• Home
  • »
  • News
  • »
  • coronavirus-latest-news
  • »
  • ಕೊರೋನಾ ಎಫೆಕ್ಟ್​; ಕೇಂದ್ರ ಸರ್ಕಾರಿ ನೌಕರರಿಗೂ ಇನ್ನುಮುಂದೆ 3 ಶಿಫ್ಟ್​ನಲ್ಲಿ ಕೆಲಸ

ಕೊರೋನಾ ಎಫೆಕ್ಟ್​; ಕೇಂದ್ರ ಸರ್ಕಾರಿ ನೌಕರರಿಗೂ ಇನ್ನುಮುಂದೆ 3 ಶಿಫ್ಟ್​ನಲ್ಲಿ ಕೆಲಸ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸಾಧ್ಯವಾದಷ್ಟು ಕಡಿಮೆ ಜನ ಕಚೇರಿಯಲ್ಲಿರಬೇಕು. ಸಾಧ್ಯವಿರುವ ಕಡೆಗಳಲ್ಲೆಲ್ಲಾ ವರ್ಕ್ ಫ್ರಂ ಹೋಂ ವ್ಯವಸ್ಥೆ ಮಾಡಬೇಕು. ವರ್ಕ್ ಫ್ರಂ ಹೋಂ ಮಾಡುವ ನೌಕರರು ಫೋನ್ ಸ್ವಿಚ್ ಆಫ್ ಮಾಡುವಂತಿಲ್ಲ ಎಂಬ ನಿಬಂಧನೆಗಳನ್ನು ಹಾಕಲಾಗಿದೆ.

  • Share this:

ನವದೆಹಲಿ (ಮೇ 18): ದೇಶದೆಲ್ಲೆಡೆ 4ನೇ ಹಂತದ ಲಾಕ್​ಡೌನ್ ಜಾರಿಗೊಳಿಸಿ ಹೊಸ ಮಾರ್ಗಸೂಚಿ ಪ್ರಕಟಿಸಿರುವ ಕೇಂದ್ರ ಸರ್ಕಾರ ಈಗ ತನ್ನ ಸಿಬ್ಬಂದಿಯನ್ನು ಸಂಪೂರ್ಣವಾಗಿ ಕೆಲಸದಲ್ಲಿ ತೊಡಗಿಸಲು ಮುಂದಾಗಿದೆ. ಅದಕ್ಕಾಗಿ ಕಾರ್ಖಾನೆಗಳು ಮತ್ತು ಖಾಸಗಿ ಕಂಪನಿಗಳಲ್ಲಿ ‌ಇರುವ ರೀತಿ ಶಿಫ್ಟ್ ಅನ್ನು ಶುರು ಮಾಡುತ್ತಿದೆ. ಕಚೇರಿಯಲ್ಲಿ ಕೆಲಸವೂ ನಡೆಯಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಹೀಗಾಗಿ, ಸಾಮಾಜಿಕ ಅಂತರ ಕಾಯ್ದಕೊಳ್ಳುವ ದೃಷ್ಟಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಜನ ಕೆಲಸ ಮಾಡಬೇಕು ಎಂದು ಕೇಂದ್ರ ಆಡಳಿತ ಮತ್ತು ಸಿಬ್ಬಂದಿ ಇಲಾಖೆಯು ಕೇಂದ್ರ ಸರ್ಕಾರದ ನೌಕರರಿಗೆ ಪಾಳಿ ಪದ್ದತಿಯನ್ನು ಜಾರಿಗೊಳಿಸುತ್ತಿದೆ.


ಕೊರೋನಾ ಸೋಂಕು ಹರಡುವಿಕೆ ತಡೆಯಲು ಲಾಕ್​ಡೌನ್ ಜಾರಿಗೊಳಿಸಿದ್ದರಿಂದ 50 ದಿನಗಳಿಂದ ಕೇಂದ್ರ ಸರ್ಕಾರಿ ನೌಕರರು ಮನೆಯಲ್ಲೇ ಇದ್ದಾರೆ. ಕೆಲವರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಆದುದರಿಂದ ಈಗ ಕೂಡಲೇ ಕೆಲಸಕ್ಕೆ ಹಾಜರಾಗುವಂತೆ ಎಲ್ಲಾ ನೌಕರರಿಗೆ ಸೂಚನೆ ನೀಡಲಾಗಿದೆ. ಆದರೆ, ಏಕಕಾಲಕ್ಕೆ ಎಲ್ಲಾ ನೌಕರರು ಕಚೇರಿಗೆ ಆಗಮಿಸಿದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು 'ಶಿಫ್ಟ್ ತಂತ್ರ' ಅನುಸರಿಸಲಾಗುತ್ತಿದೆ.


ಇದನ್ನೂ ಓದಿ: ಉಡುಪಿ ಸ್ವರ್ಣಾ ನದಿ ಅಕ್ರಮ ಮರಳುಗಾರಿಕೆಯ ನಿಷ್ಪಕ್ಷಪಾತ ತನಿಖೆಯಾಗಲಿ; ಸಿದ್ದರಾಮಯ್ಯ ಆಗ್ರಹ


ಇದಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿರುವ ಕೇಂದ್ರ ಆಡಳಿತ ಮತ್ತು ಸಿಬ್ಬಂದಿ ಇಲಾಖೆ, ಸಾಧ್ಯವಾದಷ್ಟು ಕಡಿಮೆ ಜನ ಕಚೇರಿಯಲ್ಲಿರಬೇಕು. ಸಾಧ್ಯವಿರುವ ಕಡೆಗಳಲ್ಲೆಲ್ಲಾ ವರ್ಕ್ ಫ್ರಂ ಹೋಂ ವ್ಯವಸ್ಥೆ ಮಾಡಬೇಕು. ವರ್ಕ್ ಫ್ರಂ ಹೋಂ ಮಾಡುವ ನೌಕರರು ಫೋನ್ ಸ್ವಿಚ್ ಆಫ್ ಮಾಡುವಂತಿಲ್ಲ ಎಂಬ ನಿಬಂಧನೆಗಳನ್ನು ಹಾಕಿದೆ. ‌ ವಿಭಾಗದ ಮುಖ್ಯಸ್ಥರು ಕಚೇರಿ ಕೆಲಸದ ಮೇಲೆ ನಿಗಾ ಇಡಬೇಕು. ವಿಭಾಗದ ಮುಖ್ಯಸ್ಥರಾದವರು ಶೇ. 50ರಷ್ಟು ಜನ ಕಚೇರಿಯಲ್ಲಿ ಇರಲೇಬೇಕು. ಕೆಳಹಂತದ ನೌಕರರು 3 ಪಾಳಿಯಲ್ಲಿ ಕೆಲಸ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.


ಮೊದಲ ಶಿಫ್ಟ್ ಬೆಳಿಗ್ಗೆ 9ರಿಂದ ಸಂಜೆ 5.30ರವರೆಗೆ, ಎರಡನೇ ಪಾಳಿ ಬೆಳಿಗ್ಗೆ 9.30ರಿಂದ ಸಂಜೆ 6ರವರೆಗೆ ಮತ್ತು ಮೂರನೇ ಶಿಫ್ಟ್ ಬೆಳಿಗ್ಗೆ 10ರಿಂದ ಸಂಜೆ 6.30ರವರೆಗೆ ಎಂದು ತಿಳಿಸಿರುವ ಕೇಂದ್ರ ಆಡಳಿತ ಮತ್ತು ಸಿಬ್ಬಂದಿ ಇಲಾಖೆಯು ಹಾಜರಾತಿಯನ್ನು ಖಾತರಿ ಪಡಿಸುವುದು ಕಡ್ಡಾಯ ಎಂದು ಸೂಚಿಸಿದೆ.


ಇದನ್ನೂ ಓದಿ: ಕಾಲ್ನಡಿಗೆಯಲ್ಲಿ ಊರಿಗೆ ಹೊರಟ ವಲಸೆ ಕಾರ್ಮಿಕರು-ಪೊಲೀಸರ ನಡುವೆ ಘರ್ಷಣೆ

Published by:Sushma Chakre
First published: