ಸಿಬಿಎಸ್ಇಯ 1ರಿಂದ 8ನೇ ತರಗತಿವರೆಗೆ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡುವಂತೆ ಎಚ್​ಆರ್​ಡಿ ಸಚಿವಾಲಯ ನಿರ್ದೇಶನ

CBSEBoard 2020: ಪ್ರಸ್ತುತ ದೇಶ ಕೋವಿಡ್-19 ಭೀಕರ ಪರಿಸ್ಥಿತಿಯನ್ನು ಎದುರಿಸಿತ್ತಿದೆ. ಈ ನಿಟ್ಟಿನಲ್ಲಿ ಒಂದರಿಂದ ಎಂಟನೇ ತರಗತಿಯ ಎಲ್ಲ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವಂತೆ ಸಿಬಿಎಸ್​ಇ ಆಡಳಿತ ಮಂಡಳಿಗೆ  ಸಲಹೆ ನೀಡುತ್ತೇನೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್​ ಹೇಳಿ ಸರಣಿ ಟ್ವೀಟ್ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಇಡೀ ದೇಶವನ್ನು ಏಪ್ರಿಲ್ 14ರವರೆಗೆ ಲಾಕ್​ಡೌನ್​ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಎಸ್​ಇ ಪಠ್ಯಕ್ರಮದ ಒಂದರಿಂದ ಎಂಟನೇ ತರಗತಿವರೆಗೆ ಎಲ್ಲರನ್ನು ಪಾಸ್ ಮಾಡುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಬುಧವಾರ ನಿರ್ದೇಶನ ನೀಡಿದೆ.

  ಪ್ರಸ್ತುತ ದೇಶ ಕೋವಿಡ್-19 ಭೀಕರ ಪರಿಸ್ಥಿತಿಯನ್ನು ಎದುರಿಸಿತ್ತಿದೆ. ಈ ನಿಟ್ಟಿನಲ್ಲಿ ಒಂದರಿಂದ ಎಂಟನೇ ತರಗತಿಯ ಎಲ್ಲ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವಂತೆ ಸಿಬಿಎಸ್​ಇ ಆಡಳಿತ ಮಂಡಳಿಗೆ  ಸಲಹೆ ನೀಡುತ್ತೇನೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್​ ಹೇಳಿ ಸರಣಿ ಟ್ವೀಟ್ ಮಾಡಿದ್ದಾರೆ.

  ಒಂಭತ್ತರಿಂದ ಹನ್ನೊಂದನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳನ್ನು ಪ್ರಾಜೆಕ್ಟ್, ಟೆಸ್ಟ್​ಗಳು, ಅವಧಿ ಪರೀಕ್ಷೆಗಳು ಸೇರಿದಂತೆ ನಿಯೋಜಿತ ಕಾರ್ಯಗಳ ಆಧಾರದ ಮೇಲೆ ಮುಂದಿನ ತರಗತಿಗೆ ಬಡ್ತಿ ನೀಡಬೇಕು. ಈ ಸಮಯದಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳು ಆನ್​ಲೈನ್​ ಅಥವಾ ಆಫ್​ಲೈನ್​ನಲ್ಲಿ ನೀಡುವ ಶಾಲಾ ಟೆಸ್ಟ್​ಗಳಿಗೆ ಹಾಜರಾಗಬಹುದು ಎಂದು ಸಚಿವರು ಸಲಹೆ ನೀಡಿದ್ದಾರೆ.     ಇದನ್ನು ಓದಿ: ಕೊರೋನಾ ವಿರುದ್ಧದ ಹೋರಾಟಕ್ಕೆ 1,125 ಕೋಟಿ ರೂ ಘೋಷಿಸಿದ ಅಜೀಂ ಪ್ರೇಮ್​ಜಿ ಫೌಂಡೇಶನ್ - ವಿಪ್ರೋ
  First published: