• ಹೋಂ
 • »
 • ನ್ಯೂಸ್
 • »
 • Corona
 • »
 • CBSE: ಸಿಬಿಎಸ್‌ಇ 10, 12 ನೇ ತರಗತಿಯ ಆಫ್‌ಲೈನ್ ಪರೀಕ್ಷೆಗಳ ವೇಳಾಪಟ್ಟಿ ಇಂದು ಪ್ರಕಟ

CBSE: ಸಿಬಿಎಸ್‌ಇ 10, 12 ನೇ ತರಗತಿಯ ಆಫ್‌ಲೈನ್ ಪರೀಕ್ಷೆಗಳ ವೇಳಾಪಟ್ಟಿ ಇಂದು ಪ್ರಕಟ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಿಬಿಎಸ್‌ಇ ಮಂಡಳಿ ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಲೆಗಳಿಗೆ ಆಂತರಿಕ ಮೌಲ್ಯಮಾಪನ ಅಂಕಗಳನ್ನು ಸೂಚಿಸಲು ಸೂಚನೆ ನೀಡಿದ್ದು, ಹಿಂದಿನ ಮೂರು ವರ್ಷಗಳಲ್ಲಿ ಅತ್ಯಧಿಕ ಸರಾಸರಿ ಮತ್ತು ಫಲಿತಾಂಶ ಸಮಿತಿಯು ಅಂಕ ನಿರ್ಧಾರದ ಮೇಲೆ ಪ್ರತ್ಯೇಕ ನಿಯಮಗಳನ್ನು ಅನುಸರಿಸಿ ಅಂಕ ನೀಡಲಿದೆ ಎಂದು ತಿಳಿಸಿದೆ.

ಮುಂದೆ ಓದಿ ...
 • Share this:

  ಸಿಬಿಎಸ್‌ಇ (ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ) 2021ರ ಬೋರ್ಡ್ ಪರೀಕ್ಷೆಗಳ ವೇಳಾಪಟ್ಟಿಗಳ ಪಟ್ಟಿಯನ್ನು ಆಗಸ್ಟ್​ 10 ಅಂದರೆ ಇಂದು ಬಿಡುಗಡೆ ಮಾಡಲಿದ್ದು ಎಲ್ಲಾ ವಿದ್ಯಾರ್ಥಿಗಳ ಖಾಸಗಿ ಪರೀಕ್ಷೆಗಳ ಆಫ್‌ಲೈನ್ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಲಿದೆ. cbse.nic.in. ವೆಬ್‌ಸೈಟ್‌ನಲ್ಲಿ ಈ ವೇಳಾಪಟ್ಟಿ ಲಭ್ಯವಿರಲಿದೆ ಎಂದು ಸಂಸ್ಥೆ ತಿಳಿಸಿದೆ. 10 ನೇ ಹಾಗೂ 12 ನೇ ತರಗತಿಯ ಸುಧಾರಣೆ (ಇಂಪ್ರೂವ್‌ಮೆಂಟ್) ವಿಭಾಗ (ಕಂಪಾರ್ಟ್‌ಮೆಂಟ್) ಪರೀಕ್ಷೆಗಳು ಆಗಸ್ಟ್ 16 ರಿಂದ ಆರಂಭವಾಗಲಿದೆ ಎಂದು ತಿಳಿಸಿದೆ.


  ಸಿಬಿಎಸ್‌ಇ ಹಾಗೂ ಸಿಐಎಸ್‌ಸಿಇ (ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಕೌನ್ಸಿಲ್) ಸುಪ್ರೀಂ ಕೋರ್ಟ್‌ಗೆ ತಮ್ಮ ಪರೀಕ್ಷೆಗಳ ವೇಳಾಪಟ್ಟಿಯ ಮಾಹಿತಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ಸಿಬಿಎಸ್‌ಇ ಸಲ್ಲಿಸಿದ ವೇಳಾಪಟ್ಟಿಯ ಪ್ರಕಾರ, ಸಿಬಿಎಸ್‌ಇ ಪೋರ್ಟಲ್ ವಿದ್ಯಾರ್ಥಿಗಳಿಗೆ ನೋಂದಣಿಗಾಗಿ ಆಗಸ್ಟ್ 10ರಂದು ತೆರೆಯಲಾಗುತ್ತದೆ ಮತ್ತು ಪರೀಕ್ಷೆಗಳಿಗೆ ದಿನಾಂಕ ಪಟ್ಟಿಯನ್ನು ಘೋಷಿಸಲು ಸುತ್ತೋಲೆ ಹೊರಡಿಸಲಾಗುತ್ತದೆ. ಪರೀಕ್ಷೆಗಳು ಆಗಸ್ಟ್ 15ರಂದು ಆರಂಭವಾಗುತ್ತವೆ ಮತ್ತು ಕೊನೆಯ ಪರೀಕ್ಷೆ ಸೆಪ್ಟೆಂಬರ್ 15ರಂದು ನಡೆಯಲಿದೆ. ಫಲಿತಾಂಶಗಳನ್ನು ಸೆಪ್ಟೆಂಬರ್ 30ರಂದು ಘೋಷಿಸಲಾಗುತ್ತದೆ.


  ಸಿಐಎಸ್‌ಸಿಇ ಬೋರ್ಡ್ ಪರೀಕ್ಷೆಗಳು ಆಗಸ್ಟ್ 16ರಂದು ಆರಂಭವಾಗುತ್ತವೆ ಮತ್ತು 2021ರ ಸೆಪ್ಟೆಂಬರ್ 20ರ ಸುಮಾರಿಗೆ ಸುಧಾರಣಾ (ಇಂಪ್ರೂವ್‌ಮೆಂಟ್) ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ.


  ಎರಡು ಮಂಡಳಿಗಳು ನೀಡಿರುವ ಆಶ್ವಾಸನೆ ಆಧರಿಸಿ ಅರ್ಜಿದಾರರ (ವಿದ್ಯಾರ್ಥಿಗಳ) ಭಯದ ಕುರಿತು ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ. ಅಂತೆಯೇ ಪರೀಕ್ಷೆಗಳನ್ನು ನಡೆಸುವುದು ಹಾಗೂ ಫಲಿತಾಂಶಗಳನ್ನು ಘೋಷಣೆ ಮಾಡುವ ಕುರಿತು ಸಂಬಂಧಪಟ್ಟ ಮಂಡಳಿಗಳು ಜವಾಬ್ದಾರಿಯಾಗಿರುತ್ತವೆ ಎಂದು ನ್ಯಾಯಪೀಠ ವಿವರಿಸಿದೆ.


  ಪರೀಕ್ಷೆ ರದ್ದುಗೊಳಿಸಬೇಕು ಎಂಬ ವಿನಂತಿ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳು ಸಹಿ ಮಾಡುವ ಮೂಲಕ ಅರ್ಜಿ ಸಲ್ಲಿಸಿದ್ದರು. ಇನ್ನು ಮಂಡಳಿ ಪರೀಕ್ಷೆಯ ಸಮಯದಲ್ಲಿ ಯಾವುದೇ ತೊಂದರೆಯಾಗದಂತೆ, ಸೋಂಕಿನ ಕುರಿತು ಮುನ್ನೆಚ್ಚರಿಕೆ ವಹಿಸಿಕೊಂಡು ಪರೀಕ್ಷೆ ನಡೆಸುವುದಾಗಿ ಅಧಿಕೃತ ಸೂಚನೆಯಲ್ಲಿ ತಿಳಿಸಿದೆ. ಅದೇ ರೀತಿ ಕೋವಿಡ್ ಇರುವ ವಿದ್ಯಾರ್ಥಿಗಳಿಗೆ ಕೂಡ ಸಂವಹನ ನಡೆಸಿ ಪ್ರಾಯೋಗಿಕ ಪರೀಕ್ಷೆ ನಡೆಸುವುದಾಗಿ ಮಂಡಳಿ ಆಶ್ವಾಸನೆ ನೀಡಿದೆ.


  ವಿದ್ಯಾರ್ಥಿಗಳ ಅಂಕಗಳನ್ನು ಕಡಿಮೆ ಮಾಡಿರುವುದರಿಂದ ಬಾಧಿತ ವಿದ್ಯಾರ್ಥಿಗಳ ಅಂಕ ಕಡಿತದ ಕುರಿತು ಮಾಹಿತಿ ನೀಡುತ್ತಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ ಸಿಬಿಎಸ್‌ಇ ಮಂಡಳಿ ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಲೆಗಳಿಗೆ ಆಂತರಿಕ ಮೌಲ್ಯಮಾಪನ ಅಂಕಗಳನ್ನು ಸೂಚಿಸಲು ಸೂಚನೆ ನೀಡಿದ್ದು, ಹಿಂದಿನ ಮೂರು ವರ್ಷಗಳಲ್ಲಿ ಅತ್ಯಧಿಕ ಸರಾಸರಿ ಮತ್ತು ಫಲಿತಾಂಶ ಸಮಿತಿಯು ಅಂಕ ನಿರ್ಧಾರದ ಮೇಲೆ ಪ್ರತ್ಯೇಕ ನಿಯಮಗಳನ್ನು ಅನುಸರಿಸಿ ಅಂಕ ನೀಡಲಿದೆ ಎಂದು ತಿಳಿಸಿದೆ.


  ಇದನ್ನೂ ಓದಿ: CAA- NRC: ಎನ್​ಆರ್​ಸಿ ಅನುಷ್ಠಾನಗೊಳಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದ ಕೇಂದ್ರ ಸರ್ಕಾರ

  ಈ ಸಂದರ್ಭದಲ್ಲಿ ನ್ಯಾಯಾಲಯವು ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿರುವ ಸಂಬಂಧಿತ ಶಾಲೆಗಳ ಜವಾಬ್ದಾರಿ ಇದಾಗಿದ್ದು ಈ ವ್ಯವಸ್ಥೆಯು ಅರ್ಜಿದಾರರ ಸಮಸ್ಯೆಗಳನ್ನು ನಿವಾರಿಸಲಿದೆ ಎಂದು ಆದೇಶ ನೀಡಿದೆ. ಮಂಡಳಿಯು ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಹಿಂತಿರುಗಿಸುವ ತೀರ್ಮಾನ ರದ್ದುಗೊಳಿಸಿದ್ದು ಪರೀಕ್ಷೆ ನಡೆಸುವುದಾಗಿ ಆದೇಶ ಹೊರಡಿಸಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: