HOME » NEWS » Coronavirus-latest-news » CENTRAL GOVERNMENT TO SDRF GRANT RELEASE 17 THOUSAND CRORE BUT KARNATAKA NAME IS NOT MANSION HK

ಮತ್ತೆ ಕರ್ನಾಟಕಕ್ಕೆ ಅನ್ಯಾಯ; ಹಣಕಾಸು ಇಲಾಖೆ ಬಿಡುಗಡೆ ಮಾಡಿದ 17 ಸಾವಿರ ಕೋಟಿಯಲ್ಲಿ ರಾಜ್ಯಕ್ಕೆ ನಯಾಪೈಸೆ ಇಲ್ಲ!

ಈ ಅನುದಾನವನ್ನು 14 ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಆದರೆ ಇದರಲ್ಲಿ ಕರ್ನಾಟಕವನ್ನು ಮಾತ್ರ ಕೇಂದ್ರ ಸರ್ಕಾರ ಮರೆತಿದೆ. ಒಟ್ಟು ಹಣಕಾಸು ಇಲಾಖೆಯಿಂದ ಇಂದು 17, 287.08 ಕೋಟಿ ಹಣ ಬಿಡುಗಡೆಯಾಗಿದೆ.

news18-kannada
Updated:April 3, 2020, 11:20 PM IST
ಮತ್ತೆ ಕರ್ನಾಟಕಕ್ಕೆ ಅನ್ಯಾಯ; ಹಣಕಾಸು ಇಲಾಖೆ ಬಿಡುಗಡೆ ಮಾಡಿದ 17 ಸಾವಿರ ಕೋಟಿಯಲ್ಲಿ ರಾಜ್ಯಕ್ಕೆ ನಯಾಪೈಸೆ ಇಲ್ಲ!
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಏ.03): ದೇಶದಲ್ಲಿ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಎಸ್​ಡಿಆರ್​ಎಫ್​​ ​​​ನಿಧಿಯಡಿ 11,092 ಕೋಟಿ ರೂಪಾಯಿ ಹಣ ಬಿಡುಗಡೆಗೆ ಗೃಹ ಇಲಾಖೆ ಅನುಮತಿ ನೀಡಿದೆ. ಇದರಲ್ಲಿ ಕರ್ನಾಟಕ್ಕೆ ನಯಾ ಪೈಸೆಯನ್ನು ಬಿಡುಗಡೆ ಮಾಡಿಲ್ಲ. ಈ ಮೂಲಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಮತ್ತೊಮ್ಮೆ ಅನ್ಯಾಯ ಮಾಡಿದೆ.

ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಕೇರಳ ಮಣಿಪುರ್, ಮೇಘಾಲಯ, ಮಿಜೋರಾಂ, ನಾಗಲ್ಯಾಂಡ್ ಪಂಜಾಬ್, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ, ಪಶ್ಚಿಮ ಬಂಗಾಳ ರಾಜ್ಯಗಳಿಗೆ ಅನುದಾನ ಹಂಚಿಕೆಗೆ ಅನುಮತಿ ನೀಡಲಾಗಿದೆ. ಆದರೆ, ಇದು 2020-21 ಅವಧಿಯ ಮೊದಲ ಕಂತಾಗಿ ಬಿಡುಗಡೆ ಮಾಡಲಾಗಿದೆ.

15 ಹಣಕಾಸು ಆಯೋಗದ ಶಿಫಾರಸ್ಸು ಮೇರೆಗೆ ಕೇಂದ್ರ ಹಣಕಾಸು ಇಲಾಖೆಯಿಂದ 6,195.08 ಕೋಟಿ ಮತ್ತು ಎನ್​ಡಿಆರ್​ಎಫ್​ ನಿಧಿಯಡಿ 11,092 ಕೋಟಿ ಹಣ ಬಿಡುಗಡೆ ಮಾಡಲಾಗಿದ್ದು, ಆದಾಯ ಕೊರತೆ ಅನುದಾನದಡಿ ಹಂಚಿಕೆ ಮಾಡಲಾಗಿದೆ. ಈ ಅನುದಾನವನ್ನು 14 ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಆದರೆ ಇದರಲ್ಲಿ ಕರ್ನಾಟಕವನ್ನು ಮಾತ್ರ ಕೇಂದ್ರ ಸರ್ಕಾರ ಮರೆತಿದೆ. ಒಟ್ಟು ಹಣಕಾಸು ಇಲಾಖೆಯಿಂದ ಇಂದು 17, 287.08 ಕೋಟಿ ಹಣ ಬಿಡುಗಡೆಯಾಗಿದೆ.

ಭಾರತದಲ್ಲಿ ಸುಮಾರು 2547 ಜನರಿಗೆ ಕೊರೋನಾ ಸೋಂಕು ಹರಡಿದ್ದು, ಸಾವಿನ ಸಂಖ್ಯೆ 62 ಮುಟ್ಟಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 393ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ : ಕೊರೋನಾ ವಿಷಯವಾಗಿ ಅಧಿಕಾರಿಗಳು, ಬೆಂಗಳೂರು ನಗರ ಸಚಿವರೊಂದಿಗೆ ಸಿಎಂ ನಡೆಸಿದ ಸಭೆಯ ಮುಖ್ಯಾಂಶಗಳು

ತಮಿಳುನಾಡಿನಲ್ಲಿ 316, ಕೇರಳದಲ್ಲಿ 315, ದೆಹಲಿ 231, ರಾಜಸ್ಥಾನ 170, ತೆಲಂಗಾಣ 116 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನ 18 ಹೊಸ ಪ್ರಕರಣಗಳು ವರದಿಯಾಗಿವೆ. ಈವರೆಗೆ ಮೂರು ಜನ ಸಾವನ್ನಪ್ಪಿದ್ದಾರೆ.
Youtube Video
 
First published: April 3, 2020, 11:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories