಇನ್ನಷ್ಟು ಬಿಗಿ ಕ್ರಮ; ಮೋದಿ

ದೇಶದಲ್ಲಿ ಈಗಾಗಲೇ ಕೊರೋನಾ ಸೋಂಕು ಹರಡಿರುವುದನ್ನು ಪರಿಶೀಲಿಸಿ ಹಲವು ಭಾಗಗಳನ್ನು ಕೆಂಪು, ಹಳದಿ ಮತ್ತು ಹಸಿರು ವಲಯ ಎಂಬ ಮೂರು ಭಾಗಗಳನ್ನಾಗಿ ವಿಗಂಡಿಸಲಾಗಿದೆ. ಈ ವಲಯಗಳ ಆಧಾರದ ಮೇಲೆ ಲಾಕ್​ಡೌನ್ ಅನ್ನು ಯಾವ ರೀತಿ ಅನುಷ್ಠಾನಕ್ಕೆ ತರಬೇಕೆಂದು ನಿಶ್ಚಯಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ.

ಪ್ರಧಾನಿ ನರೇಂದ್ರ ಮೋದಿ.

  • Share this:
ಬೆಂಗಳೂರು (ಏಪ್ರಿಲ್‌  14); ದೇಶದಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 21 ದಿನಗಳ ಲಾಕ್‌ಡೌನ್ ಇಂದಿಗೆ ಮುಗಿಯುತ್ತಿದ್ದು, ಇಂದಿನಿಂದ ಮೇ 03 ರ ವರೆಗೆ ಎರಡನೇ ಹಂತದ ಲಾಕ್‌ಡೌನ್ ಜಾರಿಯಾಗಲಿದೆ. ಹಾಟ್‌ಸ್ಪಾಟ್‌ಗಳಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರದ ಘೋಷಣೆಗೂ ಮುನ್ನವೇ ಹಲವು ರಾಜ್ಯಗಳು ಲಾಕ್​ಡೌನ್​ಅನ್ನು ಏಪ್ರಿಲ್ 30ರವರೆಗೆ ವಿಸ್ತರಣೆ ಮಾಡಿವೆ. (ಓರಿಸ್ಸಾ, ಪಂಜಾಬ್, ಮಹಾರಾಷ್ಟ್ರ, ಪಶ್ಚಿಮಬಂಗಾಳ ಹಾಗೂ ತಮಿಳುನಾಡು). ಅಲ್ಲದೇ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಅವರು ನಡೆಸಿದ ವಿಡಿಯೋ ಸಂವಾದದ ವೇಳೆಯಲ್ಲಿಯೂ ಲಾಕ್​ಡೌನ್​ ವಿಸ್ತರಣೆ ಮಾಡುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಜ್ಞರು ಸಹ ಲಾಕ್​ಡೌನ್ ವಿಸ್ತರಣೆ ಅನಿವಾರ್ಯ ಎಂದು ಹೇಳಿರುವುದರಿಂದ ಮೇ 03 ರವರೆಗೆ ಲಾಕ್​ಡೌನ್​ ವಿಸ್ತರಿಸಲು ಪ್ರಧಾನಿ ಮೋದಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಹೇಗಿರಲಿದೆ ಎರಡನೇ ಹಂತದ ಲಾಕ್‌ಡೌನ್ ಸ್ವರೂಪ?:

ದೇಶದಲ್ಲಿ ಈಗಾಗಲೇ ಕೊರೋನಾ ಸೋಂಕು ಹರಡಿರುವುದನ್ನು ಪರಿಶೀಲಿಸಿ ಹಲವು ಭಾಗಗಳನ್ನು ಕೆಂಪು, ಹಳದಿ ಮತ್ತು ಹಸಿರು ವಲಯ ಎಂಬ ಮೂರು ಭಾಗಗಳನ್ನಾಗಿ ವಿಗಂಡಿಸಲಾಗಿದೆ. ಹೀಗೆ ಮೂರು ಭಾಗಗಳಾಗಿ ಗುರುತಿಸಲಾಗಿದ್ದಾಗಿಯೂ ಮುಂದಿನ ಒಂದು ವಾರಗಳ ಕಾಲ ಎಲ್ಲೆಡೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ.

ಹಸಿರು ಮತ್ತು ಹಳದಿ ವಲಯದಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗದಿದ್ದಲ್ಲಿ ಈ ಪ್ರದೇಶಗಳಿಗೆ ಮಾತ್ರ ವಿಶೇಷ ರಿಯಾಯಿತಿ ನೀಡಲಾಗುವುದು. ಅಲ್ಪ ಪ್ರಮಾಣದಲ್ಲಿ ಲಾಕ್‌ಡೌನ್‌ ಅನ್ನು ಸಡಿಲಿಸಲಾಗುವುದು.

ಇನ್ನೂ ಹಾಟ್‌ಸ್ಪಾಟ್‌ ಇರುವ ಪ್ರದೇಶಗಳಲ್ಲಿ ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳಲಾಗುವುದು. ಈ ಭಾಗದಿಂದ ಯಾರೂ ಹೊರ ಬರಲು ಅವಕಾಶ ಇಲ್ಲ. ಹೊಸ ಹಾಟ್‌ ಸ್ಪಾಟ್‌ಗಳು ಉದ್ಭವವಾಗದೆ ಇರಲು ಇಂತಹ ಕಠಿಣ ಕ್ರಮ ಅಗತ್ಯ. ಉಳಿದಂತೆ ಎಲ್ಲಾ ಕಡೆಗಳಲ್ಲಿ ದಿನಿತ್ಯದ ಬಳಕೆಯ ವಸ್ತುಗಳು ಲಭ್ಯವಾಗಲಿದೆ. ಈ ಕುರಿತು ಯಾರೂ ಚಿಂತಿಸುವ ಅಗತ್ಯ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

 

 

ಇದನ್ನೂ ಓದಿ : Sonia Gandhi: ಮೋದಿಗೂ ಮೊದಲು ಸೋನಿಯಾ ಗಾಂಧಿ ವಿಡಿಯೋ ಸಂದೇಶ; ಕೊರೋನಾ ಯೋಧರಿಗೆ ಥ್ಯಾಂಕ್ಸ್​ ಎಂದ ಕೈ ನಾಯಕಿ
First published: