HOME » NEWS » Coronavirus-latest-news » CENTRAL GOVERNMENT SAYS NO VACCINE SHORTAGE BUT AT LEAST 8 STATES HAVE DEFERRED JABS FOR CRUCIAL AGE GROUP RHHSN

Vaccine Shortage: ಲಸಿಕೆ ಕೊರತೆಯಿಲ್ಲ ಎಂದು ಕೇಂದ್ರ ಹೇಳುತ್ತಿದೆ, ಆದರೆ ಲಸಿಕೆ ಅಭಿಯಾನ ಮುಂದೂಡಿದ 8 ರಾಜ್ಯಗಳು!

18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಅಭಿಯಾನ ಪ್ರಾರಂಭಿಸಲು ವಿಳಂಬವಾಗಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಲಸಿಕೆ ಆಮದಾದ ಬಳಿಕವೇ ಲಸಿಕೆ ಅಭಿಯಾನ  ಪ್ರಾರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.

news18-kannada
Updated:April 30, 2021, 7:48 PM IST
Vaccine Shortage: ಲಸಿಕೆ ಕೊರತೆಯಿಲ್ಲ ಎಂದು ಕೇಂದ್ರ ಹೇಳುತ್ತಿದೆ, ಆದರೆ ಲಸಿಕೆ ಅಭಿಯಾನ ಮುಂದೂಡಿದ 8 ರಾಜ್ಯಗಳು!
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ: ಕೇರಳ, ಪಂಜಾಬ್, ಗುಜರಾತ್, ಉತ್ತರಾಖಂಡ್, ಆಂಧ್ರಪ್ರದೇಶ, ದೆಹಲಿ ಹಾಗೂ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನಾ ಲಸಿಕೆ ಅಭಾವ ತಲೆದೋರಿದ್ದು, 18ರಿಂದ 44 ವರ್ಷದವರಿಗೆ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿವೆ. ದೇಶದಲ್ಲಿ ಮೂರನೇ ಹಂತದ ಲಸಿಕೆ ಅಭಿಯಾನ (18ರಿಂದ 44 ವರ್ಷದವರಿಗೂ) ಆರಂಭಕ್ಕೆ ಕೇವಲ 24 ಗಂಟೆ ಇರುವಾಗ ಲಸಿಕೆ ಅಭಾವ ತಲೆದೋರಿದೆ. 

ಲಸಿಕೆ ಅಭಾವದಿಂದ ಮಹಾರಾಷ್ಟ್ರ ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಲಸಿಕೆ ಅಭಿಯಾನವನ್ನು ನಿಲ್ಲಿಸಿದೆ. ಲಸಿಕೆ ಖಾಲಿಯಾಗಿರುವ ಕಾರಣ ಶುಕ್ರವಾರದಿಂದ ಮೂರು ದಿನಗಳವರೆಗೆ ಲಸಿಕೆ ಹಾಕುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ನಾಳೆಯಿಂದ 18ರಿಂದ 44 ವರ್ಷದವರಿಗೂ ಲಸಿಕೆ ಹಾಕುವ ಮಹಾಭಿಯಾನ ಆರಂಭವಾಗುವ ಮುನ್ನ ದಿನವೇ ಈ ಬೆಳವಣಿಗೆ ನಡೆದಿದೆ.

ಇದನ್ನು ಓದಿ: Corona Vaccine: 18-44 ವರ್ಷದೊಳಗಿನ ಜನರು ತಮಗೆ ಬೇಕಾದ ಲಸಿಕೆ ಆಯ್ಕೆ ಮಾಡಿಕೊಳ್ಳಬಹುದು: ಕೋವಿನ್ ಸಂಸ್ಥೆ ಮುಖ್ಯಸ್ಥ ಶರ್ಮಾ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಮಾತನಾಡಿ, ಮೇ 1ರಿಂದ ನೀಡಲು ಉದ್ದೇಶಿಸಿರುವ ವಯೋಮಾನದವರಿಗೆ ಲಸಿಕೆ ನೀಡಲು ಸಾಧ್ಯವಿಲ್ಲ. ಏಕೆಂದರೆ ಆ ವಯೋಮಾನದವರಿಗೆ ನೀಡಲು ಅಗತ್ಯವಿರುವ ಲಸಿಕೆ ಪ್ರಮಾಣ ಕೇಂದ್ರದಿಂದ ನಮಗೆ ಇನ್ನೂ ಬಂದಿಲ್ಲ ಎಂದು ಹೇಳಿದ್ದಾರೆ. ದೆಹಲಿಯ ಆರೋಗ್ಯ ಸಚಿವರು ಮಾತನಾಡಿ, ದೇಶದ ಅತ್ಯಂತ ಕೆಟ್ಟ ಕೋವಿಡ್ ಪೀಡಿತ ನಗರಗಳಲ್ಲಿ ಒಂದಾದ ದೆಹಲಿಯಲ್ಲಿ ಮೂರನೇ ಹಂತದ ಲಸಿಕೆ ಅಭಿಯಾನ ಆರಂಭಿಸಲು ಲಸಿಕೆ ಇಲ್ಲ. ಮತ್ತು ಖರೀದಿ ಆದೇಶಗಳನ್ನು ತಯಾರಕರ ಬಳಿ ಇಡಲಾಗಿದೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಸೀರಮ್‌ನಿಂದ 67 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಸಂಗ್ರಹಿಸಲಿದೆ. ಮತ್ತು ಮೂರು ಲಕ್ಷ ಡೋಸ್​ಗಳನ್ನು ಮೇ 3 ರೊಳಗೆ ತಲುಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Youtube Video

ಏತನ್ಮಧ್ಯೆ, 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಅಭಿಯಾನ ಪ್ರಾರಂಭಿಸಲು ವಿಳಂಬವಾಗಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಲಸಿಕೆ ಆಮದಾದ ಬಳಿಕವೇ ಲಸಿಕೆ ಅಭಿಯಾನ  ಪ್ರಾರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.

Published by: HR Ramesh
First published: April 30, 2021, 7:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories