• Home
 • »
 • News
 • »
 • coronavirus-latest-news
 • »
 • ಪುತ್ತೂರಿನಲ್ಲಿ ಲಾಕ್ ಡೌನ್ ಘೋಷಿಸಿದಾಗಿನಿಂದಲೂ ಪೊಲೀಸರಿಗೆ ಅನ್ನಾಹಾರ ನೀಡುತ್ತಿರುವ ಅಡುಗೆ ಭಟ್ಟ

ಪುತ್ತೂರಿನಲ್ಲಿ ಲಾಕ್ ಡೌನ್ ಘೋಷಿಸಿದಾಗಿನಿಂದಲೂ ಪೊಲೀಸರಿಗೆ ಅನ್ನಾಹಾರ ನೀಡುತ್ತಿರುವ ಅಡುಗೆ ಭಟ್ಟ

ಪುತ್ತೂರಿನಲ್ಲಿ ಪೊಲೀಸರಿಗೆ ಆಹಾರ ನೀಡುತ್ತಿರುವ ದಿನೇಶ್ ಪೈ

ಪುತ್ತೂರಿನಲ್ಲಿ ಪೊಲೀಸರಿಗೆ ಆಹಾರ ನೀಡುತ್ತಿರುವ ದಿನೇಶ್ ಪೈ

ಜನರ ರಕ್ಷಣೆ ಮಾಡುವ ಪೋಲೀಸರಿಗೆ ಹಸಿವಿನ ಅನುಭವ ಆಗಬಾರದು ಎನ್ನುವ ಕಾರಣಕ್ಕಾಗಿ ಅವರು ಈ ಸೇವೆ ನಿರ್ವಹಿಸಿಕೊಂಡು ಬರುತ್ತಿದ್ದಾರೆ.

 • Share this:

  ಪುತ್ತೂರು: ದೇಶದಾದ್ಯಂತ ಕೊರೋನಾ ಹರಡಂತೆ ನಿಗ್ರಹಿಸಲು ಲಾಕ್​ಡೌನ್ ನಿರ್ಬಂಧಗಳನ್ನ ಹೇರಲಾಗಿದೆ. ಪೊಲೀಸರು ಹಗಲೂರಾತ್ರಿ ಶ್ರಮ ವಹಿಸಿ ಲಾಕ್ ಡೌನ್ ನಿಯಮ ಜಾರಿಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ತಮಗೆ ಸೋಂಕು ತಗುಲುವು ಅಪಾಯವಿದ್ದರೂ ರಸ್ತೆಗಿಳಿದು ಲಾಕ್​ಡೌನ್ ಅನ್ನು ಯಶಸ್ವಿಯಾಗಿ ಜಾರಿಗೆ ತರಲು ಪೋಲೀಸ್ ಇಲಾಖೆ ಶ್ರಮಿಸುತ್ತಿದೆ. ಇಂಥ ಪೋಲೀಸರಿಗೆ ಪ್ರತಿನಿತ್ಯ ಉಪಾಹಾರ ಪೂರೈಸುವ ಕಾರ್ಯದಲ್ಲಿ ಪುತ್ತೂರಿನ ವ್ಯಕ್ತಿಯೊಬ್ಬರು ನಿರತರಾಗಿದ್ದಾರೆ.


  ಕೆಟರಿಂಗ್ ವೃತ್ತಿ ನಡೆಸುತ್ತಿರುವ ಪುತ್ತೂರಿನ ದಿನೇಶ್ ಪೈ ಈ ರೀತಿ ಪೋಲೀಸರ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ದೇಶದಲ್ಲಿ ಲಾಕ್ ಡೌನ್ ಆರಂಭಗೊಂಡಂದಿನಿಂದಲೂ ದಿನೇಶ್ ಪೈ ಈ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ.


  ಕ್ಯಾಟರಿಂಗ್ ವೃತ್ತಿಯಿಂದಲೇ ಜೀವನ ನಿರ್ವಹಿಸುತ್ತಿರುವ ದಿನೇಶ್ ಕುಟುಂಬಕ್ಕೆ ಲಾಕ್ ಡೌನ್​ನಿಂದಾಗಿ ಯಾವುದೇ ಅದಾಯವಿಲ್ಲ. ಆದರೂ ಜನರ ರಕ್ಷಣೆ ಮಾಡುವ ಪೋಲೀಸರಿಗೆ ಹಸಿವಿನ ಅನುಭವ ಆಗಬಾರದು ಎನ್ನುವ ಕಾರಣಕ್ಕಾಗಿ ಅವರು ಈ ಸೇವೆ ನಿರ್ವಹಿಸಿಕೊಂಡು ಬರುತ್ತಿದ್ದಾರೆ.


  ಇದನ್ನೂ ಓದಿ: ಮಹಿಳೆಯರಿಗೆ ಉದ್ಯೋಗ; ವಾರಿಯರ್ಸ್​ಗೆ ಮಾಸ್ಕ್: ಕನಕಪುರದ ಕನಕಾಂಬರಿ ಮಹಿಳಾ ಒಕ್ಕೂಟಕ್ಕೆ ಶ್ಲಾಘನೆ


  ಪುತ್ತೂರಿನ ಸುಮಾರು 18 ಲಾಕ್​ಡೌನ್ ಚೆಕ್ ಪೋಸ್ಟ್​ನಲ್ಲಿ ಕಾರ್ಯನಿರ್ವಹಿಸುವ 50 ಕ್ಕೂ ಹೆಚ್ಚು ಪೋಲೀಸರಿಗೆ ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವೇಳೆಯಲ್ಲಿ ಆಹಾರ ನೀಡುವುದು ಇವರ ದೈನಂದಿನ ಕೆಲಸವೂ ಆಗಿಬಿಟ್ಟಿದೆ.


  ಇಂಥ ಸೇವಾಪರತೆಯ ವ್ಯಕ್ತಿಗಳಿಂದಲೇ ನಮ್ಮ ಸಮಾಜ ಯಾವತ್ತೂ ಮಾನವೀಯತೆ ಮತ್ತು ಜೀವಂತಿಕೆ ಉಳಿಸಿಕೊಂಡಿರುವುದು. ದಿನೇಶ್ ಪೈ ಅವರಂತೆ ತೆರೆಮರೆಯಲ್ಲಿದ್ದುಕೊಂಡು ಸೇವೆ ಮಾಡುತ್ತಿರುವ ಅದೆಷ್ಟೋ ಮಂದಿ ಇದ್ದಾರೆ. ಕೊರೋನಾ ವಾರಿಯರ್ಸ್ ಅವರಷ್ಟೇ ಗೌರವ ಇಂಥ ವ್ಯಕ್ತಿಗಳಿಗೂ ನೀಡಬೇಕಿದೆ.


  ವರದಿ: ಅಜಿತ್ ಕುಮಾರ್


  Published by:Vijayasarthy SN
  First published: