Cartoon Special - ಕೊರೋನಾ ವ್ಯಂಗ್ಯಚಿತ್ರ ಮೂಲಕ ಜಾಗೃತಿ: ಅಕ್ಕೂರು ರಮೇಶ್ ಕಾರ್ಯಕ್ಕೆ ಮೆಚ್ಚುಗೆ
Akkur Ramesh Corona Cartoon - ಎಚ್ಚರ ತಪ್ಪಿದರೆ ಕೊರೋನಾ ಹುಲಿಯಂತೆ ನಮ್ಮನ್ನ ಭೇಟಿಯಾಡಿ ತಿನ್ನುತ್ತದೆ ಎಂಬ ಸ್ಪಷ್ಟ ಸಂದೇಶ ರವಾನಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರಾಮನಗರ: ವಿಶ್ವದಲ್ಲಿಯೇ ಕೊರೋನಾ ವೈರಸ್ ಅಬ್ಬರ ಜೋರಾಗಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಸಹ ಕೊರೋನಾ ಕೇಕೆಹಾಕುತ್ತಿದೆ. ಆದರೆ ಸದ್ಯ ರಾಜ್ಯದಲ್ಲಿ ರಾಮನಗರ, ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ ಈವರೆಗೂ ಒಂದೇ ಒಂದು ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಹಾಗಂತ, ಇಲ್ಲಿಯ ಜನರು ಇದನ್ನ ನಿರ್ಲಕ್ಷ್ಯ ಮಾಡಬಾರದು. ಎಚ್ಚರಿಕೆಯಿಂದ ಇರಬೇಕೆಂದು ಹಿರಿಯ ವ್ಯಂಗ್ಯಚಿತ್ರ ಕಲಾವಿದರಾದ ಚನ್ನಪಟ್ಟಣದ ಅಕ್ಕೂರು ರಮೇಶ್ ತಿಳಿಹೇಳಿದ್ದಾರೆ. ತಮ್ಮ ಕೈಚಳಕದಲ್ಲಿ ಚಿತ್ರವೊಂದನ್ನ ರಚಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ತಮ್ಮ ವ್ಯಂಗ್ಯಚಿತ್ರದಲ್ಲಿ ಹುಲಿಗೆ ಕೊರೋನಾ ವೈರಸ್ ಹೋಲಿಸಿದ್ದಾರೆ. ರಾಮನಗರ, ಚಾಮರಾಜನಗರ ಜಿಲ್ಲೆಗಳನ್ನ ಜಿಂಕೆಗಳಿಗೆ ಹೋಲಿಸಿದ್ದಾರೆ. ಎಚ್ಚರ ತಪ್ಪಿದರೆ ಕೊರೋನಾ ಹುಲಿಯಂತೆ ನಮ್ಮನ್ನ ಭೇಟಿಯಾಡಿ ತಿನ್ನುತ್ತದೆ ಎಂಬ ಸ್ಪಷ್ಟ ಸಂದೇಶ ರವಾನಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇನ್ನು ಅಕ್ಕೂರು ರಮೇಶ್ ಒಬ್ಬ ಅತ್ಯುತ್ತಮ ವ್ಯಂಗ್ಯ ಚಿತ್ರಕಾರ. ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸುತ್ತಿರುವ ಅವರು ವಿಶೇಷಚೇತನರಾಗಿದ್ದರೂ ಸಹ ತಮ್ಮ ಅದ್ಭುತ ಕಲೆಯೊಂದಿಗೆ ಸಮಾಜವನ್ನ ಎಚ್ಚರಿಸುವ ಕೆಲಸದಲ್ಲಿ ಸದಾ ಮುಂದು. ಅದರಲ್ಲೂ ವಿಶ್ವದ ಜನರೇ ಕೊರೋನಾ ಮುಂದೆ ಮಂಡಿಯೂರಿರುವಾಗ ಅಕ್ಕೂರು ರಮೇಶ್ ಮಾತ್ರ ದಿನನಿತ್ಯ ತಮ್ಮ ಕಲೆಯ ಮೂಲಕ ಸಾರ್ವಜನಿಕರಿಗೆ ಒಂದಲ್ಲ ಒಂದು ರೀತಿ ಚಿತ್ರ ರಚಿಸಿ ಅರಿವು ಮೂಡಿಸುವ ಕೆಲಸ ಮಾಡ್ತಿದ್ದಾರೆ. ಹಾಗಾಗಿ ಅವರ ಈ ಸಾಮಾಜಿಕ ಕಳಕಳಿಗೆ ನ್ಯೂಸ್ 18 ಮೂಲಕ ಅವರಿಗೊಂದು ಸಲಾಂ.
ವರದಿ: ಎ.ಟಿ. ವೆಂಕಟೇಶ್
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ