HOME » NEWS » Coronavirus-latest-news » CBSE CLASS 10 AND 12 BOARD EXAMS TO BE HELD BETWEEN JULY 1 TO15 RH

ಜುಲೈ ಮೊದಲಾರ್ಧ ಅವಧಿಯಲ್ಲಿ ನಡೆಯಲಿವೆ ಸಿಬಿಎಸ್​ಇ 10, 12ನೇ ತರಗತಿ ಪರೀಕ್ಷೆಗಳು

ದೇಶದಲ್ಲಿ ಕೊರೋನಾ ವೈರಸ್​ ವ್ಯಾಪಕವಾಗಿ ಹರಡಲು ಆರಂಭವಾದ ಕಾರಣದಿಂದ ಮಾರ್ಚ್ 16ರಿಂದಲೇ ದೇಶದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಯಿತು. ಇದರಿಂದಾಗಿ ನಡೆಯಬೇಕಿದ್ದ ಪರೀಕ್ಷೆಗಳು ಸಹ ಮುಂದೂಡಿಕೆಯಾದವು.

news18-kannada
Updated:May 8, 2020, 6:18 PM IST
ಜುಲೈ ಮೊದಲಾರ್ಧ ಅವಧಿಯಲ್ಲಿ ನಡೆಯಲಿವೆ ಸಿಬಿಎಸ್​ಇ 10, 12ನೇ ತರಗತಿ ಪರೀಕ್ಷೆಗಳು
ಸಾಂದರ್ಭಿಕ ಚಿತ್ರ.
  • Share this:
ನವದೆಹಲಿ: ಸಿಬಿಎಸ್​ಇಯ 10 ಮತ್ತು 12ನೇ ತರಗತಿ ಪರೀಕ್ಷೆಗಳು ಕೊರೋನಾ ವೈರಸ್​ನಿಂದಾಗಿ ಮುಂದೂಡಿಕೆಯಾಗಿದ್ದು, ಜುಲೈ ಮೊದಲಾರ್ಧದ ಅವಧಿಯಲ್ಲಿ ಈ ತರಗತಿಗಳ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. 

ಪರೀಕ್ಷೆಗಳು ಯಾವಾಗ ನಡೆಯಲಿವೆ ಎಂದು ವಿದ್ಯಾರ್ಥಿಗಳು ತಾಳ್ಮೆಯಿಂದ ಕಾಯುತ್ತಿದ್ದಾರೆ. ಜುಲೈ 1ರಿಂದ 15ರವರೆಗೆ ಸಿಬಿಎಸ್​ಇಯ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ನಡೆಸಲು ಇಂದು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಪರೀಕ್ಷೆಯ ವೇಳಾಪಟ್ಟಿಯನ್ನು ಸವಿವರವಾಗಿ ಸಿಬಿಎಸ್​ಸಿ ನಂತರದಲ್ಲಿ ಪ್ರಕಟಿಸಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ದೇಶದಲ್ಲಿ ಕೊರೋನಾ ವೈರಸ್​ ವ್ಯಾಪಕವಾಗಿ ಹರಡಲು ಆರಂಭವಾದ ಕಾರಣದಿಂದ ಮಾರ್ಚ್ 16ರಿಂದಲೇ ದೇಶದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಯಿತು. ಇದರಿಂದಾಗಿ ನಡೆಯಬೇಕಿದ್ದ ಪರೀಕ್ಷೆಗಳು ಸಹ ಮುಂದೂಡಿಕೆಯಾದವು. ಅದಾದ ಬಳಿಕ ಮಾರ್ಚ್ 24ರಿಂದ ದೇಶವ್ಯಾಪಿ ಲಾಕ್​ಡೌನ್ ಘೋಷಣೆ ಮಾಡಲಾಗಿದ್ದು, ಇದೇ ತಿಂಗಳ 17ರವರೆಗೆ ಲಾಕ್​ಡೌನ್​ ಮುಂದುವರೆಯಲಿದೆ.

ಇದನ್ನು ಓದಿ: ನೀವು ಕ್ಯಾಬ್, ಆಟೋ ಚಾಲಕರಾಗಿದ್ದರೆ ಸರ್ಕಾರದಿಂದ ಘೋಷಣೆಯಾದ ರೂ. 5,000 ಪಡೆಯುವುದು ಹೀಗೆ
First published: May 8, 2020, 5:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading