ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಕೇಂದ್ರದಿಂದ ಸಿಹಿಸುದ್ದಿ; 2 ಸಾವಿರ ವಿಶೇಷ ಭತ್ಯೆ ಘೋಷಣೆ

ಆಶಾ ಕಾರ್ಯಕರ್ತರಿಗೆ ವಿಶೇಷ ಭತ್ಯೆ ಹೆಚ್ಚಿಸಿ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ ತಲಾ 2 ಸಾವಿರ ನೀಡುವುದಾಗಿ ಘೋಷಿಸಿದೆ. ಈ ವರ್ಷ ಜನವರಿ 1ನೇ ತಾರೀಕಿನಿಂದ ಮುಂದಿನ ಜುಲೈ 20ನೇ ತಾರೀಕಿನವರೆಗೂ ಆಯಾ ರಾಜ್ಯ ಸರ್ಕಾರಗಳು ಆಶಾ ಕಾರ್ಯಕರ್ತರಿಗೆ 2 ಸಾವಿರ ರೂ. ವಿಶೇಷ ಭತ್ಯೆ ನೀಡಿ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

news18-kannada
Updated:April 28, 2020, 6:46 PM IST
ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಕೇಂದ್ರದಿಂದ ಸಿಹಿಸುದ್ದಿ; 2 ಸಾವಿರ ವಿಶೇಷ ಭತ್ಯೆ ಘೋಷಣೆ
ಆಶಾ ಕಾರ್ಯಕರ್ತೆಯರು
  • Share this:
ನವದೆಹಲಿ(ಏ.28): ಕೊರೋನಾ ವೈರಸ್​ನಿಂದ ದೇಶದ ಜನರನ್ನು ಪಾರು ಮಾಡಲು ವೈದ್ಯರು ಮತ್ತು ಪೊಲೀಸರಂತೆಯೇ ಹಗಲು ರಾತ್ರಿಯೆನ್ನದೇ ಕೆಲಸದಲ್ಲಿ ತೊಡಗಿಸಿಕೊಂಡಿರುವ  ಆಶಾ ಕಾರ್ಯಕರ್ತೆಯರಿಗೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಕೋವಿಡ್​​-19 ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ವಿಶೇಷ ಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಆಶಾ ಕಾರ್ಯಕರ್ತರಿಗೆ ವಿಶೇಷ ಭತ್ಯೆ ಹೆಚ್ಚಿಸಿ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ ತಲಾ 2 ಸಾವಿರ ನೀಡುವುದಾಗಿ ಘೋಷಿಸಿದೆ. ಈ ವರ್ಷ ಜನವರಿ 1ನೇ ತಾರೀಕಿನಿಂದ ಮುಂದಿನ ಜುಲೈ 20ನೇ ತಾರೀಕಿನವರೆಗೂ ಆಯಾ ರಾಜ್ಯ ಸರ್ಕಾರಗಳು ಆಶಾ ಕಾರ್ಯಕರ್ತರಿಗೆ 2 ಸಾವಿರ ರೂ. ವಿಶೇಷ ಭತ್ಯೆ ನೀಡಿ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ಆಶಾ ಕಾರ್ಯಕರ್ತರ ಕೆಲಸವನ್ನು ಕೇಂದ್ರ ಸರ್ಕಾರ ಸ್ವಾಗತಿಸುತ್ತಾ ಬಂದಿದೆ. ಅಗತ್ಯದ ಸಂದರ್ಭದಲ್ಲಿ ದೇಶಕ್ಕಾಗಿ ದುಡಿಯುವುದೇ ನಿಜವಾದ ದೇಶಭಕ್ತಿ. ಆಶಾ ಕಾರ್ಯಕರ್ತರು, ನರ್ಸ್ ಗಳು, ಅಂಗನವಾಡಿ ಕಾರ್ಯಕರ್ತರು ನಿಜವಾದ ದೇಶಭಕ್ತರು. ಮುಖ್ಯವಾಹಿನಿಯಿಂದ ದೂರವುಳಿದು ಜನರ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ದೇಶವೇ ಹೊಗಳಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೋನಾ: ಸಾವಿನ ಸಂಖ್ಯೆ 20; ಒಟ್ಟು ಪ್ರಕರಣ 523; ಶೇ. 40 ಸೋಂಕಿತರು ಗುಣಮುಖ

ಭಯ ಹಾಗೂ ತಪ್ಪು ಮಾಹಿತಿಗಳು ವೈರಸ್​ಗಿಂತ ಅಪಾಯಕಾರಿಯಾಗಿರುವ ಪರಿಸ್ಥಿತಿಯಲ್ಲಿ ಆಶಾ ಕಾರ್ಯಕರ್ತರು ಜನರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
First published: April 28, 2020, 6:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading