ಸ್ಮಾರಕಗಳು ಹಾಗೂ ಮ್ಯೂಸಿಯಂಗಳ ಪ್ರವೇಶಕ್ಕಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ದೇಶದ್ಯಾಂತ ಸ್ಮಾರಕಗಳು ಹಾಗೂ ಮ್ಯೂಸಿಯಂಗಳನ್ನು ಪುನಾರಂಭ ಮಾಡುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಪುರಾತತ್ತ್ವ ಇಲಾಖೆಯು ಮಾರ್ಗಸೂಚಿ ಪ್ರಕಟಿಸಿದೆ

news18-kannada
Updated:July 5, 2020, 3:42 PM IST
ಸ್ಮಾರಕಗಳು ಹಾಗೂ ಮ್ಯೂಸಿಯಂಗಳ ಪ್ರವೇಶಕ್ಕಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜುಲೈ.05): ಅನ್ ಲಾಕ್ ಬಳಿಕ‌ ಒಂದೊಂದೇ ವಿಷಯಕ್ಕೆ ವಿನಾಯಿತಿ ಕೊಡಲಾಗುತ್ತಿದ್ದು ಜುಲೈ 6ನೇ ತಾರೀಖಿನಿಂದ ದೇಶದ್ಯಾಂತ ಸ್ಮಾರಕಗಳು ಹಾಗೂ ಮ್ಯೂಸಿಯಂಗಳನ್ನು ಪುನಾರಂಭ ಮಾಡುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಪುರಾತತ್ತ್ವ ಇಲಾಖೆಯು ಮಾರ್ಗಸೂಚಿ ಪ್ರಕಟಿಸಿದೆ.

ಪುರಾತತ್ತ್ವ ಇಲಾಖೆಯು ಮಾರ್ಗಸೂಚಿಯ ಸಂಪೂರ್ಣ ವಿವರಗಳು ಹೀಗಿವೆ:

* ಕಂಟೈನ್​​ಮೆಂಟ್ ಹೊರತಾದ ಪ್ರದೇಶಗಳಲ್ಲಿ ಮಾತ್ರ ಮ್ಯೂಸಿಯಂ, ಸ್ಮಾರಕಗಳನ್ನು ತೆರೆಯಬೇಕು.

* ಗೃಹ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

* ಕೌಂಟರ್ ಮೂಲಕ ಟಿಕೆಟ್ ನೀಡುವಂತಿಲ್ಲ, ಎಲ್ಲೆಡೆ ಇ - ಟಿಕೆಟ್ ವ್ಯವಸ್ಥೆ ಮಾಡಬೇಕು.

* ಕ್ಯಾಂಟಿನ್, ಪಾರ್ಕಿಂಗ್ ಪ್ರದೇಶಗಳಲ್ಲೂ ಡಿಜಿಟಲ್ ಪೇಮೆಂಟ್ ಕಡ್ಡಾಯ

* ಎಲ್ಲಾ ಕಡೆ ಸಾಮಾಜಿಕ ಅಂತರವನ್ನು ಕಾಪಾಡಬೇಕು.* ಮಾಸ್ಕ್ ಬಳಕೆಯನ್ನು ಕಡ್ಡಾಯ ಮಾಡಬೇಕು.

* ಸೋಂಕಿನ ಲಕ್ಷಗಳಿರುವ ವ್ಯಕ್ತಿಗಳಿಗೆ ಪ್ರವೇಶಾವಕಾಶ ಕಲ್ಪಿಸುವಂತಿಲ್ಲ.

* ಪ್ರವೇಶಕ್ಕೂ‌ ಮುನ್ನ ಕಡ್ಡಾಯವಾಗಿ ಥರ್ಮಲ್ ಸ್ಕಾನ್ ಮಾಡಬೇಕು.

* ಗ್ರೂಪ್ ಪೊಟೊಗಳನ್ನು ತೆಗೆಸಿಕೊಳ್ಳಲು ಅನುಮತಿ ಇರುವುದಿಲ್ಲ.

ಇದನ್ನೂ ಓದಿ :  ಡಿಸಿಎಂ ತವರಿನಲ್ಲಿ ಕೊರೋನಾಘಾತ ; ಒಂದು ವಾರದಲ್ಲಿ ಐವರ ಬಲಿ ಪಡೆದ ಕೊರೋನಾ

* ಸ್ಮಾರಕ ಅಥಾವ ಮ್ಯೂಸಿಯಂಗಳಲ್ಲಿ ಆಹಾರ ಪದಾರ್ಥಗಳ ಸೇವನೆಗೆ ಅವಕಾಶ ನಿರಾಕರಿಸಲಾಗಿದೆ.
Published by: G Hareeshkumar
First published: July 5, 2020, 3:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading